ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ , ಉಡುಪಿ ತಾಲೂಕು ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಆಶ್ರಯದಲ್ಲಿ ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ  ಡಾI ಭಾಸ್ಕರಾನಂದ ಕುಮಾರ್, ಡಾI ನಳಿನಿ ಭಾಸ್ಕರಾನಂದ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022 

ಪ್ರಸ್ತುತ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ಹಿರಿಯ ಕೀಲು ಮತ್ತು ಮೂಳೆ ತಜ್ಞರಾಗಿರುವ ಇವರು ಈ ಹಿಂದೆ ಮಣಿಪಾಲದ ಕೆ.ಎಂ.ಸಿ ಯಲ್ಲಿ ಕೀಲು ಹಾಗೂ ಮೂಳೆರೋಗ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ಅಸ್ಥಿ ಚಿಕಿತ್ಸಾ ಪರಿಣತರಾಗಿ ದೇಶ ವಿದೇಶದಲ್ಲಿ ಸುವಿಖ್ಯಾತರು. ಬೆರಳು ಮೂಳೆ ಜೋಡಣೆ, ತುಂಡಾಗಿಬಿದ್ದ ಬೆರಳುಗಳ ಜೋಡಣೆ ಮಾಡುವ ಸಂಕೀಣ೯ ಶಸ್ರಕ್ರಿಯೆಯಲ್ಲಿ ಅವರದು ವಿಶೇಷ ಪರಿಣತಿ.

ಕೇವಲ ವೈದ್ಯಕೀಯ ಸೇವೆಯಲ್ಲದೆ, ಯಕ್ಷಗಾನವೇಷಧಾರಿಯಾಗಿ ಪ್ರಸಿದ್ದರಾಗಿದ್ದಾರೆ. ಮಧ್ಯವಯಸ್ಸಿನಲ್ಲಿ ಬಡಗುತಿಟ್ಟಿನ ಸಾಂಪ್ರದಾಯಿಕವಾದ ಹೆಜ್ಜೆ ಗಾರಿಕೆ ಮತ್ತು ವೇಷದ ನಡೆಗಳನ್ನು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವಣ೯ ರಿಂದ ಯಕ್ಷಗಾನ ಕಲಿತು ಬಡಗು ಮತ್ತು ತೆಂಕು ತಿಟ್ಟುಗಳ ವೇಷಧಾರಿಕೆಯಲ್ಲಿ ಸೈಯೆನಿಸಿಕೊಂಡವರು.

ಯಕ್ಷಗಾನ ಪ್ರಸಂಗ, ಸಾಹಿತ್ಯಮತ್ತು ಅವುಗಳಿಗೆ ಮೂಲವಾದ ಗ್ರಂಥಗಳ ಅಧ್ಯಯನ ಅವರ ಆಸಕ್ತಿಯ ಕ್ಷೇತ್ರ ‘ ಇವರ ಪರಶುರಾಮ ಹಾಗೂ ಹನುಮಂತನ ಅಭಿನಯ ಕಲಾಭಿಮಾನಿಗಳಲ್ಲಿ ಮರೆಯಲಾಗದ ಪಾತ್ರಗಳು.

ಸಾಹಿತ್ಯ ಸೇವೆ :- ಹಲವಾರು ವಷ೯ಗಳಿಂದ ಉಡುಪಿಯ ಪ್ರಸಿದ್ದ ತುಳುಕೂಟದ ಸ್ಥಾಪಕ ಅಧ್ಯಕ್ಷರಾಗಿ ಅದರ ಮೂಲಕ ಅನೇಕ ರಂಗ ಮತ್ತು ಸಾಹಿತ್ಯಕ್ಕೆ ಪೂರಕವಾದ ಕಾಯ೯ಕ್ರಮಗಳನ್ನು ನಡೆಸಿಕೊಟ್ಟಿರುತ್ತಾರೆ.
ತುಳು-ಕನ್ನಡ ಭಾಷೆಯಲ್ಲಿ ಹಲವು ಕೃತಿಗಳನ್ನು ರಚಿಸಿ ಸಾಹಿತಿಯಾಗಿಯೂ ಹೆಸರು ಮಾಡಿದ್ದಾರೆ. ಸಮಾಜ ಮುಖಿಯಾದ ವೈದ್ಯ, ಸಾಹಿತಿಯಾಗಿ ಅದೇ ರೀತಿ ಕೃಷಿಯಲ್ಲಿ ಕೂಡ ವಿಶೇಷ ಆಸಕ್ತಿ ಬೆಳೆಸಿರುವುದು ಅಭಿನಂದನೀಯ.

ಪತ್ನಿ ಡಾ” ನಳಿನಿ ಭಾಸ್ಕರಾನಂದ ಅವರು ಮಕ್ಕಳ ತಜ್ನೆಯಾಗಿ ಕೆ.ಎಂ.ಸಿ ಯಲ್ಲಿ ನಿವೃತ್ತಿ ಬಳಿಕ ಹೈಟೆಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ 3 ದಶಕಗಳಿಗಿಂತ ಹೆಚ್ಚಿನ ವೈದ್ಯಕೀಯ ಸೇವೆ ನಿಜಕ್ಕೂ ಅಭಿನಂದನೀಯ. ಹಲವು ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳು ಇವರ ಸಾಧನೆಗೆ ಸಿಕ್ಕ ಗೌರವ.

ಹೀಗೆ ಎಲ್ಲಾ ರಂಗದಲ್ಲಿಯೂ ಸೈಯನಿಸಿಕೊಂಡಿರುವ ಈ ವೈದ್ಯ ದಂಪತಿಗಳಿಗೆ ಇದೇ ಬರುವ ಜೂನ್ 30ರಂದು ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ 2:30ಕ್ಕೆ ನಡೆಯುವ ಸಮಾರಂಭದಲ್ಲಿ
ಗೌರವ ಪುರಸ್ಕಾರ 2022 ನ್ನು ನೀಡಿ ಗೌರವಿಸುತ್ತಿದ್ದೇವೆ.

~ ರಾಘವೇಂದ್ರ ಪ್ರಭು ಕರ್ವಾಲು

 
 
 
 
 
 
 
 
 
 
 

Leave a Reply