ವಿದ್ಯಾರ್ಥಿನಿಯರಿಗೆ ಹೂಡಿಕೆದಾರರ ಜಾಗೃತಿ ಶಿಬಿರ

ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಇಲ್ಲಿನ ವಾಣಿಜ್ಯ ವಿಭಾಗ, ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ ಮತ್ತು ಕೋಟೆಕ್ ಸೆಕ್ಯುರಿಟೀಸ್ ಇದರ ಜಂಟಿ ಆಶ್ರಯದಲ್ಲಿ ಅಂತಿಮ ಎಂ.ಕಾo ವಿದ್ಯಾರ್ಥಿನಿಯರಿಗೆ ಹೂಡಿಕೆದಾರರ
ಜಾಗೃತಿ ಶಿಬಿರ ಎರಡು ದಿನಗಳ ಕಾಲ ನಡೆಯಿತು. ಉದ್ಘಾಟಿಸಿದ ಸಂಪನ್ಮೂಲ ವ್ಯಕ್ತಿ ಡಾ. ರಾಧಕೃಷ್ಣ ಶರ್ಮ, ಪ್ರಾಧ್ಯಾಪಕರು, ಜಸ್ಟೀಸ್ ಕೆ.ಎಸ್ ಹೆಗ್ಡೆೆ ಇನ್‌ಸ್ಟಿಟ್ಯೂಟ್ ಆಫ್
ಮ್ಯಾನೇಜ್‌ಮೆಂಟ್, ನಿಟ್ಟೆ ಇವರು ಹೂಡೆದಾರರು ತೆಗೆದುಕೊಳ್ಳಬೇಕಾದ ಮುಂಜಾಗೃತೆ, ಸೆನ್ಸೆಕ್ಸ್, ನಿಫ್ಟಿ, ಕೆವೈಸಿ, ಮ್ಯುಚುವಲ್‌ಫಂಡ್, ಡಿಮ್ಯಾಟ್ ಖಾತೆಗಳ ಬಗ್ಗೆ ತರಬೇತಿ ನೀಡಿದರು.

ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ ಎಸ್., ಅಧ್ಯಕ್ಷತೆ ವಹಿಸಿದರು. ವಿದ್ಯಾರ್ಥಿ
ನಾಯಕಿ ಕು. ಆನ್ಸಿಟಾ ಉಪಸ್ಥಿತರಿದ್ದು 79 ವಿದ್ಯಾರ್ಥಿನಿಯರು ಶಿಬಿರದ
ಪ್ರಯೋಜನ ಪಡೆದರು. ಕಾರ್ಯಕ್ರಮ ಸಂಯೋಜಕ ಡಾ. ಉಮೇಶ್ ವiಯ್ಯ
ಪ್ರಸ್ತಾವನೆ ಗೈದರು. ವಿದ್ಯಾರ್ಥಿನಿಯರಾದ ಕು. ನಿಧಿ ಎನ್ ಪೈ ಕಾರ್ಯಕ್ರಮ ನಿರೂಪಿಸಿ, ಕು. ಅಕ್ಷತ ಸ್ವಾಗತಿಸಿದರು. ಕು. ಶ್ರೇಯ ಶ್ಯಾನ್ ಭೋಗ್ ಅತಿಥಿಗಳನ್ನು ಪರಿಚಯಿಸಿ, ಕು.
ಪ್ರೀತಿ ಎಂ ಆಚಾರ್ಯ ವಂದಿಸಿದರು.

 
 
 
 
 
 
 
 
 
 
 

Leave a Reply