ರ್ಯಾಗಿಂಗ್ ನಿಲ್ಲಿಸಲು ವಿದ್ಯಾರ್ಥಿನಿಯಂತೆ ಕಾಲೇಜಿಗೆ ಬಂದ ಲೇಡಿ ಪೊಲೀಸ್!

ಇಂದೋರ್ ಎಂಜಿಎಂ ವೈದ್ಯಕೀಯ ಕಾಲೇಜಿನ ರ್ಯಾಗಿಂಗ್ ಪ್ರಕರಣವನ್ನ ಮಧ್ಯಪ್ರದೇಶದ ಇಂದೋರ್ನ ಪೊಲೀಸರು ಅತ್ಯಂತ ಸಿನಿಮೀಯ ಶೈಲಿಯಲ್ಲಿ ಭೇದಿಸಿದ್ದಾರೆ. ಅಲ್ಲಿನ ಮಹಿಳಾ ಪೊಲೀಸ್ ಪೇದೆಯೊಬ್ಬರು ಖುದ್ದು ವಿದ್ಯಾರ್ಥಿನಿಯಂತೆ ನಟಿಸಿ ಪುಂಡರನ್ನು ಜೂನಿಯರ್ ಡಾಕ್ಟರ್ ಗಳು ಹಿಡಿದು ಹಾಕಿದ್ದಾರೆ. ವೈದ್ಯರಾಗಿ ಸಮಾಜ ಸೇವೆ ಮಾಡಬೇಕಾದ ಈ ಹುಡುಗರ ಹೀನ ಕೃತ್ಯವನ್ನು ಆಕೆ ಬಯಲಿಗೆ ಎಳೆದಿದ್ದಾರೆ. ಈಗ ಪತ್ತೆದಾರಿಕೆ ಮಾಡಿದ ಶಾಲಿನಿ ಚವ್ಹಾಣ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಫೇಮಸ್ ಆಗಿದ್ದಾರೆ.

ಮಧ್ಯಪ್ರದೇಶದ ಇಂದೋರ್ ಮೆಡಿಕಲ್ ಕಾಲೇಜಿನಲ್ಲಿ ರ್ಯಾಗಿಂಗ್ ನಡೆದಿರುವ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು, ಮೂರನೇ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹೊಡೆದು ಕಿರುಕುಳ ನೀಡುತ್ತಿದ್ದಾರೆ ಎಂದು ಸಹಾಯವಾಣಿಯ ಮೂಲಕ ದೂರು ಬಂದಿತ್ತು. ಇನ್ನು ಹಿರಿಯ ವಿದ್ಯಾರ್ಥಿಗಳು ಅಸ್ವಾಭಾವಿಕ ಸಂಭೋಗಕ್ಕೆ ಒತ್ತಾಯಿಸಿದ್ದಾರೆ ಎಂದು ರ್ಯಾಗಿಂಗ್ ಸಂತ್ರಸ್ತರು ಆರೋಪಿಸಿದ್ದಾರೆ. ಆದರೆ ದೂರು ಕೊಟ್ಟವರು ಯಾರೆಂದು ಯಾರಿಗೂ ತಿಳಿಯದಾಗಿತ್ತು. ದೂರುದಾರರ ಅವರ ಹೆಸರು, ದೂರವಾಣಿ ಸಂಖ್ಯೆ ಯಾವುದು ಕೂಡಾ ಇರಲಿಲ್ಲ, ಆದರೂ ಪೋಲೀಸರು ಸುಮ್ಮನೆ ಕೂರಲಿಲ್ಲ. ಪ್ರಕರಣದ ಸತ್ಯಾಸತ್ಯತೆ ಮತ್ತು ರ್ಯಾಗಿಂಗ್ ನಡೆಸಿದ್ದರೆ ಅದಕ್ಕೆ ಸಂಬಂಧಿಸಿದ ಸಾಕಷ್ಟು ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಲು ಪೊಲೀಸರು ಪೊಲೀಸ್ ಅಧಿಕಾರಿ ಮಿಸ್ ಶಾಲಿನಿ ಚೌಹಾಣ್ ಳನ್ನು ಪತ್ತೇದಾರಳಾಗಿ ನೇಮಿಸುತ್ತಾರೆ.

ಜತೆಗೆ ಸಹಾಯಕ್ಕಾಗಿ ಇನ್ನೊಬ್ಬ ಮಹಿಳಾ ಸಿಬ್ಬಂದಿಯನ್ನು ಕೂಡಾ ನರ್ಸ್ ವೇಷದಲ್ಲಿ ಕಳುಹಿಸಲಾಗಿತ್ತು. ಬಳಿಕ ಇನ್ನಿಬ್ಬರು ಕಾನ್‌ಸ್ಟೇಬಲ್‌ಗಳನ್ನು ಕ್ಯಾಂಟೀನ್ ಕೆಲಸಗಾರರಂತೆ ಕಾಲೇಜಿಗೆ ಕಳಿಸಿ, ಶಾಲಿನಿ ಚವ್ಹಾಣ್ ಗೆ ತನಿಖೆಯಲ್ಲಿ ಸಹಾಯ ಮಾಡಲು ಹೇಳಲಾಗಿತ್ತು.

ಆಗ ಶಾಲಿನಿ, ವೈದ್ಯಕೀಯ ವಿದ್ಯಾರ್ಥಿನಿಯ ಗೆಟಪ್ಪಿನಲ್ಲಿ ಎಂದು ಕಾಲೇಜಿಗೆ ಎಂಟ್ರಿ ಕೊಟ್ಟಿದ್ದಾರೆ. ನಂತರ ಕಾಲೇಜಿನಲ್ಲಿ ಸಾಕಷ್ಟು ಪರಿಚಯ ಮಾಡಿಕೊಂಡು 3 ತಿಂಗಳು ಅಲ್ಲೇ ವಾಸ ಮಾಡ್ತಾಳೆ. ಸಾಕ್ಷ್ಯ ಸಂಗ್ರಹಿಸಲು ಕಾಲೇಜಿನ ಕ್ಯಾಂಟೀನ್’ ನಲ್ಲಿ ಬಹು ಸಮಯವನ್ನು ಆಕೆ ಕಳೆಯುತ್ತಿದ್ದಳು. ಐದರಿಂದ ಆರು ಗಂಟೆ ಕಾಲ ಕ್ಯಾಂಟೀನ್ ನಲ್ಲೆ ಓದುವಂತೆ ನಟಿಸುತ್ತಾ, ಅಲ್ಲಿಗೆ ಬಂದು ಹೋಗುವವರ ನಡವಳಿಕೆಗಳನ್ನು ಓದುತ್ತಿದ್ದರು ಶಾಲಿನಿ. ಆ ಸಂದರ್ಭ ಅಲ್ಲಿನ ಕೆಲ ಹಿರಿಯ ವಿದ್ಯಾರ್ಥಿಗಳನ್ನು ಆಕೆ ಗುರುತಿಸಿದ್ದರು.

ಶಾಲಿನಿ ಆ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ನಡವಳಿಕೆಯನ್ನ ಗಮನಿಸಿದ್ದು, ಅವರ ನಡವಳಿಕೆಯು ಅಸಭ್ಯದ ಜತೆ ಆಕ್ರಮಣಕಾರಿಯಾಗಿರುವುದನ್ನು ಆಕೆ ಗಮನಿಸಿದ್ದಳು. ಅಲ್ಲಿ ನಡೆಯುತ್ತಿರುವ ಎಲ್ಲಾ ಆಗುಹೋಗುಗಳನ್ನು ಆಕೆ ತನ್ನ ಹಿರಿಯ ಅಧಿಕಾರಿಗಳಿಗೆ ಆಗಿಂದಾಗ್ಗೆ ವರದಿ ನೀಡುತ್ತಲೇ ಇದ್ದಳು. ಹಾಗೆ ಅಲ್ಲಿ ಆಕೆ ಒಟ್ಟು 10 ವಿದ್ಯಾರ್ಥಿಗಳನ್ನ ಗುರುತಿಸಿ, ಈಗ  ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 10 ವಿದ್ಯಾರ್ಥಿಗಳ ಪೈಕಿ 8 ಮಂದಿ ಜಾಮೀನು ಪಡೆದಿದ್ದಾರೆ. ಆದರೆ ಇದೀಗ ಪೊಲೀಸರು ಆರೋಪಿ ವಿದ್ಯಾರ್ಥಿಗಳ ವಿರುದ್ಧ ನ್ಯಾಯಾಲಯಕ್ಕೆ ಚಲನ್ ಸಲ್ಲಿಸಲಿದ್ದಾರೆ. ಇನ್ನು ವೈದ್ಯಕೀಯ ಕಾಲೇಜಿನ ಆಯಂಟಿ ರ್ಯಾಗಿಂಗ್ ಸೆಲ್ ಪ್ರಾಥಮಿಕ ವಿಚಾರಣೆ ನಡೆಸಿದ್ದು, ಆರೋಪ ನಿಜವೆಂದು ತಿಳಿದುಬಂದಿದೆ. ಬಳಿಕ ಸೂಕ್ತ ಕ್ರಮಕ್ಕಾಗಿ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಲಾಗಿದೆ.

 
 
 
 
 
 
 
 
 

Leave a Reply