ಗುರುವಂದನೆ~ ಕೆ.ಪುಂಡಲೀಕ ನಾಯಕ್, ಬೈಂದೂರು

ಗುರು ಪೂರ್ಣಿಮೆಯ ಶುಭದಿನದಲಿ
ಗುರು ಸ್ಮರಣೆ ಮಾಡುತಲಿ
ಮನಸಿನಲಿ ಭಜಿಸುತಲಿ
ಶಿರಬಾಗಿ ನಮಿಸುವೆನು ನಿನಗೆ
ಬದುಕು ಬೆಳಗಿಸು ಗುರುವೆ

ಮಮತೆಯಲಿ ಕೈ ತುತ್ತು ತಿನಿಸಿ
ನನ್ನ ತೊದಲ್ನುಡಿಗೆ ಮಾತು ಕಲಿಸಿ
ಮೊದಲ ಗುರುವಾದ ನನ್ನಮ್ಮನಿಗೆ
ಅನುದಿನವು ನಾ ಸ್ಮರಿಸುವೆ

ತಪ್ಪುಗಳ ತಿಳಿಹೇಳಿ ಒಪ್ಪುವ
ನುಡಿ ಪೇಳಿ ನಡೆನುಡಿಗಳಲಿ
ತನ್ನದೇ ಛಾಪು ಮೂಡಿಸಿದ
ಅಪ್ಪನೆಂಬ ಅಪ್ಪಟ ಗುರುವಿಗೆ
ಮನದುಂಬಿ ನಮಿಸುವೆ
ಅವರ ಮಾರ್ಗದಲಿ ಸಾಗುವೆ

ಅಕ್ಕರೆಯಲಿ ಅಕ್ಕರವ ಕಲಿಸಿದ
ಜೀವನ ಮೌಲ್ಯವನ್ನುಅರುಹಿದ
ತರಗತಿಯ ಕೋಣೆಯಲ್ಲೇ
ಪ್ರಪಂಚದ ಪರ್ಯಟನೆ ಮಾಡಿಸಿದ
ಗುರುವೃಂದರ ಪ್ರತಿ ಮಾತುಗಳಿಗೆ
ಬದುಕಿನಲಿ ನಿತ್ಯ ಸ್ಮರಿಸುವೆ.

ವೃತ್ತಿ ಮಾರ್ಗದಲಿ ದೀಪ ಹಿಡಿದು
ನೀತಿ ನಡತೆ ಬೆಳಗಿಸಿದ
ಅನ್ನ ನೀಡಿದ ಗುರುವರ್ಯರಿಗೆ
ಬದುಕಿನುದ್ದಕ್ಕೂ ನೆನೆವೆ

ಗುರುವೆಂದರೆ ಅದ್ಭುತ ಶಕ್ತಿ ಹೌದು
ಅರಿವು ನೀಡುವ ದಾರಿ ಬೆಳಕು…
ಕಲೆ ಸಾಹಿತ್ಯ ಸಂಸ್ಕೃತಿಗಳಲಿ
ಬೆನ್ನ ಹಿಂದಿನ ಬೆಳಕಾದ
ಸಾಹಿತ್ಯ ಮಹನಿಯರಿಗೆಲ್ಲ
ಎದೆತುಂಬಿ ಸ್ಮರಿಸುವೆ – ನಮಿಸುವೆ

ಸತ್ಸಂಗದಲಿ ಆಧ್ಯಾತ್ಮಿಕ
ಧಾರ್ಮಿಕ ಒಲವು ಮೂಡಿಸಿದ
ಹರಸಿ ಆಶೀರ್ವದಿಸಿದ
ಬದುಕಿನಲ್ಲಿ ನೆಮ್ಮದಿ ಮೂಡಿಸಿದ
ಆಧ್ಯಾತ್ಮಿಕ ಗುರುಗಳಿಗೆಲ್ಲ
ಸಾವಿರ ಸಾವಿರ ನಮನಗಳು

✍️ ಕೆ.ಪುಂಡಲೀಕ ನಾಯಕ್
ನಾಯ್ಕನಕಟ್ಟೆ, ಬೈಂದೂರು

Leave a Reply