ಗೊಂಬೆಯಾಟ ಗಂಧರ್ವ ಬೆಳಗಲ್ಲು ವೀರಣ್ಣ ಧಿವಶ

ಇಂಡೋನೇಶಿಯಾದಲ್ಲಿ  ರಾಮಾಯಣ ಗೊಂಬೆಯಾಟ ಪ್ರದರ್ಶನ ಮತ್ತು ಸ್ವೀಡನ್- ಶದಲ್ಲಿ ರಾಮಾಯಣ ಹಾಗೂ ಬಾಪುಕಥಾ ಮೂಲಕ ದೇಶ ವಿದೇಶಗಳಲ್ಲಿ ಕಲಾವಿದರಾಗಿ, ಸಾಂಸ್ಕೃತಿಕ ರಾಯಬಾರಿಗಳಾಗಿ ರಾಜ್ಯದ ಕಂಪೆನಿ  ನಾಟಕದ ನಟರಾಗಿ, ಗಾಯಕರಾಗಿ, ಖಳನಾಯಕನಿಂದ ಹಿಡಿದು ಸ್ತ್ರೀ ಪಾತ್ರಧಾರಿ ಹೀಗೆ ಹಲವು ಬಗೆಯ ರಂಗಚಟುವಟಿಕೆಗಳಲ್ಲಿ ಗಮನಸೆಳೆದಿದ್ದ ಗೊಂಬೆಯಾಟದ ಗಂಧರ್ವ ಇನ್ನಿಲ್ಲ. ಸಾಂಪ್ರದಾಯಕ ಗೊಂಬೆಯಾಟಲ್ಲಿ ಹೊಸಬದಲಾವಣೆಯನ್ನು ತಂದ ನಾಡೋಜ ಬೆಳಗಲ್ಲು ವೀರಣ್ಣ ರಸ್ತೆ ಅಪಘಾತದಲ್ಲಿ ವಿಧಿವಶರಾಗಿದ್ದಾರೆ.

ಶ್ರೀಯುತರ ಸಾಧನೆಗಳನ್ನು ಗಮನಿಸಿ ರಾಜ್ಯ ಸರಕಾರ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷತೆಯ  ಗೌರವ ಪದವಿ ಹಾಗೂ ವಿಶ್ವ ವಿದ್ಯಾಲಯದ ನಾಡೋಜ ಪ್ರಶಸ್ತಿ , ೨೦೦೦ನೇ ಇಸವಿಯ ಕರ್ನಾಟಕ ಜಾನಪದ ಪ್ರಶಸ್ತಿ, ಕೇಂದ್ರ ಸಂಗೀತನಾಟಕ ಅಕಾಡೆಮಿ ಪ್ರಶಸ್ತಿ, ಚೆನೈನ ದಕ್ಷಿಣಚಿತ್ರ ಕೊಡಮಾಡಲ್ಪಟ್ಟ ರಾಷ್ಟ್ರೀಯ ಪುರಸ್ಕಾರ ಶ್ರೇಷ್ಠ-ಕಲಾವಿದ ‘ವಿರುದು’ ಸನ್ಮಾನ ವನ್ನು  ಬೆಳಗಲ್ಲು ವೀರಣ್ಣ ಪಡೆದವರಾಗಿದ್ದರು. ಗೊಂಬೆಯಾಟ ಮೂಲಕ ವಿಶ್ವವ್ಯಾಪಿ ಗಮನ ಸೆಳೆದಿದ್ದರು.

ಹಿರಿಯ ರಂಗಕಲಾವಿದ ನಾಡೋಜ ಬೆಳಗಲ್ಲು ವೀರಣ್ಣನವರು ದಿನಾಂಕ ೨- ಪ್ರಿಲ್-೨೦೨೩ರಂದು ಪ್ರಯಾಣಿಸುತ್ತಿದ್ದ ಕಾರು ಚೆಳ್ಳೇಕೆರೆ  ಸಮೀಪ ಅಪಘಾತಕ್ಕೆ ಒಳಗಾಗಿ ವಿಧಿವಶರಾಗಿದ್ದಾರೆ, ಪುತ್ರ ಹನುಮಂತು ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದು ಚೇತರಿಸಿಕೊಳ್ಳುತ್ತಿರುವರು. ಶ್ರೀಯುತರು ಅಪಾರ ಅಭಿಮಾನಿಗಳನ್ನು ಅಗಲಿರುವರು, ಶ್ರೀರಾಮಾಂಜನೇಯ ತೊಗಲುಗೊಂಬೆ ಮೇಳ – ನಿರ್ದೇಶಕರಾಗಿ  ರಂಗಕರ್ಮಿಗಳಾಗಿ ಶ್ರಮಿಸಿದ ಕಲಾ ತಪಸ್ವಿ. ಬೆಳಗಲ್ಲು ಗರಾನದಲ್ಲಿ ಈಗ ಉಳಿದವರು ಹಿಂದೂಸ್ಥಾನಿ ಗವಾಯಿಗಳಾದ ಪದ್ಮಶ್ರೀ ವೆಂಕಟೇಶ್ ಕುಮಾರ್ ಹಾಗೂ  ಓರ್ವ ಪುತ್ರಿ ಮತ್ತು ನಾಲ್ಕುಜನ ಪುತ್ರರನ್ನೂ ಅಗಲಿರುವರು.

ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ-ಉಡುಪಿ ಎಸ್.ಎ.ಕೃಷ್ಣಯ್ಯ, ಸಹಕಾರಿ ರತ್ನ ಇಂದ್ರಾಳಿ ಜಯಕರ ಶೆಟ್ಟಿ ,ಪ್ರೊ. ಯು.ಸಿ. ನಿರಂಜನ, ಹಾಗೂ ಪ್ರೊ. ಎಮಿ ಕ್ಯಾಟಲಿನ್ (ಯು.ಎಸ್.ಎ.)  ಗೊಂಬೆಯಾಟ ವಿದ್ವಾಂಸ ಡಾ.ಗೋವಿಂದರಾಜು,   ಗೊಂಬೆ ಯಾಟ ಭಾಗವತ ಹಲ್ಲರೆ ಶಿವಬುದ್ದಿ, ಭಾವಪೂರ್ಣ ಸಂತಾಪ ವ್ಯಕ್ತಪಡಿಸಿರುವರು.

 
 
 
 
 
 
 
 
 
 
 

Leave a Reply