ಕೌಶಲಾಭಿವೃದ್ದಿಯಿಂದ ಮಹಿಳೆ ಯಶಸ್ವಿ: ಡಾ.ಗಿರಿಜಾ ರಾವ್

ಉಡುಪಿ: ಮಹಿಳೆಯರು ಮಹಿಳಾಭಿವೃದ್ಧಿ ಮತ್ತು ಕೌಶಲಾಭಿವೃದ್ದಿ ಚಟುವಟಿಕೆಗಳಲ್ಲಿ ತಮ್ಮನ್ನುಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ ಮಾತ್ರ ಸಮಾಜದಲ್ಲಿ ಯಶಸ್ವಿಯಾಗಲು ಸಾಧ್ಯಎಂದು ಮಣಿಪಾಲದ ಸೋನಿಯಾ​ ​ಕ್ಲಿನಿಕ್​ ವೈದ್ಯಾಧಿಕಾರಿ ಡಾ.ಗಿರಿಜಾರಾವ್ ಹೇಳಿದರು.

ಅವರು ಇಂದು ರೆಡ್‌ಕ್ರಾಸ್ ಭವನದಲ್ಲಿ ಭಾರತೀಯ​ ​ರೆಡ್‌ಕ್ರಾಸ್ ಸಂಸ್ಥೆ​ ​ಉಡುಪಿ ಜಿಲ್ಲಾ​ ​ಘಟಕ ಹಮ್ಮಿಕೊಂಡಿದ್ದ​ ​ಅಂತಾ​ರಾಷ್ಟ್ರೀಯ ಮಹಿಳಾ ದಿನಾಚರಣೆ​ ​ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.​ ರೆಡ್‌ಕ್ರಾಸ್ ಸಂಸ್ಥೆಯುಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಮಹಿಳೆಯರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ​ ಸಮಾಜದಲ್ಲಿ​ ​ಉತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಇಂತಹ ಸಂಸ್ಥೆಗಳಲ್ಲಿ ಮಹಿಳೆಯರು ತಮ್ಮನ್ನು ಪರಿಪೂರ್ಣವಾಗಿ ತೊಡಗಿಸಿ ಕೊಂಡಾಗ ಮಾತ್ರ ಸಮಾಜದ ಮುನ್ನೆಲೆಗೆ ಬರಲು ಸಾಧ್ಯವಾಗುತ್ತದೆ​ ​ಎಂದರು.

ಭಾರತೀಯ​ ​ರೆಡ್‌ಕ್ರಾಸ್ ಸಂಸ್ಥೆಯ​ ​ಅಧ್ಯಕ್ಷ​ ​ಡಾ.ತಲ್ಲೂರು ಶಿವರಾಂ ಶೆಟ್ಟಿ​ ​ಕಾಯಕ್ರಮದ​ ​ಅಧ್ಯಕ್ಷತೆ ಯನ್ನು ವಹಿಸಿ ಮಾತಾನಾಡಿ,​ ಪ್ರಸುತ್ತ ದಿನಗಳಲ್ಲಿ ಮಹಿಳಾ ಸಾಧಕಿಯರ ಸಾಧನೆಗಳು ಉತ್ತುಂಗ ಶಿಖರವನ್ನೇರಿದೆ.​ ​ಇಂತಹ ಸಾಧನೆ​​ಗೆ​ ​ಧೈರ್ಯ, ತಾಳ್ಮೆ,​ ಸಹನೆ, ಛಲದೊಂದಿಗೆ ದಿಟ್ಟ ಹೆಚ್ಚೆಯನ್ನಿಟ್ಟು ಮುನ್ನುಗ್ಗಿದ್ದರೆ ಮಾತ್ರ ಸಮಾಜದಲ್ಲಿ ಯಶ್ವಸಿಯಾಗಿ ಬದುಕು ಕಟ್ಟಿಕೊಳ್ಳಲು ಮತ್ತು​ ಗುರುತಿಸಿಕೊಳ್ಳಲು ಸಾಧ್ಯಎಂದರು.
 
  ಅಂತ​ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತವಾಗಿ ಭಾರತೀಯ​ ​ರೆಡ್​ ​‌ಕ್ರಾಸ್ ಸಂಸ್ಥೆಯು​ ​ಕೋಟ​ ​ಆರಕ್ಷಕ​ ​ಠಾಣೆಯ ಸಹಾಯಕ ಸಬ್‌​ ​ಇನ್ಸ್ಪೆಕ್ಟರಾದ ಮುಕ್ತ ಮಹೇಶ್​ ​‌ಅವರಿಗೆ ಸೇವಾ ಸಾಧಕಿ​ ​ಹಾಗೂ ಕ್ರೀಡಾ​ ​ಕ್ಷೇತ್ರದಲ್ಲಿ ಸಾಧನೆ​ ​ಗೈದ​ ​ದೈಹಿಕ ಶಿಕ್ಷಕಿ ಹಾಗೂ ಕ್ರೀಡಾ​ ​ತರಬೇತು ದಾರರಾದ ಶಾಲಿನಿ ಆರ್ ಶೆಟ್ಟಿಗೆ ಕ್ರೀಡಾ ಸೇವಾ ಸಾಧಕಿಎಂದು ಗುರುತಿಸಿ, ಪ್ರಶಸ್ತಿ ನೀಡಿ​​
ಸನ್ಮಾನಿಸಲಾಯಿತು.  

​ಕಾರ‍್ಯಕ್ರಮದಲ್ಲಿ​ ​ಜಿಲ್ಲಾ ಪಂಚಾಯತ್‌​ ​ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ವಿದ್ಯಾರತ್ನ​ ​ಕಾಲೇಜಿನ ವಿದ್ಯಾರ್ಥಿಗಳು ಹಾಗೂ​ ಉಪನ್ಯಾಸಕರು, ಮತ್ತಿತ್ತರು ಉಪಸ್ಥಿತರಿದ್ದರು.​ ಭಾರತೀಯ​ ​ರೆಡ್‌ಕ್ರಾಸ್ ಸಂಸ್ಥೆಯ​ ​ಉಪಾಧ್ಯಕ್ಷ​ ​ಡಾ. ಅಶೋಕ್​ ​‌ಕುಮಾರ್ ಸ್ವಾಗತಿಸಿ, ಡಾ.ಅರವಿಂದ್ ನಾಯ್ಕ್ಅಮ್ಮುಂಜೆ
ವಂದಿಸಿ, ಕೆ.ಜಯರಾಮ್ ಸಾಲಿಗ್ರಾಮ ನಿರೂಪಿಸಿದರು.
 
 
 
 
 
 
 
 
 
 
 

Leave a Reply