ಕುಕ್ಕಿಕಟ್ಟ: ಮನೆಯಲ್ಲಿ ನೇಣು ಬಿಗಿದುಕೊಂಡು ಆಶಾ ಶೆಟ್ಟಿ ಆತ್ಮಹತ್ಯೆ  

ಉಡುಪಿ:  ವಾಸದ ಮನೆಯಲ್ಲಿ ಮಹಿಳೆಯೊರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಕುಕ್ಕಿಕಟ್ಟೆಯಲ್ಲಿ  ಮಂಗಳವಾರ ನಡೆದಿದೆ. ಮೃತ ಮಹಿಳೆಯನ್ನು  ಆಶಾ ಶೆಟ್ಟಿ (48ವ.) ಎಂದು ಗುರುತಿಸಲಾಗಿದೆ.
ಇವರು ಬಿಜೆಪಿ ಜಿಲ್ಲಾ ಮಹಿಳಾ ಮೊರ್ಚಾದ ಕಾರ್ಯಕಾರಿಣಿ ಸದಸ್ಯೆ, ಹಾಗೂ ತುಳು ಕೂಟ, ಭಜನಾ ಮಂಡಳಿ, ಚಂಡೆ ಬಳಗ ಇವುಗಳಲ್ಲಿ ಸಕ್ರಿಯ ವಾಗಿದ್ದರೆಂದು ತಿಳಿದುಬಂದಿದೆ. 
ಮೃತಳ ಬಳಿ ಮರಣ ಪತ್ರ ಲಭ್ಯವಾಗಿದ್ದು, ಪತ್ರದಲ್ಲಿ ನೇತ್ರದಾನ ಮಾಡುವಂತೆ, ಹಾಗೂ ಇನ್ನಿತರ ವಿಷಯಗಳು  ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಕಣ್ಣುಗಳು ರಕ್ಷಿಸಿಡುವ ಪ್ರಕ್ರಿಯೆ ನಡೆಸಲು ಶವವನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
10 ವರ್ಷದ ಹಿಂದೆ ಮಗನನ್ನು ಕಳೆದುಕೊಂಡಿದ್ದ ದುಃಖವನ್ನ ತನ್ನವರೊಂದಿಗೆ ಯಾವಾಗಲೂ ಹೇಳಿಕೊಳ್ಳುತ್ತಾ, ಖಿನ್ನತೆಗೊಳಗಾಗಿದ್ದರು ಎಂದು ತಿಳಿದು ಬಂದಿದೆ. 
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಉಚಿತ ಅಂಬುಲೇನ್ಸ್ ಸೇವೆಯನ್ನು ಒದಗಿಸಿ ಇಲಾಖೆಗೆ ಸಹಕರಿಸಿದರು. 
ಘಟನಾ ಸ್ಥಳಕ್ಕೆ ಬಿಜೆಪಿ ಜಿಲ್ಲಾ ಮಹಿಳಾ ಮೊರ್ಚಾದ ಅಧ್ಯಕ್ಷೆ ವೀಣಾ ಎಸ್ ಶೆಟ್ಟಿ, ಕಾರ್ಯದರ್ಶಿ ರಕ್ಷಿತಾ ಶೆಟ್ಟಿ, ಹಾಗೂ ಮಲಬಾರ್ ಗೋಲ್ಡ್ ಆಭರಣ ಮಳಿಗೆಯ  ಹಫೀಜ್ ರೆಹಮಾನ್ ಆಗಮಿಸಿದ್ದರು.
  
 
 
 
 
 
 
 
 
 
 
 

Leave a Reply