ಫೇಸ್​ಬುಕ್​ ಫ್ರೆಂಡ್​ ರಿಕ್ವೆಸ್ಟ್ ಮೂಲಕ ​ಗಾಳ ಹಾಕುತ್ತಿದ್ದ ​ಕಾಮುಕ​ ಅರೆಸ್ಟ್. ​

ದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಯುವತಿಯರಿಗೆ ಹಾಗೂ ಅಪ್ರಾಪ್ತೆಯರಿಗೆ ಗಾಳ ಹಾಕುತ್ತಿದ್ದ ಕಾಮುಕನನ್ನು ಮಹಿಳಾ ಸಬ್​ಇನ್ಸ್​ಪೆಕ್ಟರ್ ಒಬ್ಬರು​ ಜಾಲತಾಣ ಮೂಲಕವೇ ಆರೋಪಿಯನ್ನು ಖೆಡ್ದಾಗೆ ​ಬೀಳಿಸಿ, ಕಂಬಿ ​ಎಣಿಸು ವಂತೆ ಮಾಡಿರುವ ವಿನೂತನ ಪ್ರಸಂಗ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ದೆಹಲಿಯ ಗ್ಲಾಸ್​ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಫೇಸ್​ಬುಕ್​ನಲ್ಲಿ ವಿವಿಧ ಹೆಸರಿನಲ್ಲಿ ಖಾತೆ ಗಳನ್ನು ತೆರೆದು ಯುವತಿಯರು ಮತ್ತು ಅಪ್ರಾಪ್ತೆಯರಿಗಾಗಿ ಬಲೆ ಬೀಸುತ್ತಿದ್ದ. ಬಲೆಗೆ ಬಿದ್ದವರನ್ನು ಲೈಂಗಿಕವಾಗಿ ಬಳಸಿಕೊಂಡು ಅವರಿಂದ ಕಣ್ಮರೆಯಾಗುತ್ತಿದ್ದ. ಇದೇ ರೀತಿ 16 ವರ್ಷದ ಹುಡುಗಿಯನ್ನು ಪರಿಚಯ ಮಾಡಿ ಕೊಂಡಿದ್ದ ಯುವಕ ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿ ಪರಾರಿ ಆಗಿದ್ದ.

ಗರ್ಭಿಣಿ ಆಗಿದ್ದ ಹುಡುಗಿ ಗರ್ಭಪಾತ ಮಾಡಿಸಲು ಆಸ್ಪತ್ರೆಗೆ ಹೋಗಿದ್ದಾಗ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲಿಸರು ಅಪ್ರಾಪ್ತೆಯ ವಿಚಾರಣೆ ನಡೆಸಿದಾಗ ಪೊಲೀಸರನ್ನು ನೋಡಿ ನಡೆದ ಘಟನೆಯನ್ನು ವಿವರಿಸಲು ಅಪ್ರಾಪ್ತೆ ಹಿಂಜರಿಯುತ್ತಿದ್ದಳು. ಆದರೆ, ಮಹಿಳಾ ಎಸ್​ಐ ಪ್ರಿಯಾಂಕಾ ಶೈನಿ ಅವರು ಮುಂದೆ ಬಂದು ಏನಾಯಿತು ಎಂದು ಆತ್ಮೀಯವಾಗಿ ಕೇಳಿದಾಗ ಅಪ್ರಾಪ್ತೆ ನಡೆದಿದ್ದನ್ನು ವಿವರಿಸಿದಳು.

ಆರೋಪಿ ನಮ್ಮ ಮನೆಯ ಹತ್ತಿರದಲ್ಲೇ ಇದ್ದ. ಫೇಸ್​ಬುಕ್​ ಮೂಲಕ ಇಬ್ಬರ ಪರಿಚಯವಾಗಿ ಸ್ನೇಹವೂ ಬೆಳೆ ಯಿತು. ಪರಸ್ಪರ ಮಾತುಕತೆಯನ್ನು ಆರಂಭಿಸಿದೆವು. ಮಾತುಕತೆ ಸಲುಗೆಗೆ ತಿರುಗಿ, ಕೆಲವು ದಿನಗಳ ಹಿಂದೆ ​ನಾವಿಬ್ಬರು ದೈಹಿಕವಾಗಿ ಹತ್ತಿರವಾದೆವು. ನಾನು ಗರ್ಭಿಣಿಯಾದ ಬಳಿಕ ಆತ ಕಣ್ಮರೆಯಾಗಿದ್ದ. ಆತನನ್ನು ಸಾಕಷ್ಟು ಹುಡುಕಾಡಿದೆ. ಆತ ಸಿಗಲೇ ಇಲ್ಲ. ಗರ್ಭಪಾತ ಮಾಡಿಸಲು ಸಾಕಷ್ಟು ಒದ್ದಾಡಿದೆ. ಆತ ನನಗೆ ಫೋನ್​ ನಂಬರ್​ ಸಹ ಕೊಡಲಿಲ್ಲ ಎಂದು ಸಂತ್ರಸ್ತೆ ಹೇಳಿಕೊಂಡಳು.

ಇದಾದ ಬಳಿಕ ಎಸ್​ಐ ಪ್ರಿಯಾಂಕಾ ಸುಮಾರು 100 ಫೇಸ್​ಬುಕ್​ ಪ್ರೋಫೈಲ್​ ಫೋಟೋಗಳನ್ನು ಅಪ್ರಾಪ್ತೆಗೆ ತೋರಿಸಿದರು. ಅದರಲ್ಲಿ ಆರೋಪಿಯು ಇದ್ದ. ಸಂತ್ರಸ್ತೆಯು ಸಹ ಆಕೆಯನ್ನು ಪತ್ತೆ ಹಚ್ಚಿದಳು. ಬಳಿಕ ಎಸ್​ಐ ಪ್ರಿಯಾಂಕಾ ಆತನ ಫೇಸ್​ಬುಕ್​ ಪರಿಶೀಲಿಸಿದಾಗ ಆತ ಅನೇಕ ಯುವತಿಯರಿಗೆ ವಂಚನೆ ಮಾಡಿರುವುದು ಬಯ ಲಾಗಿದೆ. ಆತನ ಬಗ್ಗೆ ತಿಳಿದ ಕೂಡಲೇ ಉಪಾಯವೊಂದನ್ನು ಮಾಡಿದ ಎಸ್​ಐ ಪ್ರಿಯಾಂಕಾ ನಕಲಿ ಫೇಸ್​ಬುಕ್​ ಖಾತೆಯನ್ನು ತೆರೆದು ಯುವತಿಯೊಬ್ಬಳ ಫೋಟೋ ಹಾಕಿ ಆರೋಪಿಗೆ ಫ್ರೆಂಡ್​ ರಿಕ್ವೆಸ್ಟ್​ ಕಳಿಸುತ್ತಾರೆ.

ರಿಕ್ವೆಸ್ಟ್​ ನೋಡುವ ಆರೋಪಿ ಯುವತಿ ಎಂದು ತಕ್ಷಣ ಅದನ್ನು ಸ್ವೀಕರಿಸುತ್ತಾನೆ. ತಕ್ಷಣ ಚಾಟ್​ ಮಾಡಲು ಆರಂಭಿಸುತ್ತಾನೆ. ಆರಂಭದಲ್ಲಿ ಫೋನ್​ ನಂಬರ್​ ಮತ್ತು ಅಡ್ರೆಸ್​ ನೀಡಲು ನಿರಾಕರಿಸುತ್ತಾನೆ. ವೈಯಕ್ತಿಕವಾಗಿ ನನ್ನನ್ನು ಭೇಟಿ ಆಗಬೇಕಾದರೆ ನನ್ನೊಂದಿಗೆ ನೀವು ಎಲ್ಲದರ ಬಗ್ಗೆ ಮಾತನಾಡಬೇಕು ಎಂದು ಷರತ್ತು ಹಾಕು ತ್ತಾನೆ. ಅದಕ್ಕೆ ಒಪ್ಪಿಗೆ ನೀಡಿದ ಬಳಿಕ ಆರೋಪಿ ತನ್ನ ಫೋನ್​ ನಂಬರ್​ ಕೊಡುತ್ತಾನೆ.

ಜುಲೈ 31ರಂದು ಭೇಟಿಯಾಗೋಣ ಎಂದು ಪ್ರಿಯಾಂಕಾ ಶೈನಿ ಹೇಳುತ್ತಾರೆ. ಅದರಂತೆ ಆರೋಪಿಯು ದೆಹಲಿ ಯ ದಶರಥಪುರಂ ರೈಲು ನಿಲ್ದಾಣಕ್ಕೆ ಸಂಜೆ 7-30 ಕ್ಕೆ ಆಗಮಿಸುತ್ತಾನೆ. ಅಷ್ಟರಲ್ಲಾಗಲೇ ಪ್ರಿಯಾಂಕಾ ಸಿವಿಲ್​ ಡ್ರೆಸ್​ನಲ್ಲಿ ನಿಲ್ದಾಣದಲ್ಲಿ ಹೊಂಚು ಹಾಕಿ ನಿಂತಿದ್ದರು. ಆದ್ರೆ ಆರೋಪಿ ತುಂಬಾ ಸ್ಮಾರ್ಟ್​ ಆಗಿದ್ದ. ರೈಲು ನಿಲ್ದಾಣ ದಿಂದ ಎಸ್ಕೇಪ್​ ಆದ ಆತ ತಕ್ಷಣ ಮಹಾವೀರ್​ ಎನ್​​ಕ್ಲೇವ್​ ​ಗೆ ​ಬರುವಂತೆ ಹೇಳಿದ. ಬಳಿಕ ಅಲ್ಲಿಗೆ ಹೋದ ಪ್ರಿಯಾಂಕ ಆರೋಪಿಯನ್ನು ಬಂಧಿಸಿದರು.

ಬಳಿಕ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿ​ದ್ದಾನೆ. ಕಳೆದ 15 ತಿಂಗಳಲ್ಲಿ 6 ಯುವತಿಯರಿಗೆ ಮೋಸ ಮಾಡಿರುವುದಾಗಿ ತಿಳಿಸಿದ್ದಾನೆ. ದೈಹಿಕ ಸಂಪರ್ಕ ಬೆಳೆಸುತ್ತಿದ್ದಂತೆ ಅವರಿಂದ ದೂರವಾಗುತ್ತಿದ್ದೆ ಎಂದು ಹೇಳಿದ್ದಾನೆ. ಎಲ್ಲರಿಗೂ ತನ್ನ ನಿಜವಾದ ಹೆಸರನ್ನು ಹೇಳದೇ ಮತ್ತು ಸರಿಯಾದ ಫೋನ್​ ನಂಬರ್​ ನೀಡದೆ ಆರೋಪಿ ವಂಚನೆ ಮಾಡುತ್ತಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

 
ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವ ಹುಡಿಗಿಯರೇ ಹುಷಾರ್.  
 
 
 
 
 
 
 
 
 
 
 

Leave a Reply