ಮಂಗಳೂರು ಭೂಮಿಕ ಟೆಕ್ಸ್ ಟೈಲ್​ನ ಮಾಲಕಿ ಉದ್ಯಮಿ ಸುಮಾ ಸತೀಶ್ ಆತ್ಮಹತ್ಯೆ

ಮಂಗಳೂರು ನಗರದ ಖ್ಯಾತ ಬಟ್ಟೆ ಉದ್ಯಮಿ ದೂಜ ಪೂಜಾರಿಯವರ ಸೊಸೆ ಭೂಮಿಕ ಟೆಕ್ಸ್ ಟೈಲ್​ನ ಮಾಲಕಿ ಉದ್ಯಮಿ ಸುಮಾ ಸತೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಮಾ ಅವರಿಗೆ ಕ್ಯಾನ್ಸರ್ ಪತ್ತೆಯಾಗಿದ್ದು, ಇದರಿಂದ ನೊಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗ್ತಿದೆ.

ಸಾವಿನ ನಿಖರ ಕಾರಣ ತಿಳಿದು ಬರಬೇಕಿದೆ. ಮಂಗಳೂರು ನಗರದ ಮಣ್ಣಗುಡ್ಡೆಯ ಅಭಿಮಾನ್ ಪ್ಯಾಲೇಸ್​​ನ ಫ್ಲ್ಯಾಟ್​​ನಲ್ಲಿ ವಾಸವಿದ್ದ ಸುಮಾ ಸತೀಶ್, ಫ್ಲ್ಯಾಟ್​​ನೊಳಗೆ ನೇಣು ಬಿಗಿದುಕೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply