Janardhan Kodavoor/ Team KaravaliXpress
27.6 C
Udupi
Saturday, July 2, 2022
Sathyanatha Stores Brahmavara

ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ,ಉಡುಪಿ ತಾಲೂಕು ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಆಶ್ರಯದಲ್ಲಿ

ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022

ಡಾII ರಾಮಚಂದ್ರ ಐತಾಳ
ಡಾII ಭಾಗ೯ವಿ ಐತಾಳ

ಹೆಬ್ರಿ ರಾಘವೇಂದ್ರ ಆಸ್ಪತ್ರೆಯ ಮುಖ್ಯಸ್ಥರಾಗಿರುವ ಇವರು ತಮ್ಮ ವಿಶಿಷ್ಟ ಆರೋಗ್ಯ ಸೇವೆಯ ಮೂಲಕ ಹೆಬ್ರಿ ಪರಿಸರದಲ್ಲಿ ಮನೆ ಮಾತಾಗಿದ್ದಾರೆ.

1980 ರಲ್ಲಿ ಗುಲ್ಬಗಾ೯ದಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿ ನಂತರ ಒಂದು ವಷ೯ಗಳ ಕಾಲ ಕಲ್ಕತ್ತಾದಲ್ಲಿ ಸೇವೆ ಸಲ್ಲಿಸಿ , ಗ್ರಾಮೀಣ ಬಡ ಜನರಿಗೆ ಆರೋಗ್ಯ ಸೇವೆ ನೀಡಬೇಕೆನ್ನುವ ಮಹದಾಸೆಯಿಂದ 1993 ರಲ್ಲಿ ಹೆಬ್ರಿಯಲ್ಲಿ ಶ್ರೀ ರಾಘವೇಂದ್ರ ನಸಿ೯oಗ್ ಹೋಮ್ ಸ್ಥಾಪನೆ ಮಾಡಿದರು.
5 ಬೆಡ್ ನಿಂದ ಪ್ರಾರಂಭಗೊಂಡ ಈ ಸಂಸ್ಥೆ ಈಗ ಸುಮಾರು 35 ಕ್ಕಿಂತ ಹೆಚ್ಚು ಬೆಡ್ ಸೇರಿದಂತೆ ಸುಸಜ್ಜಿತವಾದ ಆಸ್ಪತ್ರೆಯಾಗಿ ಹೊರಹೊಮ್ಮಿದೆ.

2006 ರಲ್ಲಿ ಅಂದಿನ ವಿಧಾನ ಪರಿಷತ್ ಸದಸ್ಯರಾದ ಡಾi ವಿ.ಎಸ್ ಆಚಾಯ೯ ರವರಿಂದ ಉದ್ಘಾಟನೆಗೊಂಡ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವಾರು ಜನಪಯೋಗಿ ಕಾಯ೯ಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ವೈದ್ಯಕೀಯ ತಪಾಸಣಾ ಶಿಬಿರ, ನೇತ್ರ ತಪಾಸಣೆ ಚಿಕಿತ್ಸಾ ಶಿಬಿರ ಹಾಗೂ ಬಡ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾಥಿ೯ ವೇತನ ನೀಡುತ್ತಾ ಬಂದಿದ್ದಾರೆ.

ಸಾಹಿತ್ಯ ಸೇವೆ: ಡಾII ಭಾಗ೯ವಿ ಐತಾಳ ಇವರು ಕಲೆ, ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಹಲವಾರು ಕಥೆ, ಕವನ , ಪ್ರವಾಸ ಕಥೆಯನ್ನು ಬರೆದಿದ್ದು, ಮುಂದಿನ ದಿನಗಳಲ್ಲಿ ಪುಸ್ತಕ ರೂಪದಲ್ಲಿ ಹೊರತರುವ ಚಿಂತನೆಯಲ್ಲಿದ್ದು, ಅಮೃತ ಭಾರತಿ ಶಿಕ್ಷಣ ಸಂಸ್ಥೆಗಳ ಟ್ರಸ್ಟಿಯಾಗಿ ಕಾಲೇಜಿನಲ್ಲಿ ನಿರಂತರವಾಗಿ ಕಲೆ, ಸಾಹಿತ್ಯ, ಕನ್ನಡ ಪರ ಚಟುವಟಿಕೆ ನಡೆಯುವಲ್ಲಿ ಅವರ ಪಾತ್ರ ಹಿರಿದಾಗಿದೆ. ಕಾಲೇಜು ಹಾಗೂ ಲಯನ್ಸ್ ಸಮ್ಮೇಳನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರ ಹಾಗೂ ನಾಟಕಗಳಲ್ಲಿ ನಟಿಯಾಗಿ ಪಾತ್ರ ನಿರ್ವಹಿಸಿದ್ದಾರೆ

ಸಮಾಜ ಸೇವೆ :-
ಹೆಬ್ರಿಯ ಪ್ರತಿಷ್ಠಿತ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸುಮಾರು 25 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸಮಾಜಮುಖಿ ಕಾಯ೯ಗಳು ನಡೆಸಿ ಕೊಟ್ಟಿರುತ್ತಾರೆ.

ನಿರಂತರವಾಗಿ ನಡೆಯುತ್ತಿರುವ ಸ್ವಚ್ಚತಾ ಅಭಿಯಾನ, ಆರೋಗ್ಯ ಶಿಬಿರ ,ಬಡ ರೋಗಿಗಳ ದತ್ತು ಸ್ವೀಕಾರ, ವೃದಾಶ್ರಮ ನಡೆಸುತ್ತಿರುವುದು ಇವರ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು.

ಅಹ೯ವಾಗಿ ಇವರಿಗೆ ಲಯನ್ಸ್ ನಿಂದ ಅಂತರಾಷ್ಟ್ರೀಯ ಪುರಸ್ಕಾರಗಳು ಬಂದಿವೆ. ಇವರ ಸಮಾಜ ಸೇವೆಯ ಜೊತೆಗೆ ಪ್ರಕೃತಿಯ ಆರಾಧನೆ ಅಂದರೆ ಗಿಡ ನೆಡುವ ಕಾಯ೯ ನಿರಂತರವಾಗಿ ನಡೆಯುತ್ತಿದೆ. ಈ ಎಲ್ಲಾ ಸಾಧನೆಗೆ ಪ್ರತಿಫಲ ದಂತೆ ಕ .ಸಾ.ಪ ಜಿಲ್ಲಾ ಸಾಹಿತ್ಯ ಸಮ್ಮೇಳನ ದ ಗೌರವ ಪುರಸ್ಕಾರ ,ಕೃಷ್ಣಾನುಗ್ರಹ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಅವರನ್ನು ಅರಸಿಕೊಂಡು ಬಂದಿವೆ.
ಹಲವು ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳು ಇವರ ಸಾಧನೆಗೆ ಸಿಕ್ಕ ಗೌರವ.

ಹೀಗೆ ಎಲ್ಲಾ ರಂಗದಲ್ಲಿಯೂ ಸೈಯನಿಸಿಕೊಂಡಿರುವ ಈ ಸಮಾಜ ಮುಖಿ ವೈದ್ಯ ದಂಪತಿಗಳಿಗೆ ಇದೇ ಬರುವ ಜೂನ್ 30ರಂದು ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ 2:30ಕ್ಕೆ ನಡೆಯುವ ಸಮಾರಂಭದಲ್ಲಿ
ಗೌರವ ಪುರಸ್ಕಾರ 2022 ನ್ನು ನೀಡಿ ಗೌರವಿಸುತ್ತಿದ್ದೇವೆ.

🖋️ ರಾಘವೇಂದ್ರ ಪ್ರಭು ಕರ್ವಾಲು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!