ಈಶ್ವರಪ್ಪನವರ ಹರಕು ನಾಲಿಗೆಯ 40 ಪರ್ಸೆಂಟ್ ಕಮಿಷನ್ ದಂಧೆಯ ರಾಜಕಾರಣಕ್ಕೆ ಬೆದರಿ ಸಂತೋಷ್ ಪಾಟೀಲ್ ಆತ್ಮಹತ್ಯೆ -ಉಡುಪಿ ಜಿಲ್ಲಾ ಕಾಂಗ್ರೆಸ್

ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪನವರ ಹರಕು ನಾಲಿಗೆಯ 40 ಪರ್ಸೆಂಟ್ ಕಮಿಷನ್ ದಂಧೆಯ ರಾಜಕಾರಣಕ್ಕೆ ಬೆದರಿ ಬೆಳಗಾವಿಯ ಹಿಂಡಲಗಾ ನಿವಾಸಿ ಜನಪರ ಚಿಂತನೆಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಆತನೆ ಪತ್ರಿಕೆಯವರಿಗೆ ಬರೆದಿಟ್ಟ ಮರಣ-ಪತ್ರದಿಂದ ಋಜುವಾತಾಗಿದೆ. ಆ ನೆಲೆಯಲ್ಲಿ ಅವರನ್ನು ಸಚಿವ ಸಂಪುಟದಿಂದ ಕೂಡಲೇ ವಜಾಗೊಳಿಸಿ ಸರಕಾರ ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.
ಈಗಾಗಲೇ ರಾಜ್ಯದ ಗುತ್ತಿಗೆದಾರರ ಸಂಘದ ಪ್ರಮುಖರು ಈ ಸರಕಾರದ 40 ಪರ್ಸೆಂಟ್ ಕಮಿಷನ್ ದಂಧೆಯ ಬಗ್ಗೆ ಪ್ರಧಾನಿ ಮೋದಿಯವರಿಗೆ ದೂರು ನೀಡಿದ್ದು ಅವರಲ್ಲಿ ಬಿಜೆಪಿಯ ಕಟ್ಟಾ ಕಾರ್ಯಕರ್ತ ಸಂತೋಷ್ ಪಾಟೀಲ್ ಕೂಡ ಒಬ್ಬರಾಗಿದ್ದರು. ಮೋದೀಜಿ ಯವರಿಂದ ಅವರಿಗೆ ನ್ಯಾಯ ಸಿಕ್ಕಿರಲಿಲ್ಲ. ಮೋದೀಜಿಗೆ ದೂರು ನೀಡಿದ ತಪ್ಪಿಗೆ ರಾಜ್ಯ ಸರಕಾರದ ಕಮಿಷನ್ ದಂದೆಗೆ ಗುತ್ತಿಗೆದಾರ ಸಂತೋಷ್ ತಾನೆ ಬಲಿಯಾಗ ಬೇಕಾಯ್ತು. ಈ ಮೂಲಕ ತನ್ನದೇ ಪಕ್ಷದ ಕಾರ್ಯಕರ್ತನೊಬ್ಬನ ಆತ್ಮಹತ್ಯೆ ಈ ಸರಕಾರದ ಕಮಿಷನ್ ದಂಧೆಗೆ ಸಾಕ್ಷಿ ನುಡಿದಂತಾಗಿದ್ದು ಬಿಜೆಪಿಯ ಭ್ರಷ್ಟಾಚಾರದ ಕರಾಳ ಮಗ್ಗಲು ಸಮಾಜ ಮುಖಕ್ಕೆ ಅನಾವರಣಗೊಂಡಂತಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply