ಮಾಜಿ ಸೈನಿಕರಿಗೆ ಸನ್ಮಾನ

ಸೈನಿಕರಿಂದ ಇಂದಿನ ಯುವ ಜನತೆ ಶಿಸ್ತಿನ ಜೀವನ,ತ್ಯಾಗ, ಮತ್ತು ದೇಶಪ್ರೇಮದ ಬಗ್ಗೆ
ಸ್ಪೂರ್ತಿಯನ್ನು ಪಡೆಯಬೇಕು. ಸೈನಿಕರಿಗೆ ಗೌರವ ತೋರಿಸುವುದೆಂದರೆ ದೇವರಿಗೆ ಪೂಜೆ
ಮಾಡಿದಂತೆ” ಎಂದು ಶ್ರೀ ವಿದ್ಯಾವಂತ ಆಚಾರ್ಯರು ಅಭಿಪ್ರಾಯ ಪಟ್ಟರು.
ಅವರು ಉದ್ಯಾವರದ ಶ್ರೀ ವೀರವಿಠಲ ದೇವಸ್ಥಾನದಲ್ಲಿ ಇತ್ತೀಚೆಗೆ ಮಾಜಿ ಸೈನಿಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಮಾಜಿ ಸೈನಿಕರಾದ ಶ್ರೀ ಉಪೇಂದ್ರ ಆಚಾರ್ಯರು ಸ್ವಾತಂತ್ರ ದೊರಕಿದ ಸಮಯದಲ್ಲಿ
ಸೈನ್ಯವನ್ನು ಸೇರಿ ಹಲವಾರು ವರ್ಷಗಳ ಕಾಲ ದೇಶಸೇವೆಯನ್ನು ಮಾಡಿದವರು. ಭಾರತದ ಸೈನಿಕರಾಗಿ ವಿಯೆಟ್ನಾಂ ದೇಶದಲ್ಲಿ ಮಾಡಿದ ಇವರ ಸೇವೆಗೆ ಅತ್ಯುತ್ತಮ ಸೈನಿಕನೆಂಬ ನೆಲೆಯಲ್ಲಿ ಮೂರು ಸೇನಾ ಪದಕಗಳನ್ನು ಗಳಿಸಿದವರು.

ಇನ್ನೊರ್ವ ಮಾಜಿ ಸೈನಿಕ ಶ್ರೀ ಯಶವಂತ್ ಕಾಮತ್ ಇವರು ದಶಕಗಳ ಕಾಲ ಭಾರತದ
ವಾಯು ಸೇನೆಯಲ್ಲಿದ್ದು ದೇಶದ ಹಲವು ಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರೀರ್ವರನ್ನು ದಂಪತಿ ಸಹಿತವಾಗಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಗಣ್ಯರಾದ ಶ್ರೀ ಕಮಲಾಕ್ಷ ಶೆಣೈ, ಮುಕ್ತೇಸರರಾದ ಶ್ರೀ ನಾಗೇಶ್ ಕಾಮತ್,
ಶ್ರೀ ರಂಗನಾಥ್ ಶೆಣೈ, ಶ್ರೀ ರಾಜೇಶ್ ಕಾಮತ್,ಮತ್ತು ಶ್ರೀ ಪ್ರಕಾಶ್ ಶೆಣೈ ಭಾಗವಹಿಸಿದರು.
ಈ ಸನ್ಮಾನ ಕಾರ್ಯಕ್ರಮವನ್ನು ಶ್ರೀ ಗಣಪತಿ ಶೆಣೈಯವರ ನಿರ್ದೇಶನದಲ್ಲಿ
ನಡೆಸಲಾಯಿತು.

ಪ್ರಾರಂಬದಲ್ಲಿ ಶ್ರೀ ಪ್ರಕಾಶ್ ಶೆಣೈಯವರು ಸ್ವಾಗತಿಸಿದರು ಹಾಗು ಕೊನೆಯಲ್ಲಿ, ಶ್ರೀ ವಿಕ್ರಂ
ಆಚಾರ್ಯ ವಂದಿಸಿದರು.

 
 
 
 
 
 
 
 
 
 
 

Leave a Reply