Janardhan Kodavoor/ Team KaravaliXpress
24.6 C
Udupi
Tuesday, July 5, 2022
Sathyanatha Stores Brahmavara

ಯಾಕ್ಷಾಭಿನಯ ಬಳಗ, ಮಂಗಳೂರು ಬಡಗುತಿಟ್ಟು ಯಕ್ಷಗಾನ ತರಬೇತಿ ಕೇಂದ್ರದಲ್ಲಿ ನಾಟ್ಯ ತರಬೇತಿ

ಯಾಕ್ಷಾಭಿನಯ ಬಳಗ, ಮಂಗಳೂರು ಬಡಗುತಿಟ್ಟು ಯಕ್ಷಗಾನ ತರಬೇತಿ ಕೇಂದ್ರದಲ್ಲಿ ನಾಟ್ಯ ತರಬೇತಿಯನ್ನು ಯಕ್ಷಗಾನ ಕಲಾರಂಗ (ರಿ ). ಉಡುಪಿ ಇದರ ಕಾರ್ಯದರ್ಶಿ ಶ್ರೀ ಮುರಳಿ ಕಡೆಕಾರ್ ಇವರು ಉದ್ಘಾಟನೆಯನ್ನು ಮಾಡಿದರು. ಅವರು ಮಾತನಾಡುತ್ತಾ ಯಕ್ಷಗಾನ ಒಂದು ಪರಿಪೂರ್ಣವಾದ ಕಲೆ. ಇದು ಮಕ್ಕಳ ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಯಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಕನ್ನಡ ಭಾಷಾ ಬೆಳವಣಿಗೆ, ಭಾಷಾ ಶುದ್ಧಿಗೆ ಇದು ಪೂರಕವಾಗುತ್ತದೆ. ಮಕ್ಕಳಲ್ಲಿ ನೈತಿಕ ಸ್ಥೈರ್ಯವನನ್ನು ಹೆಚ್ಚಿಸುತ್ತದೆ. ಗುರು ಆದವರು ತಾಳ, ಕುಣಿತ ರಾಗ, ಸಾಹಿತ್ಯವನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡವರಾಗಿರಬೇಕು ಕಲಿಯುವ ಮಕ್ಕಳಿಗೆ ಪ್ರೀತಿಯಿಂದ ಕಲಿಸಿ ಕೊಡುತ್ತ ತಪ್ಪಿದಲ್ಲಿ ತಿದ್ದುವವನಾಗಿರಬೇಕು. ಮುಖ್ಯವಾಗಿ ಪೋಷಕರು ಮಕ್ಕಳಿಗೆ ಪ್ರೋಸ್ಸಾಹವನ್ನು ಕೊಡಬೇಕು. ಗುರುಗಳು ಕಲಿ ಸಿದ್ದನ್ನು ಮನೆಯಲ್ಲಿ ಒಂದು ಗಂಟೆ ಕಲಿಯಲು ಸಮಯ ಮೀಸಲಿಡಬೇಕು. ಮುಂದೆ ಸಾಮಾಜಿಕ ಬದುಕಿನಲ್ಲಿ ಯಕ್ಷಗಾನದಿಂದ ಕಲಿತ ವಿಷಯಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಇದನ್ನು ಪಾಲಕರು ತಿಳಿದುಕೊಳ್ಳಬೇಕು. ಎಂದು ಹೇಳಿದರು.

ಬಳಗದ ಗುರುಗಳಾದ ಶ್ರೀ ಐರೋಡಿ ಮಂಜುನಾಥ್ ಕುಲಾಲ್, ಬಿಜೈ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ್ಯೋಪಾಧ್ಯಾಯಿನಿ ಶ್ರೀಮತಿ ನಾಗರತ್ನ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಬಳಗದ ಕಾರ್ಯದರ್ಶಿ ಶ್ರೀ ಸಂತೋಷ ಶೆಟ್ಟಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಸದಸ್ಯ ಶ್ರೀ ಮಂಜುನಾಥ್ ತೆಂಕಿಲ್ಲಾಯ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಬಳಗದ ಅಧ್ಯಕ್ಷ ಶ್ರೀ ಪ್ರಶಾಂತ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜೊತೆ ಕಾರ್ಯದರ್ಶಿ ಶ್ರೀ ರಾಮಕೃಷ್ಣ ಮರಾಟಿ ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ಗಾಯತ್ರಿ ಶ್ರೀನಿವಾಸ್ ವಂದನಾರ್ಪಣೆ ಗೈದರು. ಯಕ್ಷ ಶಿಕ್ಷಣಾರ್ಥಿಗಳು, ಪಾಲಕರು, ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!