ಮುನಿಶ್ರೇಷ್ಠರಾದ ಶ್ರೀ ಕಪಿಲ ಮಹರ್ಷಿಯ ಬಿಂಬ ಪ್ರತಿಷ್ಠಾಪನೆ

ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ದೇವಿಯು ತಮ್ಮನ್ನೆಲ್ಲಾ ಅನುಗ್ರಹಿಸಿ ಮುನ್ನಡೆಸುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.!
ಇಂತಹ ಮಾತೆಯ ಸನ್ನಿಧಾನದಲ್ಲಿ ವಿಶೇಷವಾದ ಮತ್ತೊಂದು ಶಕ್ತಿ ಪುನರುತ್ಥಾನ ಗೊಳ್ಳಲಿದೆ.

ಮಹಾ ತಪಸ್ವಿಗಳಾದ ಕಪಿಲ ಮಹರ್ಷಿ ತಪಗೈದ ತಪೋಭೂಮಿ ಇದಾಗಿದ್ದು ಭೂಗತ ಶಕ್ತಿ ಚೈತನ್ಯ ಅವರಿಂದ ಆರಾಧಿಸಲ್ಪಡುತಿತ್ತು ಅದರಲ್ಲೂ ಶ್ರೀ ಕುಬೇರ ಚಿತ್ರಲೇಖಾ ಸಹಿತ ಮಹಾಲಕ್ಷ್ಮಿಯ ಸನ್ನಿಧಾನವು ಪ್ರಮುಖವಾದುದು ಎನ್ನುವುದು ಗತಕಾಲದ ಇತಿಹಾಸ.

ಶ್ರೀ ದುರ್ಗಾ ಆದಿಶಕ್ತಿ ದೇವಿ ನೀಡಿದ ಪ್ರೇರಣೆ ಯಂತೆ ಮುನಿಶ್ರೇಷ್ಠರಾದ ಶ್ರೀ ಕಪಿಲ ಮಹರ್ಷಿಯ ಬಿಂಬ ಪ್ರತಿಷ್ಠಾಪನೆಯು ಏಪ್ರಿಲ್ ತಿಂಗಳ 3ನೆಯ ತಾರೀಕಿನ ಭಾನುವಾರದಂದು ಹಾಗೂ ಶ್ರೀ ಕುಬೇರ ಚಿತ್ರಲೇಖಾ ಸಹಿತ ಮಹಾಲಕ್ಷ್ಮಿಯ ಲಕ್ಷ್ಮಿಯ ಸನ್ನಿಧಾನವನ್ನು ಏಪ್ರಿಲ್ ತಿಂಗಳ ತಾರೀಕು 6ರ ಬುಧವಾರದಂದು ನೂತನ ಶಿಲಾಮಯ ಗುಡಿಯಲ್ಲಿ ಪ್ರತಿಷ್ಠಾಪಿಸುವುದು ಎಂದು ಸಂಕಲ್ಪಿಸಲಾಗಿದೆ.

ಈ ಪ್ರತಿಷ್ಠಾ ಮಹೋತ್ಸವದಲ್ಲಿ ಸಂಪನ್ನಗೊಳ್ಳುವ ಪಂಚವಿಂಶತಿ ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕ ದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ರಜತ ಕಲಶ ಸೇವೆಯನ್ನು ಕ್ಷೇತ್ರ ಆಯೋಜಿಸಿದೆ …!!
ಈ 108 ರಜತ ಕಲಶಾಭಿಷೇಕದಲ್ಲಿ ನೀವು ಸೇವಾದಾರರಾಗಲು ಬಯಸುವುದಾದಲ್ಲಿ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ್ ಇವರನ್ನು ಮೊಬೈಲ್ ಸಂಖ್ಯೆ
9342749650 ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು .
ಈ ರಜತ ಕಲಶ ಸೇವೆಯಿಂದ ಅಲಕ್ಷ್ಮೀ ದೋಷ ಹಾಗೂ ದಾರಿದ್ರ್ಯವು ನಾಶವಾಗಿ ಸುಖ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂದು ಪ್ರತೀತಿ ಇರುವ ಹಿನ್ನೆಲೆಯಲ್ಲಿ ಈ ಸೇವೆಯನ್ನು ಆಯೋಜಿಸಲಾಗಿದೆ .

 
 
 
 
 
 
 
 
 
 
 

Leave a Reply