ದೆಹಲಿಯಲ್ಲಿ ವಿದ್ಯುತ್‌ ವಾಹನ ನೀತಿ ಜಾರಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ‘ದೆಹಲಿ ವಿದ್ಯುತ್‌ ವಾಹನ ನೀತಿ’ಗೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಶುಕ್ರವಾರ ಚಾಲನೆ ನೀಡಿದರು.

ಈ ನೀತಿಯಡಿ ವಿದ್ಯುತ್‌ ಚಾಲಿತ ವಾಹನಗಳಿಗೆ ನೋಂದಣಿ ಶುಲ್ಕ ಹಾಗೂ ರಸ್ತೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಹೊಸ ವಿದ್ಯುತ್‌ ಚಾಲಿತ ಕಾರುಗಳ ಖರೀದಿಗೆ 1.5 ಲಕ್ಷ‌ ರೂ. ವರೆಗೆ, ದ್ವಿಚಕ್ರ ವಾಹನ, ಆಟೊ, ಇ–ರಿಕ್ಷಾ, ಸರಕು ವಾಹನಗಳಿಗೆ 30 ಸಾವಿರ ರೂ. ಪ್ರೋತ್ಸಾಹಧನ ನೀಡಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ವಿದ್ಯುತ್‌ ಚಾಲಿತ ವಾಣಿಜ್ಯ ವಾಹನಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯವನ್ನೂ ನೀಡುವುದಾಗಿ ಎಎಪಿ ಸರ್ಕಾರ ಘೋಷಿಸಿದೆ.

 

ಆನ್‌ಲೈನ್‌ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಕೇಜ್ರಿವಾಲ್‌, ‘ದೆಹಲಿಯ ಆರ್ಥಿಕತೆಗೆ ಚೇತರಿಕೆ ನೀಡುವ ಗುರಿಯೊಂದಿಗೆ ಈ ನೀತಿ ಜಾರಿಗೊಳಿಸಲಾಗಿದೆ. ಅದರಿಂದ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗಲಿದ್ದು, ದೆಹಲಿಯ ವಾಯುಮಾಲಿನ್ಯ ಪ್ರಮಾಣ ಕಡಿಮೆಯಾಗಲಿದೆ. ಮುಂದಿನ 5 ವರ್ಷದಲ್ಲಿ ದೆಹಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಮಾದರಿಯಾಗಲಿದೆ’ ಎಂದವರಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸ್ತುತ ದೆಹಲಿಯಲ್ಲಿರುವ ವಾಹನಗಳ ಪೈಕಿ ಕೇವಲ ಶೇ 0.29ರಷ್ಡು ವಿದ್ಯುತ್‌ ಚಾಲಿತ ವಾಹನಗಳಿವೆ. 2024ರೊಳಗೆ ವಿದ್ಯುತ್‌ ಚಾಲಿತ ವಾಹನಗಳ ಸಂಖ್ಯೆಯನ್ನು ಶೇ. 25ಕ್ಕೆ ಹೆಚ್ಚಿಸುವ ಗುರಿ ಇದೆ‌ ಎಂದೂ ಕೇಜ್ರಿವಾಲ್ ಹೇಳಿದರು

 
 
 
 
 
 
 

Leave a Reply