ಜನರಂತೆಯೇ ರಸ್ತೆಗಿಳಿದು ಮೊಸಳೆಯ ಮಾರ್ನಿಂಗ್ ವಾಕ್…

ಕಾರವಾರ : ಈ ಗ್ರಾಮದ ಜನರಿಗೆ ಬೆಳ್ಳಂಬೆಳಗ್ಗೆಯೇ ಒಂದು ಶಾಕ್ ಎದುರಾಗಿತ್ತು. ಗ್ರಾಮದಲ್ಲಿನ ರಸ್ತೆಯಲ್ಲಿ ಮೊಸಳೆಯೊಂದು ಬೆಳಿಗ್ಗಿನ ವಾಕಿಂಗ್ ಮಾಡಿದೆ. ಇದರಿಂದ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಕೋಗಿಲುಬನ ಗ್ರಾಮದಲ್ಲಿನ ಜನರಿಗೆ ಕೆಲ ಕಾಲ ಆತಂಕದೊಂದಿಗೆ ಆಶ್ಚರ್ಯ ಕಾಡಿತ್ತು.

ಈ ಮೊಸಳೆ ಕಾಳಿ ನದಿಯಿಂದ ಹೊರಬಂದು ಗ್ರಾಮದ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆ ಕಾಲ ಸಂಚರಿಸಿತು.‌ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನ ಮತ್ತೆ ನದಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಗಿಲು ಬನ ಗ್ರಾಮದ ಸಮೀಪದಲ್ಲಿಯೇ ಇರುವ ಕಾಳಿ ನದಿಯಲ್ಲಿ ಮೊಸಳೆ ಪಾರ್ಕ್ ಇದೆ. ಈ ಪಾರ್ಕ್ ನಲ್ಲಿ ನೂರಾರು ಮೊಸಳೆಗಳಿದ್ದು, ಅಲ್ಲಿಂದ ಮೊಸಳೆ ಬಂದಿರಬಹುದು ಎನ್ನಲಾಗುತ್ತಿದೆ.ಜನವಸತಿ ಪ್ರದೇಶವಾದ ಕೋಗಿಲು ಬನಕ್ಕೆ ಮೊಸಳೆ ಬಂದಿದ್ದು ಇದೇ ಮೊದಲು ಎನ್ನಲಾಗಿದೆ.

 
 
 
 
 
 
 
 
 
 
 

Leave a Reply