ಬೈಕಾಡಿ ​ಸುಪ್ರಸಾದ್ ಶೆಟ್ಟಿ ​ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ

ಬ್ರಹ್ಮಾವರ  ದಕ್ಷಿಣ ಕನ್ನಡ ಹಕಾರಿ ಸಕ್ಕರೆ ಕಾರ್ಖಾನೆ  ಇದರ ಅಧ್ಯಕ್ಷರಾಗಿ​ ಬೈಕಾಡಿ​ ಸುಪ್ರಸಾದ್ ಶೆಟ್ಟಿಯವರು ಆಯ್ಕೆಯಾಗಿ ದ್ದಾರೆ. ಉಪಾಧ್ಯಕ್ಷ​ ​ಉಮನಾಥ ಶೆಟ್ಟಿ ಶಾನಾಡಿ ಕೆದೂರು​, ನಿರ್ದೇಶಕರಾಗಿ ಸುಬ್ಬ ಬಿಲ್ಲವ ಹೆಮ್ಮಾಡಿ, ಆಸ್ತಿಕ ಶಾಸ್ತ್ರಿ ಗುಂಡ್ಮಿ ಸಾಸ್ತಾನ, ಕೆ. ಸನ್ಮತ್ ಹೆಗ್ಡೆ ಹಾರ್ದಳ್ಳಿ ಮಂಡಳ್ಳಿ, ಶ್ರೀಮತಿ ಹೇಮಲತಾ ಯು. ಶೆಟ್ಟಿ ಶಾನಾಡಿ ಕೆದೂರು, ಶ್ರೀಮತಿ ವಸಂತಿ ಆರ್.ಶೆಟ್ಟಿ ಕಚ್ಚೂರು ಹೆಬ್ರಿ, ರತ್ನಾಕರ ಬಿ. ಗಾಣಿಗ ಬಳ್ಕೂರು, ಸಂತೋಷಕುಮಾರ್ ಶೆಟ್ಟಿ ಬಲಾಡಿ, ಶ್ರೀಮತಿ ಗೀತಾ ಶಂಭು ಪೂಜಾರಿ ಆಯ್ಕೆಯಾಗಿ​​​ದ್ದಾರೆ. ಕುಂದಾಪುರದ ಸಹಾಯಕ ಆಯುಕ್ತ​ ​ರಾಜು ಅವರು ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. 

17 ವರ್ಷಗಳಿಂದ   ಬ್ರಹ್ಮಾವರ ಸಕ್ಕರೆ ಕಾರ್ಖಾನೆ ​ಕಾರ್ಯಾಚರಿಸುತ್ತಿಲ್ಲ. ಮೆಶಿನರಿಗಳು ತುಕ್ಕು ​ಹಿಡಿದಿವೆ. ನೌಕರರು ಉದ್ಯೋಗ ಕಳಕೊಂಡು ​ದಿಕ್ಕು ತೋಚದಂತೆ ಆಗಿ ಬಿಟ್ಟಿದೆ.  ಇಂತಹ ಕಾರ್ಖಾನೆಯ ಪುನಶ್ಚೇತನಕ್ಕೆ ಎಲ್ಲಾ ರಾಜಕಾರಣಿಗಳು ಭರವಸೆ ನೀಡಿ ಗೆದ್ದು ​ಬಳಿಕ ​ಈ ಕಡೆ ಮುಖ ಹಾಕುತ್ತಿರಲಿಲ್ಲ.
ಉಭಯ ಜಿಲ್ಲೆಯ ರೈತರ ​ಪಾಲಿಗೆ ವರದಾನ ಬೇಕಿದ್ದ  ಈ ಕಾರ್ಖಾನೆ ಯಾವತ್ತೋ ​ಪ್ರಾರಂಭವಾಗ ಬೇಕಿತ್ತು. ​ಈ ಬಾರಿ ​ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ, ಯುವ ನ್ಯಾಯವಾದಿ, ಸಂಘಟಕ ​ಬೈಕಾಡಿ ​ಸುಪ್ರಸಾದ್ ಶೆಟ್ಟಿ​ ಇದರ ಚುಕ್ಕಾಣಿ ಹಿಡಿದಿದ್ದಾರೆ.  
​​
​ರೈತರಲ್ಲಿ ​ಕಬ್ಬು ಬೆಳೆಸಲು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಿದ್ದೇವೆ. ಕಬ್ಬು ಬೆಳೆದರೆ ಬೆಲ್ಲದ ಆಲೆಮನೆ ನಿರ್ಮಿಸಿ​, ರೈತ ರಿಂದ ಕಬ್ಬನ್ನು ಪಡೆದು ಅದರಲ್ಲಿ ಬೆಲ್ಲ ತೆಗೆಯುವ ​ಕೆಲಸ ಮಾಡುವವರಿದ್ದೇವೆ. ​ಆಲೆಮನೆಯಿಂದ ಬೆಲ್ಲ ಮಾಡಿ ಅದನ್ನು ​ಸಾರ್ವಜನಿಕ ವಲಯದಲ್ಲಿ ಮಾರುಕಟ್ಟೆ ಮಾಡಲಾಗುವುದು. ಸಕ್ಕರೆ ಕಾರ್ಖಾನೆ ​ಆರಂಭಗೊಂಡಲ್ಲಿ ​ನೂರಾರು ಜನರಿಗೆ ಉದ್ಯೋಗ ದೊರಕುತ್ತೆ.​ ಮುಂದಿನ ದಿನಗಳಲ್ಲಿ ಸರಕಾರ ಮಟ್ಟದ್ದಲ್ಲಿ ಮಾತುಕತೆ ನಡೆಸಿ ಕಾರ್ಖಾನೆಗೆ ಕಾಯಕಲ್ಪ ನೀಡಲಾಗುವುದು~ ಬೈಕಾಡಿ ಸುಪ್ರಸಾದ್ ಶೆಟ್ಟಿ​​ 
 
 
 
 
 
 
 
 
 
 
 

Leave a Reply