ಪ.ಬಂಗಾಳ: ಚುನಾವಣೆ ವೇಳೆ ಹಿಂಸಾಚಾರ; ಸಾವಿನ ಸಂಖ್ಯೆ 16ಕ್ಕೆ ಏರಿಕೆ

ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯ ವೇಳೆ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿದೆ ಎಂದು ತಿಳಿದು ಬಂದಿದೆ.
ಜೂನ್ 8ಕ್ಕೆ ಪಂಚಾಯಿತಿ ಚುನಾವಣೆ ಘೋಷಣೆಯಾದ ಬಳಿಕ 19 ಮಂದಿ ಸಾವನ್ನಪ್ಪಿದ್ದು, ಚುನಾವಣೆಯ ವೇಳೆ 16 ಮಂದಿ ಮೃತಪಟ್ಟು ಚುನಾವಣಾ ಪ್ರಕ್ರಿಯೆ ಮುಕ್ತಾಯದ ವೇಳೆಗೆ ಒಟ್ಟು ಬಲಿಯಾವರ ಸಂಖ್ಯೆ 35ಕ್ಕೇರಿದೆ.

ಮುರ್ಶಿದಾಬಾದ್ ಹಾಗೂ ಉತ್ತರ ಮುರ್ಶಿದಾಬಾದ್ ನ ಕೂಚ್ಬೆಹಾರ್, ಉತ್ತರ ದಿಂಗಜ್ಪುರ ಮತ್ತು ಮಾಲ್ಡಾ ಜಿಲ್ಲೆಗಳಲ್ಲಿ ಒಟ್ಟು 13 ಮಂದಿ ಮೃತಪಟ್ಟಿದ್ದು, ಮುರ್ಶಿದಾಬಾದ್ ಜಿಲ್ಲೆಯೊಂದರಲ್ಲೇ ಐದು ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಉಳಿದಂತೆ ಕೂಚ್ಬೆಹಾರ್, ಉತ್ತರ ದಿಂಗಜ್ಪುರ ಹಾಗೂ ಮಾಲ್ಡಾದಲ್ಲಿ ಕ್ರಮವಾಗಿ ಮೂರು, ನಾಲ್ಕು ಹಾಗೂ ಒಬ್ಬರು ಬಲಿಯಾಗಿದ್ದಾರೆ.

ಇನ್ನು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಟ್ಟು ಒಂಬತ್ತು ಮಂದಿ ಗಲಭೆಗಳಲ್ಲಿ ಮೃತಪಟ್ಟಿದ್ದು, ಕಾಂಗ್ರೆಸ್ ಪಕ್ಷದ ಮೂವರು, ಬಿಜೆಪಿ ಹಾಗೂ ಸಿಪಿಎಂನ ತಲಾ ಇಬ್ಬರು ಕಾರ್ಯಕರ್ತರು ಮೃತಪಟ್ಟಿದ್ದಾರೆ.

 
 
 
 
 
 
 
 
 
 
 

Leave a Reply