ಗುರುಪರಂಪರೆ ನಮ್ಮ ಸನಾತನ ಧರ್ಮದ ಅವಿಭಾಜ್ಯ ಅಂಗ -ಡಾ.‌ಎ.ಪಿ. ಭಟ್

ವೇದವನ್ನು ಜನ ಮಾನಸಕ್ಕೆ ಸುಲಭವಾಗಿ ಅರ್ಥವಾಗುವಂತೆ ನಾಲ್ಕು ವೇದಗಳನ್ನಾಗಿ ವಿಂಗಡಿಸಿದ, ಮಹಾಕಾವ್ಯ ಮಹಾಭಾರತವನ್ನು ರಚಿಸಿ, ಭಗವಾನ್ ಶ್ರೀಕೃಷ್ಣನ  ಸಮಗ್ರ ವ್ಯಕ್ತಿತ್ವವನ್ನು ಜಗತ್ತಿಗೆ ಸಾರಿದ ವೇದವ್ಯಾಸರಂತಹ  ಮಹಾನ್ ಗುರುಗಳಿಗೆ ವಂದನೆಗಳನ್ನು ಸಲ್ಲಿಸಿ, ಗುರುಕಾಣಿಕೆ ಸಮರ್ಪಿಸುವ  ಮೂಲಕ ಗುರು ಪರಂಪರೆಯನ್ನು ಬಿಂಬಿಸುವ ಈ ಕಾರ್ಯಕ್ರಮವು ಅತ್ಯಂತ ಔಚಿತ್ಯಪೂರ್ಣ ಎಂದು ಪತಂಜಲಿ ಯೋಗ ಸಮಿತಿ ಉಡುಪಿಯ ಆಯೋಜಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ  ಭಾಗವಹಿಸಿ ಮಾತನಾಡಿದ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎ ಪಿ  ಭಟ್ ಅವರು  ಹೇಳಿದರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಹಿರಿಯ,ಪತಂಜಲಿ ಅಜೀವ ಸದಸ್ಯ  ಶ್ರೀ ಸದಾನಂದ ರಾವ್ ಅವರು ಅಗ್ನಿಹೋತ್ರವನ್ನು ನೆರವೇರಿಸಿದರು. ಬಳಿಕ ಲೀಲಾ ಆರ್ ಅಮೀನ್ ಮತ್ತು ಭಗಿನಿಯರಿಂದ ಭಜನೆ ಕಾರ್ಯಕ್ರಮ ನಡೆಯಿತು.
ಶ್ರೀ ರಾಘವೇಂದ್ರ ರಾವ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮವು ನಡೆಯಿತು.ಜಿಲ್ಲಾ ಪ್ರಭಾರಿ ಕೆ.ರಾಘವೇಂದ್ರ ಭಟ್ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷರು ಯೋಗಗುರು ಬಾಬಾ ರಾಮದೇವ್ ಅವರ ಕೊಡುಗೆಯನ್ನು ಶ್ಲಾಘಿಸಿ, ಅವರ ನಿಸ್ವಾರ್ಥ ಸೇವೆಯ ಮಾದರಿ ನಮಗೆ ಅನುಕರಣೀಯ ಎಂದರು.  
ಬಾಬಾ ರಾಮದೇವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗುರು ಕಾಣಿಕೆಯನ್ನು ಎಲ್ಲರೂ ಸಮರ್ಪಿಸಿದ ಬಳಿಕ ಪತಂಜಲಿ ಯೋಗ ಸಮಿತಿ ಉಡುಪಿಯ ವತಿಯಿಂದ ಗುರುವರ್ಯ ಡಾ.ಎ.ಪಿ.ಭಟ್, ಮಂಡಲ ಪ್ರಭಾರಿ ಶ್ರೀ ರಾಘವೇಂದ್ರ ರಾವ್ ಮತ್ತು ಹಿರಿಯ ಯೋಗ ಶಿಕ್ಷಕ ಶ್ರೀ ಸದಾನಂದ ರಾವ್ ಅವರುಗಳನ್ನು ಶಾಲು ಹೊದಿಸಿ, ಫಲವಸ್ತುಗಳನ್ನು ಸಮರ್ಪಿಸಿ,ಗೌರವಾರ್ಪಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಅಜೀವ ಸದಸ್ಯರು,ವಿವಿಧ ಕಕ್ಷೆಯ ಯೋಗ ಶಿಕ್ಷಕರು,ಹಾಗೂ ಯೋಗ ಬಂಧುಗಳವರು ಭಾಗವಹಿಸಿದರು. 
ರೋಹಿತ್ ರವರು ಕಾರ್ಯಕ್ರಮ ನಿರ್ವಹಿಸಿ, ರಾಜೇಶ್ ಕಾಮತ್ ರವರು ಧನ್ಯವಾದವಿತ್ತರು.
 
 
 
 
 
 
 
 
 
 
 

Leave a Reply