ಚೀನಾ ಆ್ಯಪ್ ಮೂಲಕ ಸಾಲ ಪಡೆದಿದ್ದ ವಿದ್ಯಾರ್ಥಿ ಟಾರ್ಚರ್ ತಾಳದೆ ನೇಣಿಗೆ ಶರಣು

ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ಎಂದು ಡೆತ್‍ನೋಟ್ ಬರೆದಿಟ್ಟು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ತೇಜಸ್ (22) ಆತ್ಮಹತ್ಯೆಗೆ ಶರಣಾದವ. ಯಲಹಂಕದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಆರನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದು, ಕಾಲೇಜಿಗೆ ಟಾಪರ್ ಆಗಿದ್ದ.

ತೇಜಸ್ ತನ್ನ ಸ್ನೇಹಿತ ಮಹೇಶ್‍ಗಾಗಿ ಚೈನಿಸ್ ಲೋನ್ ಆಪ್ ಮೂಲಕ ಸಾಲ ಪಡೆದಿದ್ದನು. ಸ್ನೇಹಿತ ಮಹೇಶ್ ಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ಕೋಟಕ್ ಮಹೀಂದ್ರಾ ಮೂಲಕ ಲೋನ್ ಪಡೆದಿದ್ದನು. ಆದರೆ ಕಳೆದ ಒಂದು ವರ್ಷದಿಂದ ಸ್ನೇಹಿತ ಮಹೇಶ್ ಇಎಂಐ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ನೀಡಿದ್ದ ಲೋನ್ ಕಂಪನಿಗಳು ವಿಪರೀತ ಟಾರ್ಚರ್ ಕೊಡುತ್ತಿದ್ದವು. ಈ ಟಾರ್ಚರ್ ತಾಳಲಾರದೆ ಮಂಗಳವಾರ ಡೆತ್ ನೋಟ್ ಬರೆದಿಟ್ಟು ತೇಜಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಂಜೆ 6 ಗಂಟೆ ಸುಮಾರಿಗೆ ತಾಯಿಯ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕನ ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ ಹೆಚ್‍ಎಂಟಿ ಕ್ವಾಟ್ರಸ್ ನಲ್ಲಿರುವ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.

ಡೆತ್‍ನೋಟ್‍ನಲ್ಲೇನಿದೆ..?: ಅಮ್ಮ ಅಪ್ಪ ನನ್ನನ್ನು ಕ್ಷಮಿಸಿ. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ. ನಾನು ಮಾಡಿರುವ ಸಾಲ ತೀರಿಸಲು ಆಗೋದಿಲ್ಲ ಅದಕ್ಕಾಗಿ ಇದು ನನ್ನ ಕೊನೆಯ ತೀರ್ಮಾನ. ಥ್ಯಾಂಕ್ಸ್ ಗುಡ್ ಬಾಯ್ ಎಂದು ತೇಜಸ್ ಬರೆದುಕೊಂಡಿದ್ದಾನೆ.

 
 
 
 
 
 
 
 
 
 
 

Leave a Reply