ತಮ್ಮನಿಂದಲೇ ಅಕ್ಕನ ಮೇಲೆ ಅತ್ಯಾಚಾರ: ಗರ್ಭಿಣಿಯಾದ ಸಹೋದರಿ

12 ವರ್ಷದ ಸಹೋದರ 16 ವರ್ಷದ ಸಹೋದರಿಯ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿರುವ ರ್ಘಟನೆ ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ. 

ಪಾಲಕರು ಕೆಲಸಕ್ಕೆ ಹೋದಾಗ ಅಕ್ಕನ ಮೇಲೆ ತಮ್ಮ ಎರಡು ಸಲ ಅತ್ಯಾಚಾರ ಮಾಡಿದ್ದಾನೆ. ಮೂರು ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಸಂತ್ರಸ್ತೆ ದೇಹದಲ್ಲಿ ಕೆಲವು ಬದಲಾವಣೆಯನ್ನು ಗಮನಿಸಿದ ತಾಯಿ ಈ ಬಗ್ಗೆ ಆಕೆಯನ್ನು ಕೇಳಿದಾಗ ತಮ್ಮನಿಂದ ಅತ್ಯಾಚಾರಕ್ಕೆ ಒಳಗಾಗಿರುವುದನ್ನು ಹೇಳಿಕೊಂಡಿರುವುದಾಗಿ ಎಸ್‌ಎಚ್‌ಒ ಅನಿತಾ ಚಾಹಾಣ್ ತಿಳಿಸಿದ್ದಾರೆ. 

ಲಾಕ್ ಡೌನ್ ಸಮಯದಲ್ಲಿ ಶಾಲೆಗಳು ಬಂದ್ ಆಗಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ವೈದ್ಯಕೀಯ ಪರೀಕ್ಷೆಯಲ್ಲಿಯೂ ಸಂತ್ರಸ್ತೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ.

ಆರೋಪಿಯನ್ನು ಬಾಲಾಪರಾಧಿ ಮಂಡಳಿ ವಶಕ್ಕ ಪಡೆದಿದೆ. ಪೊಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 
 
 
 
 
 
 
 
 
 
 

Leave a Reply