ಪತಿಯ ಸಾವಿನ ನಕಲಿ ದಾಖಲೆ ಸೃಷ್ಟಿಸಿ ಜೀವ ವಿಮೆಯಿಂದ 18.5 ಲಕ್ಷ ರೂ. ಪಡೆದ ಪತ್ನಿಯ ಬಂಧನ

ಗಾಂಧಿನಗರ: ಪತಿಯ ಸಾವಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜೀವ ವಿಮೆಯಿಂದ 18.5 ಲಕ್ಷ ರೂಪಾಯಿ ಪಡೆದ ಆರೋಪದ ಮೇಲೆ 35 ವರ್ಷದ ಮಹಿಳೆಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ. 

ನಂದಾ ಮರಾಠಿ ಮೋಸ ಮತ್ತು ವಂಚನೆ ಆರೋಪದಲ್ಲಿ ಬಂಧನವಾದ ಮಹಿಳೆ. ಈ ಪ್ರಕರಣದಲ್ಲಿ ವೈದ್ಯ ಹರಿಕೃಷ್ಣ ಸೋನಿ ಎಂಬಾತನನ್ನು ನಗರ ಅಪರಾಧ ವಿಭಾಗ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2019ರಲ್ಲಿ ನಾನು ಮೃತಪಟ್ಟಿರುವುದಾಗಿ ಪತ್ನಿ ನಂದಾ ನಕಲಿ ದಾಖಲೆ ಸೃಷ್ಟಿಸಿ ನನ್ನ ಜೀವ ವಿಮಾ ಪಾಲಿಸಿಯಿಂದ 18.5 ಲಕ್ಷ ರೂ. ಪಡೆದಿರುವುದಾಗಿ ಬಂಧಿತ ಮಹಿಳೆಯ ನಿಮೇಶ್ ಮರಾಠಿ ಪೊಲೀಸರಿಗೆ ದೂರು ನೀಡಿದ್ದರು. 

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ನಂದಾ ಮರಾಠಿ, 2019ರಲ್ಲಿ ಪತಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಮೃತಪಟ್ಟಿರುವುದಾಗಿ ಹೇಳಿ ವೈದ್ಯ ಸೋನಿಯಿಂದ ಮರಣ ಪ್ರಮಾಣ ಪತ್ರವನ್ನು ಪಡೆದಿದ್ದರು ಎನ್ನುವ ಮಾಹಿತಿ ಲಭಿಸಿದೆ. ಹೀಗಾಗಿ ಮಹಿಳೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
 
 
 
 
 
 
 
 
 
 
 

Leave a Reply