ಯುವತಿಗೆ ಕಂಠಪೂರ್ತಿ ಕುಡಿಸಿ ಸಾಮೂಹಿಕ ಅತ್ಯಾಚಾರ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿದೆ. ಸ್ನೇಹಿತರೆ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಯುವತಿಗೆ ಕಂಠಪೂರ್ತಿ ಕುಡಿಸಿ ಹೆಚ್ ಎಎಲ್ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ.

ಈಜೀಪುರ ಮುಖ್ಯ ರಸ್ತೆಯಿಂದ ಯುವತಿಯನ್ನ ಕರೆದುಕೊಂಡು ಹೋಗಿರುವ ಯುವಕರು ಗ್ಯಾಂಗ್ ರೇಪ್ ಮಾಡಿದ್ಸಾರೆ. ಅತ್ಯಾಚಾರದ ವಿಷಯ ಯಾರಿಗಾದ್ರು ತಿಳಿಸಿದರೆ ಕೊಲೆ ಮಾಡೋದಾಗಿ ಬೆದರಿಸಿದ್ದಾರೆ.

ಘಟನೆ ಬಳಿಕ ಬೆಂಗಳೂರಿನ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಯುವತಿ ದೂರು ದಾಖಲಿಸಿದ್ದಾಳೆ.

ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡಿರುವ ವಿವೇಕ್ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಳೆದ ಎರಡು‌ ದಿನಗಳ ಹಿಂದೆ ಈ ಘಟನೆ ನಡೆದಿದೆ. ದೀಪು ,ಅಖಿಲೇಶ್ , ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ.

Leave a Reply