Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

​ಮಾದಕ ವಸ್ತುಗಳ ವಶ, ಮಣಿಪಾಲ ವಿದ್ಯಾರ್ಥಿ ಬಂಧನ

ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಕುಮಾರ್ ಚಂದ್ರ ಕೆ ಎಸ್ ಪಿ ಎಸ್  ರವರರು ಖಚಿತ ಮಾಹಿತಿ ಮೇಲೆ ಮಣಿಪಾಲದ ಅದಿತಿ ಸೌರಭ ಅಪಾರ್ಟ್ ಮೆಂಟ್ ಮೇಲೆ ದಾಳಿ ಮಾಡಿ 32 ಗ್ರಾಂ  ವಿದೇಶಿ ಹೈಡ್ರೊವಿಡ್ ಗಾಂಜಾ , 9 ಗಾಂ ಬ್ರೌನ್ ಶುಗರ್ ಹಾಗೂ 25 MDMA ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ನಿಷೇದಿತ ಮಾದಕ ವಸ್ತುಗಳ ಒಟ್ಟು ಅಂದಾಜು ಮೌಲ್ಯ ರೂ  3,89,000/-  ಆಗಿರುತ್ತದೆ.
 
ಈ ಸಂಭದ  ಅಧಿತಿ ಸೌರಬ ಅಪಾರ್ಟ್ ಮೆಂಟ್ ರೂಮ್ ನಂಬರ್ 204 ರಲ್ಲಿ ವಾಸವಿದ್ದ ಕೆ ಎಮ್ ಸಿ ಮೆಡಿಕಲ್ ಕಾಲೇಜಿನ ವೈದ್ಯ  ವಿದ್ಯಾರ್ಥಿ ಆದಿತ್ಯ ಪ್ರಭು ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಹೆಚ್ಚಿನ ಮಾಹತಿ ಸಂಗ್ರಹಿಸಲಾಗುತ್ತದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು ಕೆಲವು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವುದು ಬಾಕಿ ಇರುತ್ತದೆ. ಕಳೆದ 1 ತಿಂಗಳಿನಿಂದ ಈಚೆಗೆ ಉಡುಪಿ ಪೊಲೀಸರು ವಶಪಡಿಸಿಕೊಳ್ಳುತ್ತಿರುವ ಸಿಂಥೆಟಿಕ್ ಡ್ರಗ್ಸ್ ಗಳ  4ನೇ ಪ್ರಕರಣವಾಗಿರುತ್ತದೆ.  
 

ಉಡುಪಿ ಜಿಲ್ಲಾ  ಪೊಲೀಸ್  ಅಧೀಕ್ಷಕ ಶ್ರೀ ವಿಷ್ಣುವರ್ಧನ ಐಪಿಎಸ್ ರವರ  ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಕುಮಾರ್ ಚಂದ್ರ ರವರು ತಮ್ಮ ತಂಡದ ಸದಸ್ಯರಾದ  ಟಿ .ಆರ್ ಜೈ ಶಂಕರ್ ​,​ ಡಿ ವೈ ಎಸ್ ಪಿ ಉಡುಪಿ ,​ ​ಹರಿರಾಮ  ಶಂಕರ್ ಎ ಎಸ್ ಪಿ ಕುಂದಾಪುರ  , ಮಂಜುನಾಥ್ ಎಂ ಗೌಡ ಪಿ.ಐ ಮಣಿಪಾಲ , ರಾಜಶೇಖರ್ ಪಿ ಎಎಸ್ ಐ ಮಣಿಪಾಲ , ಉಡುಪಿ ಸಹಾಯಕ  ಡ್ರಗ್ಸ್ ಕಂಟ್ರೋಲರ್  ನಾಗರಾಜ್.
ಗ್ರಾಮ ಲೆಕ್ಕಾಧಿಕಾರಿಯಾದ ಗಿರೀಶ್ ಗೌರವ​ ​ಗೋಶ್ ಮತ್ತು ಉಪೇಂದ್ರ ಕುಮಾರ್ , ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ಆದರ್ಶ, ಆನಂದಯ್ಯ , ಸುದೀಪ ಹಾಗೂ ಡಿ ವೈ ಎಸ್ ಪಿ ಕಛೇರಿಯ  ಸಿಬ್ಬಂದಿಗಳಾದ  ನವೀನ್ ಕುಮಾರ್ ಶಾಂತರಾಂ  ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಕಛೇರಿಯ ಸಿಬ್ಬಂದಿಗ​​ಳಾದ ಅಶೋಕ ಪಾಟಕರ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ​. 

ಇದೇ ಪ್ರಕರಣಕ್ಕೆ  ಸಂಬಂದಿಸಿದಂತೆ  ಅನಿಶ್ ಎಂಬ ಅಮೇರಿಕಾ ಮೂಲದ ಅನಿವಾಸಿ ಭಾರತೀಯ ವಿದ್ಯಾರ್ಥಿಯನ್ನು ಇಂದು ವಶಕ್ಕೆ ಪಡೆದು ವಿಚಾರಣೆ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದು,  ಇನ್ನೂ ಹಲವರ ಬಂಧನಕ್ಕೆ ತನಿಖಾ ತಂಡ ಬಲೆ ಬೀಸಿದೆ . ಹಾಗೆಯೇ ಡ್ರಗ್ಸ್ ವಿರುದ್ದ  ಕಾರ್ಯಚರಣೆ ಇನ್ನೂ​​ಮುಂದುವರಿಯುತ್ತದೆ ಎಂದು ಮಾನ್ಯ ಉಡುಪಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ ಐಪಿಎಸ್ ರವರು ತಿಳಿಸಿರುತ್ತಾರೆ
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!