Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಪೂರ್ಣಿಮಾ ಜನಾರ್ದನ್ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ,  ಅರ್ಹತೆಗೆ ಸಂದ ಗೌರವ~ಭಾವನಾ ಕೆರೆಮಠ  

ಪೂರ್ಣಿಮಾ ಜನಾರ್ದನ್ ಕೊಡವೂರು ಇವರು ಉಡುಪಿ ಅಂಚೆ ವಿಭಾಗದಲ್ಲಿ  ಮಾರ್ಕೇಟಿಂಗ್ ಎಕ್ಸಿಕ್ಯೂಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಹಲವಾರು ಸಂಘ ಸಂಸ್ಥೆಗಳಲ್ಲಿ ಇವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದು, ಬ್ರಾಹ್ಮಣ ಸಭಾ ಕೊಡವೂರು, ಜಿಲ್ಲಾ ನಾಗರಿಕ ಆರೋಗ್ಯ ವೇದಿಕೆ, ರಂಗಭೂಮಿ (ರಿ). ಉಡುಪಿ, ತುಳುಕೂಟ ಉಡುಪಿ, ಅಂಚೆ ಮನೋರಂಜನಾ ಕೂಟ, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಇದರ ಮಹಿಳಾ ಘಟಕ, ಉಡುಪಿ ಜಿಲ್ಲಾ ಲೇಖಕಿಯರ ಸಂಘ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ(ರಿ) ಉಡುಪಿ,
ಸ್ಟಾರ್ ಸಿಟಿ ಜೇಸಿಐಯ ಮಾಜಿ ಅಧ್ಯಕ್ಷೆ, ಮಲ್ಪೆ ಕೊಡವೂರು ರೋಟರಿಯ ಕಾರ್ಯದರ್ಶಿ ಮತ್ತು 2012-2014ನೇ ಸಾಲಿಗೆ ಅಧ್ಯಕ್ಷೆಯಾಗಿ ಆಯ್ಕೆಗೊಂಡು 11 ಜಿಲ್ಲಾ ಪ್ರಶಸ್ತಿ ತನ್ನದಾಗಿಸಿಕೊಂಡು, ರೋಟರಿ ವಲಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ. 2016-2017ನೇ ಸಾಲಿನಲ್ಲಿ ರೋಟರಿ ಜಿಲ್ಲಾ ಶುಭಾಶಯ ಸಮಿತಿಯ ಸಭಾಪತಿಯಾಗಿ ಹಾಗು 2017-2018ನೇ ಸಾಲಿನಲ್ಲಿ ಡೆವಲಪ್ ಮೆಂಟ್ ಆಫ್ ಉಮೆನ್ ಮೆಂಬರ್ಸ್ ಇನ್ ರೋಟರಿಯ ಉಪಸಭಾ ಪತಿಯಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ರೋಟರಿ ಉಡುಪಿ ರಾಯಲ್ ಸದಸ್ಯೆಯಾಗಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲೂ ಕೈಯಾಡಿಸಿರುವ ಪೂರ್ಣಿಮಾರವರು ತೋಚಿದ್ದನ್ನು ಗೀಚಿದಾಗ ಎಂಬ ಲಘು ಬರಹಗಳ ಸಂಗ್ರಹ ಹಾಗೂ ವಿಪ್ರ ವಿಚಾರಧಾರೆ ಎಂಬ ಎರಡು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಇತ್ತೀಚೆಗೆ ಉಡುಪಿ ಯಲ್ಲಿ ನಡೆದ ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿ​ ​ಸಿದ್ದಾರೆ.ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಸ್ತುತ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇದರ ಗೌರವ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊಡವೂರು ಶ್ರೀ ಶಂಕರನಾರಾಯಣ ದೇವಳದ ಬ್ರಹ್ಮಕಲಶೋತ್ಸವ ಹಾಗು ಜೀರ್ಣೋದ್ದಾರ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷರಾಗಿ ಸ್ಮರಣ ಸಂಚಿಕೆ ಶ್ರೀಶಂ ವೈಭವದ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಕ್ಕಳ ನಾಟಕ ಗಳನ್ನು ನಿರ್ದೇಶಿಸಿದ ಇವರು ಯಕ್ಷಗಾನ ಪ್ರದರ್ಶನವನ್ನು ನೀಡಿರುತ್ತಾರೆ. 
ಅಂಚೆ ಚೀಟಿ ಸಂಗ್ರಹಣೆ ಇವರ ಹವ್ಯಾಸವಾಗಿದ್ದು, ‘ಕುಂಚದೊಳಗೆ ಬೆರೆತ ಅಂಚೆ ಚೀಟಿ’ ಹಾಗು “ಅಂಚೆ ಚೀಟಿಯ ಕಥನ~ಜೊತೆಯಾಗಿದೆ ಕವನ”, “ಅಂಚೆ ಚೀಟಿಯ ವಿಸ್ಮಯ” ಎಂಬ ಪ್ರದರ್ಶನಗಳನ್ನು ಏರ್ಪಡಿಸಿ ಜನಮನ್ನಣೆ ಗಳಿಸಿರುತ್ತಾರೆ. ಇವರು ಸಂಪಾದಿಸಿದ ಕನ್ನಡ ಹಾಗು ಆಂಗ್ಲ ಅಕ್ಷರ ಮಾಲೆ ಮತ್ತು ಗಾದೆ ಮಾತುಗಳ ಶೀರ್ಷಿಕೆಯ ಅಂಚೆಚೀಟಿ ಪ್ರದರ್ಶನಕ್ಕೆ ರಾಜ್ಯಮಟ್ಟದಲ್ಲಿ ಕಂಚಿನ ಪದಕದ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಓದುವ ಹವ್ಯಾಸದೊಂದಿಗೆ  ಕಾರ್ಯಕ್ರಮ ಸಂಯೋಜನೆ ಹಾಗೂ ನಿರೂಪಣೆ, ಮತ್ತು ದೂರದರ್ಶನದಲ್ಲಿ ನಿರೂಪಕಿ ಯಾಗಿ ಗುರುತಿಸಿಕೊಂಡಿರುತ್ತಾರೆ.  ತ್ರೋಬಾಲ್ ಹಾಗೂ ಬ್ಯಾಡ್ಮಿಂಟನ್ ಇವರ ನೆಚ್ಚಿನ ಆಟ.  ಇವರ ಹಲವಾರು ಲೇಖನಗಳು ವಿವಿಧ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಅಭಿನಂದಿಸಿದ್ದಾರೆ. ದೆಹಲಿ ಕನ್ನಡಿಗ ಆಯೋಜಿಸಿದ್ದ ಮಹಿಳಾ ರಾಷ್ಟ್ರೀಯ ಕನ್ನಡ ಸಮ್ಮೇಳನದ ಉದ್ಘಾಟಕ ರಾಗಿ, ಸನ್ಮಾನವನ್ನು ಸ್ವೀಕರಿಸಿದ್ದಾರೆ.

ಜೇಸಿ ಸಂಸ್ಥೆ ಕೊಡಮಾಡಿದ ಜೇಸಿ ಮಾನವತಾ ರತ್ನ ಪ್ರಶಸ್ತಿ, ಹಾಗು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಯುವರತ್ನ’ ಪ್ರಶಸ್ತಿ , ವರುಣ್ ಕಲಾ ಸಾಹಿತ್ಯ ಸಾಂಸ್ಕತಿಕ ಸಂಸ್ಥೆ ಸವಣೂರು ವತಿಯಿಂದ ವರುಣ್ ಯುವ ಸಾಧಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ 2018ರಲ್ಲಿ ಉಡುಪಿಯಲ್ಲಿ ಜರಗಿದ ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ ಸಮ್ಮೇಳನದ ಯಶಸ್ವಿಗೆ ಕಾರಣರಾಗಿದ್ದಾರೆ. ಕೊಡವೂರಿನಲ್ಲಿ ಉಡುಪ ರತ್ನ ಪ್ರತಿಷ್ಠಾನದ ಮುಖಾಂತರ ಸಮಾಜಿ ಮುಖಿ ಕಾರ್ಯ ಕ್ರಮ ಹಾಗು ಕೊಡವೂರಿನಲ್ಲಿ ಭಾಮಾ ಫಿಲಾಟಲಿ ಗ್ಯಾಲರಿ ನಡೆಸಿಕೊಂಡು ಬರುತ್ತಿ​ದ್ದ ಪೂರ್ಣಿಮಾ ಇವರ ಮುಕುಟಕ್ಕೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ ವಿಶೇಷ ಮೆರಗನ್ನು ನೀಡಿದೆ. 

​​
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!