Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಹಾರನ್ ತಂದ ಸಾವು

ಬೈಕ್​ ಹಾರನ್​ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆಯು ಬಿ.ಸಿ. ರೋಡಿನ ಶಾಂತಿಯಂಗಡಿ ಸಮೀಪದ ತಲಪಾಡಿ ಎಂಬಲ್ಲಿ ನಡೆದಿದೆ.

ಮಹಮ್ಮದ್​ ಆಸಿಫ್​ ಎಂಬಾತನನ್ನು ಮಹಮ್ಮದ್​ ನೌಫೆಲ್​ ಹಾಗೂ ಮಹಮ್ಮದ್​ ನೌಸೀರ್​​ ಕೊಲೆ ಮಾಡಿದ್ದು ಇವರನ್ನು ವಶಕ್ಕೆ ಪಡೆದಿರುವ ಬಂಟ್ವಾಳ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ತಡರಾತ್ರಿ ಪೊನ್ನೋಡಿಯ ಹೋಟೆಲ್​ ಎದುರು ಪದೇ ಪದೇ ಹಾರ್ನ್ ಹಾಕುತ್ತಾನೆ ಎಂಬ ಕಾರಣಕ್ಕೆ ಮಹಮ್ಮದ್​ ಆಸಿಫ್​ ವಿರುದ್ಧ ಮಹಮ್ಮದ್​ ನೌಫೆಲ್​ ಹಾಗೂ ಮಹಮ್ಮದ್​ ನೌಸಿರ್​ ಸಿಟ್ಟಿಗೆದ್ದಿದ್ದರು. ಈ ಸಿಟ್ಟು ಅತಿರೇಖಕ್ಕೆ ತಿರುಗಿದ ಪರಿಣಾಮ ನೌಫೆಲ್​ ಹಾಗೂ ನೌಸಿರ್​ ಆಸಿಫ್​ನನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದಿದ್ದಾರೆ.

ಈ ಸಂಬಂಧ ಶಾಂತಿಯಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!