Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಕರಾವಳಿ ಪ್ರದೇಶದ ಸಾಧು ಸಂತರ ಸಮಾಗಮ

ಬೆಂಗಳೂರು : ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ಸನ್ನಿಧಿಯಲ್ಲಿ ಕರಾವಳಿ ಪ್ರದೇಶದ ಅನೇಕ ಸಾಧು ಸಂತರ ಸಮಾಗಮ ಅಪೂರ್ವ ಕಾರ್ಯಕ್ರಮ ವೈಭವದಿಂದ ನೆರವೇರಿತು .

ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ , ಬೆಂಗಳೂರು ಆರ್ಯ ಈಡಿಗ ಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ , ಉಡುಪಿ ಪಡುಕತ್ಯಾರು ಶ್ರೀ ಅನೆಗುಂದಿ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ , ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಕಿ , ಕರಿಂಜ ಶ್ರೀ ಸತ್ಯನಾರಾಯಣ , ಶ್ರೀ ವೀರಾಂಜನೇಯ ಶ್ರೀ ರಾಘವೇಂದ್ರ ಗುರುಪೀಠದ ಶ್ರೀ ಮುಕ್ತಾನಂದ ಸ್ವಾಮೀಜಿ , ಮಂಗಳೂರು ರಾಮಕೃಷ್ಣಾಶ್ರಮದ
ಸ್ವಾಮಿ ರಘುರಾಮಾನಂದಜೀ
ಕಾರ್ಕಳ ನೀರೆ ಬೈಲೂರು ರಾಮಕೃಷ್ಣಾಶ್ರಮದ
ಸ್ವಾಮಿ ಪ್ರಬೋಧಾನಂದ ಜಿ
ಉಪಸ್ಥಿತರಿದ್ದರು .ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು .

ಆರಂಭದಲ್ಲಿ ವಿದ್ವಾನ್ ಸತ್ಯನಾರಾಯಣಾಚಾರ್ಯರು , ವಿದ್ವಾನ್ ರಾಮ ವಿಠಲಾಚಾರ್ಯ ,ವಿದ್ಯಾಪೀಠದ ವ್ಯವಸ್ಥಾಪಕ ಶೇಷಾದ್ರಿ , ಶ್ರೀಗಳ ಆಪ್ತ ವಿಷ್ಣುಮೂರ್ತಿ ಆಚಾರ್ಯ , ಕೃಷ್ಣ ಭಟ್ ಹಾಗೂ ವಿದ್ಯಾಪೀಠದ ಪ್ರಾಧ್ಯಾಪಕ ವಿದ್ವಾಂಸರು ನೂರಾರು ವಿದ್ಯಾರ್ಥಿಗಳು ವಾದ್ಯಘೋಷ ಸಹಿತ ಪೂರ್ಣಕುಂಭದೊಂದಿಗೆ ಎಲ್ಲಾ ಸ್ವಾಮೀಜಿಯವರನ್ನು ಮಾಡಿಕೊಂಡರು . ಬಳಿಕ ಎಲ್ಲ ಸ್ವಾಮೀಜಿಯವರಿಗೂ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ದರ್ಶನ ಮಾಡಿಸಲಾಯಿತು .
ನಂತರ ವಿದ್ಯಾಪೀಠದ ವಿದ್ಯಾರ್ಥಿ ಸತ್ಯವೀರನ ಸುಶ್ರಾವ್ಯವಾದ ಕೀರ್ತನೆಯೊಂದಿಗೆ ಆರಂಭಗೊಂಡ ಧರ್ಮಸಭೆಯನ್ನು
ವಿದ್ವಾನ್ ಕಟ್ಟಿ ಬದರೀನಾಥಾಚಾರ್ಯ ನಿರೂಪಣೆಗೈದು ,ಕೊನೆಯಲ್ಲಿ ವಂದನಾರ್ಪಣೆನ್ನೂ ನಡೆಸಿಕೊಟ್ಟರು .
ವಾಸುದೇವ ಭಟ್ ಪೆರಂಪಳ್ಳಿ ಸ್ವಾಗತಿಸಿದರು .
ಪ್ರದೀಪ್ ಕುಮಾರ್ ಕಲ್ಕೂರ ಅಭಿನಂದನಾ ಮಾತುಗಳನ್ನಾಡಿದರು .‌

ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಎಲ್ಲಾ ಸ್ವಾಮೀಜಿಯವರು ಎಲ್ಲಾ ಸ್ವಾಮೀಜಿಯವರನ್ನು ಯಥೋಚಿತ ಸತ್ಕಾರದೊಂದಿಗೆ ಸಂಮಾನಿಸಿ ಅಭಿನಂದಿಸಿದರು .ಧರ್ಮಸಭೆಯಲ್ಲಿ ಎಲ್ಲ ಸ್ವಾಮೀಜಿಯವರೂ ಸಂದೇಶ ನೀಡಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸಾಧನೆ ಔದಾರ್ಯ ಗುಣಗಳನ್ನು ಕೊಂಡಾಡಿ ತಮಗೆಲ್ಲ ಅವರು ತೋರಿದ ಅಭಿಮಾನ ಪ್ರೀತಿಯನ್ನು ಮನಸಾ ಸ್ಮರಿಸಿಕೊಂಡರು .

ಇದೇ ಸಂದರ್ಭದಲ್ಲಿ ವಿದ್ಯಾಪೀಠದ ಆವರಣದಲ್ಲಿ ನಿರ್ಮಾಣವಾಗಲಿರುವ ನೂತನ ಶ್ರೀ ವಿಶ್ವೇಶತೀರ್ಥ ಗುರುಭವನನಕ್ಕೆ ಎಲ್ಲ ಸ್ವಾಮೀಜಿಯವರೂ ಶಿಲಾಪೂಜನ ನೆರವೇರಿಸಿದರು .

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!