ನಕಲಿ ಪೊಲೀಸ್ ಮತ್ತು ನಕಲಿ ಪತ್ರಕರ್ತರ ಖತರ್ನಾಕ್ ಗ್ಯಾಂಗ್ ಅಂದರ್

ನಕಲಿ ಪೊಲೀಸ್ ಮತ್ತು ನಕಲಿ ಪತ್ರಕರ್ತರ ಖತರ್ನಾಕ್ ಗ್ಯಾಂಗ್ ಒಂದು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅಂದರ್ ಆಗಿದೆ. ಕಿತ್ತೂರು ಬಳಿಯ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಿ ಹಣ ವಸೂಲಿ ಮಾಡುತ್ತಿದ್ದ ಈ ಗ್ಯಾಂಗ್ ನ್ನು ಕಿತ್ತೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತ ಆರೋಪಿಗಳನ್ನು ಸೆಹಲ್ ಅಹ್ಮದ್ ತರಸಗಾರ, ನಯೀಮ್ ಮುಲ್ಲಾ, ಸರ್ವೇಶ್ ತುಡುವೇಕರ, ಬಸವರಾಜ ಪಾಟೀಲ್, ಜಾಕೀರ ಹುಸೇನ್ ಮನಿಯಾರ ಎಂದು ಹೆಸರಿಸಲಾಗಿದೆ. ಈ ಖತರ್ನಾಕ್ ಖದೀಮರು ಕೋಳಿ ಮೊಟ್ಟೆ ಸಾಗಿಸುತ್ತಿದ್ದ ಬೆಳಗಾವಿ ನಿವಾಸಿ ಅತಾವುಲ್ಲಾ ಎಂಬನಿಂದ ಸುಲಿಗೆ ಮಾಡಿದ್ದರು. ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದೀಯಾ ಎಂದು ವಾಹನ ನಿಲ್ಲಿಸಿ ಬ್ಲ್ಯಾಕ್ ಮೇಲ್ ಮಾಡಿ 4 ಲಕ್ಷದ 79 ಸಾವಿರ ಹಣವನ್ನು ವಸೂಲಿ ಮಾಡಿದ್ದರು. ಈ ಬಗ್ಗೆ ಅತಾವುಲ್ಲಾ ಪೊಲೀಸ್ ದೂರು ನೀಡಿದ್ದು ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ.

ಬಂಧಿತರಿಂದ 70 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಇಂಡಿಕಾ ಕಾರು, ನಕಲಿ ಪ್ರೆಸ್ ಗುರುತಿನ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನು ನಾಲ್ವರು ಭಾಗಿಯಾಗಿದ್ದು ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ವಸೂಲಿ ಮಾಡಿದ ಉಳಿದ ನಾಲ್ಕು ಲಕ್ಷ ರೂಪಾಯಿ, ಇತರ ನಕಲಿ ಗುರುತಿನ ಚೀಟಿಯ ಪತ್ತೆ ಕಾರ್ಯವನ್ನು ಪೊಲೀಸರು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಮಾಡಬಾರದ ಕೆಲಸ ಮಾಡೋಕೆ ಹೋಗಿ ಖತರ್ನಾಕ್ ಗಳು ಅಂದರ್ ಆಗಿದ್ದಾರೆ.

 

 
 
 
 
 
 
 
 
 
 
 

Leave a Reply