ಉಡುಪಿ: ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ!

ಉಡುಪಿ: ದಿನಾಂಕ 16/01/2023 ರಂದು ಉಡುಪಿ ತಾಲೂಕು, ಮೂಡನಿಡಂಬೂರು ಗ್ರಾಮದ ಟೌನ್ ಹಾಲ್ ಬಳಿಯ ರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಮತ್ತು Methamphetamine Durg ಮಾರಾಟ ಮಾಡಲು ಹೊಂದಿದ್ದ 1. ರಾಘವೇಂದ್ರ ದೇವಾಡಿಗ (41), ತಂದೆ: ಕಡಿಯಾಳಿ ವೆಂಕಟಪ್ಪ ದೇವಾಡಿಗ, ವಾಸ: ನಂಬ್ರ 1-51, ಮೇಲ್ಮನೆ, ದೇವಸ್ಥಾನ ಬೆಟ್ಟು, ಬೆಲ್ಲಾರ್ ಪಡಿ, ಹಿರಿಯಡ್ಕ ಗ್ರಾಮ, ಉಡುಪಿ ತಾಲೂಕು, 2. ಜಗದೀಶ್‌ ಪೂಜಾರಿ (32), ತಂದೆ:ಶಿವಪ್ಪ ಪೂಜಾರಿ, ವಾಸ:ಮೆರಾಕಿ ಪ್ಲಾಟ್‌, 1 ನೇ ಮಹಡಿ, ವಾಗ್ಲೆ ಸ್ಟೋರ್‌ ಬಳಿ, ಅವೆವೂರು ರಸ್ತೆ, 80 ಬಡಗುಬೆಟ್ಟು, ಉಡುಪಿ ಇವರನ್ನು ಮಂಜುನಾಥ, ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರು ದಾಳಿ ನಡೆಸಿ, ಆರೋಪಿಗಳನ್ನು ದಸ್ತಗಿರಿಗೊಳಿಸಿ 1 ಕೆ.ಜಿ 176 ಗ್ರಾಂ ತೂಕದ ಗಾಂಜಾ , 10 ಗ್ರಾಂ ತೂಕದ Methamphetamine Durg, ನಂಬ್ರ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಆಕ್ಟಿವಾ ಸ್ಕೂಟರ್ 1, ಮೊಬೈಲ್‌ಪೋನ್- 2, ವೇಯಿಂಗ್‌ಮೀಶನ್-1,ಪೌಡರ್‌ಪ್ಯಾಕ್‌ ಮಾಡಲು ಬಳಸುವ ಸಣ್ಣ ಪ್ಲಾಸ್ಟಿಕ್‌ ಕವರ್-17 ವಶಪಡಿಸಿಕೊಂಡಿರುವುದಾಗಿರುತ್ತದೆ. ಸ್ವಾಧೀನಪಡಿಸಿಕೊಂಡ Methamphetamine Durg ಮೌಲ್ಯ ರೂಪಾಯಿ 45,000/- ಆಗಿರುತ್ತದೆ. ಗಾಂಜಾದ ಮೌಲ್ಯ ರೂಪಾಯಿ 28,000/-ಸ್ಕೂಟರ್‌ನ ಮೌಲ್ಯ ರೂಪಾಯಿ 80,000/- ಆಗಿರುತ್ತದೆ. ಸ್ವಾಧೀನಪಡಿಸಿಕೊಂಡಿರುವ 2 ಮೊಬೈಲ್ ಪೋನ್‌ಗಳ ಮೌಲ್ಯ ರೂಪಾಯಿ 55,000/-, ವೇಯಿಂಗ್ ಮಿಷನ್‌ ಮೌಲ್ಯ ರೂಪಾಯಿ 1,000/-ಆಗಿದ್ದು, ಸ್ವಾಧೀನಪಡಿಸಿಕೊಂಡಿರುವ ಎಲ್ಲಾ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 2,09,000/- ಆಗಿರುತ್ತದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2023 ಕಲಂ : 22(b), 8(C), 20(b)(ii) (B) ಎನ್.ಡಿ.ಪಿ.ಎಸ್. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 
 
 
 
 
 
 
 
 
 
 

Leave a Reply