ಮಂಗಳೂರು ಬಸ್ ನಿಲ್ದಾಣದ ಬಳಿ ನವಜಾತ ಶಿಶು ಪತ್ತೆ!

ನವಜಾತ ಶಿಶುವೊಂದನ್ನು ನಗರದ ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣದಲ್ಲಿ ಹೆತ್ತವರು ಬಿಟ್ಟು ಹೋಗಿದ್ದು ಗುರುವಾರ ಈ ಮಗು ಪತ್ತೆಯಾಗಿದ್ದು ವೆನ್ಲಾಕ್ ನ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವೆನ್ಲಕ್ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ವೈದ್ಯರಾದ ಡಾ| ಬಾಸಿತ್ ಈ ಗಂಡು ಮಗುವಿಗೆ ಸುಮಾರು ಒಂದು ವಾರ ಆಗಿರಬಹುದು ಎಂದು ತಿಳಿಸಿ ತಲೆಯಲ್ಲಿ ಸಣ್ಣ ಸಣ್ಣ ಗಾಯಗಳಾಗಿದ್ದು ಈ ಮಗು ಸಿಕ್ಕ ಸಮಯದಲ್ಲಿ ಮೂಗಿಗೆ ಟ್ಯೂಬ್ ಹಾಕಲಾಗಿತ್ತು. ಈ ಮಗುವಿಗೆ ಫಿಡ್ಸ್ ಕೂಡ ಇದೆ ಎಂದು ತಿಳಿದುಬಂದಿದೆ.

ಮಧ್ಯಾಹ್ನದ ಸಮಯದಲ್ಲಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ಒಬ್ಬ ಗಂಡಸು ಮತ್ತು ಹೆಂಗಸಿನೊಂದಿಗೆ ಸ್ಥಳೀಯರು ಈ ಮಗುವನ್ನು ನೋಡಿದ್ದು ಸಂಜೆ ವೇಳೆಗೆ ಮಗುವನ್ನು ಅಲ್ಲೇ ಇದ್ದ ಲೈಟ್ ಕಂಬವೊಂದರ ಬುಡದಲ್ಲಿ ಇರಿಸಿ ತೆರಳಿದ್ದರು. ಅಲ್ಲಿ ಮಗು ಮಾತ್ರ ಇರುವುದನ್ನು ನೋಡಿದ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಭೇಟಿ ನೀಡಿದ ಪಾಂಡೇಶ್ವರ ಠಾಣಾ ಪೊಲೀಸರು ಮಗುವನ್ನು ಲೇಡಿಗೋಷನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ತಪಾಸಣೆ ನಡೆಸಿ, ವೆನ್ಲಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಗುವನ್ನು ಯಾರು ಬಿಟ್ಟು ಹೋಗಿದ್ದಾರೆ ಎನ್ನುವ ಮಾಹಿತಿಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 
 
 
 
 
 
 
 
 

Leave a Reply