ಉಡುಪಿ: ಮೆಹಂದಿ ಕರ್ಕಶ ಡಿಜೆಗೆ ಸಜೆ

ಉಡುಪಿ ಮಾ.24: : ಪುತ್ತೂರು ಗ್ರಾಮದಲ್ಲಿ ಮನೆಯೊಂದರಲ್ಲಿ ನಡೆಯುತ್ತಿದ್ದ ಮೆಹೆಂದಿ ಕಾರ್ಯಕ್ರಮದಲ್ಲಿ ಯಾವುದೇ ಪರವಾನಿಗೆ ಪೂರ್ವಾನುಮತಿ ಇಲ್ಲದೆ ಅವಧಿ ಮೀರಿ ತಡರಾತ್ರಿ ವರೆಗೆ ಅತೀ ಕರ್ಕಶವಾದ ಡಿ.ಜೆ ಸೌಂಡ್ ಹಾಕಿ ಸಾರ್ವಜನಿಕರಿಗೆ ಸಮಸ್ಯೆಯನ್ನುಂಟು ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾ.22 ರಂದು ನಗರ ಠಾಣಾ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿ ಇದ್ದ ವೇಳೆ ತಡರಾತ್ರಿ ಪುತ್ತೂರು ಗ್ರಾಮದ ಕೊಡಂಕೂರು ಪುತ್ರನ್ ಗ್ಯಾಸ್ ಗೋಡಾನ್ ಬಳಿಯ ನಿವಾಸಿ ಆಪಾದಿತ ರವಿರಾಜ್ ಎಂಬಾತ ತನ್ನ ಮನೆಯ ಅಂಗಳದಲ್ಲಿ ಮೆಹೆಂದಿ ಕಾರ್ಯಕ್ರಮದ ನಿಮಿತ್ತ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ತಡರಾತ್ರಿ ವರೆಗೆ ಅತೀ ಕರ್ಕಶವಾದ ಡಿ.ಜೆ ಸೌಂಡ್ಸ್ ಹಾಕಿಕೊಂಡು ನೃತ್ಯ ಮಾಡುತ್ತಿದ್ದು ಕಂಡು ಬಂದಿದೆ.

ಈ ವೇಳೆ ಸ್ಥಳಕ್ಕೆ ತೆರಳಿದ ಪೊಲೀಸರು ಸ್ಥಳದಲ್ಲಿ ಇದ್ದ ಸೌಂಡ್ಸ್ ಮಿಕ್ಸರ್ ಹಾಗೂ 2 ಸೌಂಡ್ ಬಾಕ್ಸ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply