Janardhan Kodavoor/ Team KaravaliXpress
25.6 C
Udupi
Thursday, September 29, 2022
Sathyanatha Stores Brahmavara

ಸಹೋದ್ಯೋಗಿ ಪಡೆದಿದ್ದ ಲಂಚದ ಹಣ ಮನೇಲಿಟ್ಟುಕೊಂಡು ಸಿಕ್ಕಿಬಿದ್ದ ಅಧಿಕಾರಿ!

ಧಾರವಾಡ: ಇನ್ನೊಬ್ಬ ಅಧಿಕಾರಿಯ ಲಂಚದ ಹಣ ಮನೆಯಲ್ಲಿ ಇಟ್ಟುಕೊಂಡಿದ್ದ ಅಧಿಕಾರಿಯೊಬ್ಬರು ಸಿಕ್ಕಿಬಿದ್ದಿದ್ದು, ಎಸಿಬಿ ಅಧಿಕಾರಿಗಳ ದಾಳಿ ವೇಳೆ ಲಕ್ಷಾಂತರ ರೂಪಾಯಿ ಹಣವೂ ಪತ್ತೆಯಾಗಿದೆ.

ಸಣ್ಣ ನೀರಾವರಿ ಇಲಾಖೆಯ ಧಾರವಾಡ ಉಪವಿಭಾಗದಲ್ಲಿನ ತನಿಖಾ ವಿಭಾಗದ ಎಇಇ ಪ್ರಶಾಂತ್ ನಗದು ಸಹಿತ ಸಿಕ್ಕಿಬಿದ್ದ ಅಧಿಕಾರಿ. ಇವರು ಅದೇ ಇಲಾಖೆಯ ಇನ್ನೊಬ್ಬ ಅಧಿಕಾರಿ ಶಿವಪ್ಪ ಮಂಜಿನಾಳಗೆ ಹಸ್ತಾಂತರಿಸಬೇಕಿದ್ದ ಲಂಚದ ಹಣವನ್ನು ವಿದ್ಯಾಗಿರಿ ಸತ್ತೂರ ಕಾಲನಿಯಲ್ಲಿರುವ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು.

ಶಿವಪ್ಪ ಮಂಜಿನಾಳನ ಸೋದರನ ಮಗ ಮಹಾಂತೇಶ ಮಂಜಿನಾಳ ಪ್ರಶಾಂತ್ ಮನೆಯಲ್ಲಿದ್ದ ಹಣವನ್ನು ವಿಜಯಪುರ ಜಿಲ್ಲೆಯ ಕಂದಗನೂರ ಗ್ರಾಮಕ್ಕೆ ಕೊಂಡೊಯ್ಯಲು ಮನೆಯಿಂದ ಹೊರಬರುತ್ತಿದ್ದಂತೆ ಸಿಕ್ಕಿಬಿದ್ದಿದ್ದಾನೆ. ಆಗ ಮಹಾಂತೇಶ 16 ಲಕ್ಷ ರೂ. ಸಹಿತ ಸಿಕ್ಕಿಬಿದ್ದಿದ್ದು, ಅಧಿಕಾರಿಗಳು ನಂತರ ಪ್ರಶಾಂತ್​ ಮನೆ ಮೇಲೆ ದಾಳಿ ನಡೆಸಿದಾಗ 1.8 ಲಕ್ಷ ರೂ. ಸಿಕ್ಕಿದೆ. ಮೂವರನ್ನೂ ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!