ಬ್ರಹ್ಮಾವರ: ವಿವಾಹಿತೆ ಆತ್ಮಹತ್ಯೆ

ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಿನ್ಸಿ ಶೈಜು ಥೋಮಸ್‌ (30) ಆತ್ಮಹತ್ಯೆ ಮಾಡಿಕೊಂಡವರು. ಇವರು ವಿವಾಹಿತರಾಗಿದ್ದು ಇವರ ಗಂಡ ಉದ್ಯೋಗದ ನಿಮಿತ್ತ ದುಬೈಯಲ್ಲಿದ್ದರು, ಇವರು ಮಗಳೊಂದಿಗೆ ಗಂಡನ ಮನೆ ಹಂದಾಡಿ ಗ್ರಾಮದ ಬೇಳೂರು ಜೆಡ್ಡು ಎಂಬಲ್ಲಿನ ಮನೆಯ  ಮಹಡಿಯಲ್ಲಿ ಹಾಗೂ ಅವಳ ಅತ್ತೆ, ಮಾವ ಮನೆಯ ಕೆಳ ಅಂತಸ್ತಿನಲ್ಲಿ ವಾಸವಾಗಿದ್ದರು.

ಬಿನ್ಸಿ ಶೈಜು ಥೋಮಸ್‌ ಅವರು ಅ.26 ರಂದು ರಾತ್ರಿ ಇಲಿಪಾಷಣ ಸೇವಿಸಿ ಡೆತ್‌ ನೋಟ್‌ ಬರೆದಿಟ್ಟು ಯಾರಿಗೂ ಹೇಳದೆ ಮನೆಯಲ್ಲಿದ್ದರು. ಅ.31 ರಂದು ಮನೆಯಲ್ಲಿ ತೀವ್ರ ವಾಂತಿ ಭೇದಿಯಿಂದ ಅಸ್ವಸ್ಥಗೊಂಡು ಬಳಲುತ್ತಿದ್ದವರನ್ನು ಚಿಕಿತ್ಸೆಗಾಗಿ ಬ್ರಹ್ಮಾವರದ ಆಸ್ಪತ್ರೆಗೆ ದಾಖಲು ಮಾಡಿದ್ದರು. 

ಬಳಿಕ ವೈದ್ಯರ ಸಲಹೆಯಂತೆ ಮಣಿಪಾಲ  ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿನ್ಸಿ ಶೈಜು ಥೋಮಸ್‌ ಅವರು ಚಿಕಿತ್ಸೆ ಫಲಕಾರಿಯಾಗದೇ  ನ.5 ರಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 
 
 
 
 
 
 
 
 
 
 

Leave a Reply