ವಿ ರಾಕ್ಸ್ ಡಾನ್ಸ್ ಕಂಪನಿಗೆ 5 ನೇ ವಾರ್ಷಿಕೋತ್ಸವದ ಸಂಭ್ರಮ

ಉಡುಪಿ: ಉಡುಪಿಯ ಪ್ರತಿಷ್ಠಿತ ನೃತ್ಯ ಕೇಂದ್ರ ಶ್ರೀ ವಸಂತ್ ನಾಯ್ಕ್ ಇವರ ಸಾರಥ್ಯದ ವಿ ರಾಕ್ಸ್ ಡಾನ್ಸ್ ಕಂಪನಿಯಲ್ಲಿ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಬ್ರಹ್ಮಗಿರಿಯಲ್ಲಿರುವ ನೃತ್ಯ ಕೇಂದ್ರದಲ್ಲಿ ಆಚರಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ, ಮಂಗಳೂರು ವಿಶ್ವವಿದ್ಯಾನಿಲಯದ ಎಂ. ಎ. ಭರತನಾಟ್ಯ ಪರೀಕ್ಷೆಯಲ್ಲಿ ರಾಂಕ್ ವಿಜೇತೆ ಶ್ರೀವಿದ್ಯಾ ಸಂದೇಶ್ ನೃತ್ಯವನ್ನು ಸಹಪಠ್ಯ ಚಟುವಟಿಕೆಯನ್ನಾಗಿಸದೆ, ಇದನ್ನು ಕಲಿಕೆಯ ಒಂದು ಭಾಗವನ್ನಾಗಿಸಬೇಕೆಂಬ ಸಲಹೆಯನ್ನು ನೃತ್ಯಪಟುಗಳಿಗೆ ನೀಡಿದರು. ಇನ್ನೋರ್ವ ಅತಿಥಿಯಾದ ಬ್ರಹ್ಮಗಿರಿಯ ಶ್ರೀ ದುರ್ಗಾ ಕಾಂಪ್ಲೆಕ್ಸ್ ನ ಮಾಲಿಕ ನಾರಾಯಣ ಭಂಡಾರಿ ಭಾಗವಹಿಸಿ ಸುತ್ತಮುತ್ತಲಿನ ನೂರಾರು ಮಕ್ಕಳು ಈ ಪ್ರತಿಷ್ಠಿತ ಸಂಸ್ಥೆಯಿಂದ ನೃತ್ಯವನ್ನು ಕಲಿತು ಸಂಸ್ಥೆಯನ್ನು ಬೆಳೆಸಿ ಸಂಸ್ಥೆಗೆ ಒಳ್ಳೆಯ ಹೆಸರನ್ನು ತರಲಿ ಎಂದು ಆಶೀರ್ವದಿಸಿದರು. ಇನ್ನೋರ್ವ ಅತಿಥಿಯಾದ ಪಡುಬಿದ್ರೆ ಸರಸ್ವತಿ ನಿತ್ಯ ಕಲಾಕೇಂದ್ರದ ನೃತ್ಯ ಗುರು ಹಾಗೂ ಹಲವಾರು ರಿಯಾಲಿಟಿ ಶೋ ಹಾಗೂ ಆಲ್ಬಮ್ ಸಾಂಗ್ ಗಳಿಗೆ ನೃತ್ಯ ನಿಯೋಜನೆಯನ್ನು ಮಾಡಿದ ಹರೀಶ್ ಆಚಾರ್ಯ ಇವರು ವಿ ರಾಕ್ಸ್ ಡಾನ್ಸ್ ಕಂಪನಿ ಒಂದು ತುಂಬು ಕುಟುಂಬ ಇದ್ದ ಮನೆಯ ಹಾಗೆ ಹಾಗೂ ಈ ಸಂಸ್ಥೆಯಲ್ಲಿ ಕಲಿಯುವ ಮಕ್ಕಳು ನೃತ್ಯ ಕಲೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಿದರು.

ಸಮಾರಂಭದಲ್ಲಿ ನೃತ್ಯ ಕ್ಷೇತ್ರದಲ್ಲಿ ಎರಡು ಗಿನ್ನಿಸ್ ದಾಖಲೆಯನ್ನು ಹೊಂದಿದ ಹಾಗೂ ಹಲವಾರು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ವಿಶಿಷ್ಟ ಸಾಧನೆಯನ್ನು ಮಾಡಿದ, ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 97% ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ ನೃತ್ಯಪಟು ಸಂಸ್ಥೆಯ ದಿ ಜೂನಿಯರ್ ಖ್ಯಾತಿಯ ಕೃತಿ ಆರ್ ಸನಿಲ್ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ವಿಶೇಷ ಸಾಧನೆ ಮಾಡಿದ ನೃತ್ಯಪಟುಗಳಾದ ಅಹನಾ, ಸಾನ್ವಿ ಅಂಚನ್, ಅನಿಷಾ, ತನಿಷಾ, ಸಿಂಚನ, ಮೇಘನ, ವರ್ಷಿಣಿ, ತ್ರಿಶಾ, ಸನ್ನಿಧಿ, ಪ್ರಾಪ್ತಿ, ಶಶಿ, ವಿನೀತ್, ಪ್ರಶಾಂತ್, ಸುಶಾಂತ್ ಕೆರೆಮಠ ಹಾಗೂ ಸಂಸ್ಥೆಗೆ ಕಾಸ್ಟ್ಯೂಮ್ ಸ್ಟಿಚ್ ಮಾಡಿಕೊಡುವ ಶ್ರೀಮತಿ ವಸಂತಿ ಆಚಾರ್ಯ, ಪ್ರಾಪರ್ಟಿ ತಯಾರಿಸುವ ಚಿತ್ರಕಲಾ ಸಂಸ್ಥೆಯ ಹರೀಶ್ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು.

ವಿ ರಾಕ್ಸ್ ಡಾನ್ಸ್ ಕಂಪನಿ ಸಂಸ್ಥೆಯ ನೃತ್ಯ ಗುರು ಶ್ರೀ ವಸಂತ್ ನಾಯ್ಕ್ ಇವರು ತಮ್ಮ ಸಂಸ್ಥೆಗೆ ಬೆನ್ನೆಲುಬಾಗಿ ನಿಂತ ಶ್ರೀಮತಿ ರೋಹಿಣಿ ರೂಪೇಶ್, ನೃತ್ಯಪಟುಗಳ ಪೋಷಕರು ಹಾಗೂ ಸಂಸ್ಥೆಯನ್ನು ಬೆಳೆಸಲು ಸಹಕರಿಸುತ್ತಿರುವ ಎಲ್ಲರಿಗೂ ವಂದನಾರ್ಪಣೆಗೈದರು.

 
 
 
 
 
 
 
 
 
 
 

Leave a Reply