ಪಿಪಿಸಿಯಲ್ಲಿ ಜಿಲಾ ಮಟ್ಟದ ‘ವಿದ್ಯಾರ್ಥಿ – ವಿಜ್ಞಾನಿ ಸಂಗಮ’

ಆಧುನಿಕ ಸಂಶೋಧನಾ ಕ್ಷೇತ್ರದಲ್ಲಿ  ಗುರುತಿಸಲ್ಪಟ್ಟ 10 ಸವಾಲುಗಳಿಗೆ ಪರಿಹಾರ ಹುಡುಕುವಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಖ್ಯಾತ ವಿಜ್ಞಾನಿ ಗುರುಮೂರ್ತಿ ಹೆಗ್ಡೆಯವರು ಕರೆ ನೀಡಿದರು. ದಿನಾಂಕ 15ಜೂನ್  2023ರಂದು ಪೂರ್ಣಪ್ರಜ್ಞ ಕಾಲೇಜಿನ ವಿಜ್ಞಾನ ಸಂಘ, ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಮಾರ್ಗದರ್ಶನದಲ್ಲಿ  ಜಿಲಾ ಮಟ್ಟದ ‘ವಿದ್ಯಾರ್ಥಿ – ವಿಜ್ಞಾನಿ ಸಂಗಮ’ ಕಾರ‍್ಯಕ್ರಮವನ್ನು ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಟಾಟನೆಯು ಅದಮಾರು ಮಠದ ಪೀಠಾಧಿಪತಿ ಹಾಗೂ ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್ ಕೌನ್ಸಿಲ್  ಅಧ್ಯಕ್ಷ ಶ್ರೀ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ನೆರವೇರಿತು. ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್  ಕೌನ್ಸಿಲ್ ನ ಗೌರವ ಕಾರ್ಯದರ್ಶಿಗಳಾದ ಡಾ! ಜಿ ಎಸ್ ಚಂದ್ರಶೇಖರ್,  ಖ್ಯಾತ ವಿಜ್ಷಾನಿಗಳಾದ ಡಾ! ಪಿ ಶ್ರೀಕುಮಾರ್ ಡೈರೆಕ್ಟರ್ ಎಂ ಸಿ ಎನ್ ಎಸ್, ಮಣಿಪಾಲ, ಡಾ! ಸರ‍್ಯನಾರಾಯಣ ವಾರಂಬಳ್ಳಿ, ಪ್ರೊಫೆಸರ್ ಅಲಬಾಮ ವಿಶ್ವವಿದ್ಯಾಲಯ ಯು ಎಸ್ ಎ ಮತ್ತು ಡಾ! ಗುರುಮೂರ್ತಿ ಹೆಗ್ಡೆ , ಬೆಂಗಳೂರು ಇವರು ಸಂಪಲ್ಮೂಲ ವ್ಯಕಿಗಳಾಗಿ  ಭಾಗವಹಿಸಿ ತಮ್ಮ ಸಂಶೋಧನಾ ಕ್ಷೇತ್ರದ ಅನುಭವ ಹಾಗೂ ಆಗು ಹೋಗುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊoಡರು.
ನoತರ ನಡೆದ ‘ವಿದ್ಯಾರ್ಥಿ – ವಿಜ್ಞಾನಿ ನೇರ ಸಂವಾದ  ಕಾರ‍್ಯಕ್ರಮದಲ್ಲಿ ಖಗೋಳಶಾಸ್ತ್ರ, ವಸ್ತುಶಾಸ್ತ್ರ ಪೆಥಾಲಜಿ & ಕ್ಯಾನ್ಸರ್ ಸ್ಟಡೀಸ್ ವಿಷಯಗಳ ಬಗ್ಗೆ 100ಕ್ಕೂ ಅಧಿಕ ಪ್ರಶ್ನೆಗಳನ್ನು ನೆರೆದಿರುವ  ವಿದ್ಯಾರ್ಥಿಗಳು ಕೇಳಿದರು. ತಂತ್ರಜ್ಞಾನದ ಅಭಿವೃದ್ದಿಗೆ ಮೂಲ ವಿಜ್ಙಾನದಲ್ಲಿ ಸಂಶೋಧನೆ ಅತ್ಯಗತ್ಯ ಎಂಬ ಅಭಿಪ್ರಾಯ ಮೂಡಿಬಂತು.
ನೇರ ಸಂವಾದ  ಕಾರ್ಯಕ್ರಮವನ್ನು  ನೆರವೇರಿಸಿದ ಪೂರ್ಣಪ್ರಜ್ಞ ಆಡಳಿತ ಮಂಡಳಿಯ ಆಡಳಿತಾಧಿಕಾರಿ ಮತ್ತು ನಿವೃತ್ತ ಪ್ರಾಂಶುಪಾಲರಾದ ಡಾ! ಎ ಪಿ ಭಟ್ ಇವರು ವಿಜ್ಞಾನಿಗಳೊಂದಿಗೆ  ಸಂವಾದದಿ೦ದ ವಿದ್ಯಾರ್ಥಿಗಳಿಗೆ  ವಿಜ್ಙಾನ ವಿಷಯದಲ್ಲಿ ಹೆಚ್ಚಿನ ಅಸಕ್ತಿ ಮೂಡುವುದು, ಹಾಗಾಗಿ ಇಂತಹ  ಕಾರ‍್ಯಕ್ರಮಗಳು ನಡೆಯುತ್ತಿರಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ‍್ಯಕ್ರಮದ ಅಧ್ಯಕ್ಞತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ ಎ ರಾಘವೇಂದ್ರ ಅವರು ಮೂಲ ವಿಜ್ಙಾನದ ಅಧ್ಯಯನದಿಂದ ಮಂದಿನ ದಿನಗಳಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದು ತಿಳಿಸಿದರು. ಜಿಲ್ಲೆಯ ವಿವಿದ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಸುಮಾರು 800 ವಿದ್ಯಾರ್ಥಿಗಳು   ಮತ್ತ್ತು ಸಮಾರು 50 ಉಪನ್ಯಾಸಕರು ಪ್ರಯೋಜನ ಪಡೆದರು.
ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ! ವಿಜಯಲಕ್ಷ್ಮೀ ಸಿ ಭಟ್ ಗಣ್ಯರನ್ನು ಸ್ವಾಗತಿಸಿದರು, ರಸಾಯನ ಶಾಸ್ತೃ ಮುಖ್ಯಸ್ಥ  ಡಾ ಸುದರ್ಶನ ಶೆಟ್ಟಿ ಮತ್ತು  ಗಣಿತ ಶಾಸ್ತೃ ಮುಖ್ಯಸ್ಥ ಶ್ರೀ ರಾಕೇಶ್ ಉಳಿತ್ತಾಯ ವಂದನಾರ್ಪಣೆಗೈದರು. ಭೌತಶಾಸ್ತೃ ವಿಭಾಗದ ಮುಖ್ಯಸ್ಥ್ಸ ಶ್ರೀಮತಿ ಪ್ರತಿಬಾ ಸಿ ಆಚಾರ್ಯ  ನಿರೂಪಸಿದರು. ಸಂಯೋಜಕ ಭೌತಶಾಶ್ತೃ ವಿಭಾಗದ ಢಾ! ರಾಮು ಎಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply