ಉಡುಪಿ : ಶ್ರೀ ಗುರುರಾಯರ ಅಪೂರ್ವ ಅತೀ ವಿರಳ ಮೃತ್ತಿಕಾ ವೃಂದಾವನ ಸನ್ನಿಧಿ 

ಉಡುಪಿ : ಮುಂಭಾಗದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಉಳಿದ ಮೂರು ಪಾರ್ಶ್ವಗಳಲ್ಲಿ ಶ್ರೀ ರಾಮ ಶ್ರೀ ಕೃಷ್ಣ ಶ್ರೀ ವೇದವ್ಯಾಸರ ಸುಂದರ ಬಿಂಬಗಳ ಕೆತ್ತನೆಗಳನ್ನೊಳಗೊಂಡ ಪ್ರಾಯಃ ಅಪುರೂಪದಲ್ಲಿ ಅಪರೂಪ ಅತೀ ವಿರಳ ಎನ್ನಬಹುದಾದ ಶಿಲಾ ವೃಂದಾವನ ಇದಾಗಿದೆ.

ಜಗತ್ಪ್ರಸಿದ್ಧ , ಬಹುಶ್ರುತ ವಿದ್ವಾಂಸ ವಿದ್ಯಾವಾಚಸ್ಪತಿ ಪದ್ಮಶ್ರೀ ಪುರಸ್ಕೃತ ಡಾ ಬನ್ನಂಜೆ ಗೋವಿಂದಾಚಾರ್ಯರ ಸ್ವಗೃಹ ಉಡುಪಿ ಅಂಬಲಪಾಡಿಯ ಈಶಾವಾಸ್ಯಮ್ ಆವರಣದಲ್ಲಿ ಆಚಾರ್ಯರು ಹುಟ್ಟಿದ ವರ್ಷವೇ ಅವರ ಹಿರಿಯರು ಪ್ರತಿಷ್ಠಾಪಿಸಿದ ಶ್ರೀ ಗುರುರಾಯರ ವೃಂದಾವನ ಸನ್ನಿಧಿಯ ವೈಶಿಷ್ಟ್ಯ ಇದು .‌

ಪ್ರಸ್ತುತ ಸುಂದರವಾಗಿ ನವೀಕೃತಗೊಂಡು ಕಂಗೊಳಿಸುತ್ತಿರುವ ಈ ಸನ್ನಿಧಿ ಉಡುಪಿಯ ಎರಡನೇ ಅತೀ ಪ್ರಾಚೀನ ಗುರುರಾಯರ ಸನ್ನಿಧಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

 
 
 
 
 
 
 
 
 
 
 

Leave a Reply