ತುಳುನಾಡಧ್ವನಿಯ ಇನ್ನೊಂದು ಪ್ರಸ್ತುತಿ ” ತುಳುನಾಡ್ ಮ್ಯಾಟ್ರಿಮೋನಿ”

ತುಳುನಾಡಧ್ವನಿಯ ಇನ್ನೊಂದು ಪ್ರಸ್ತುತಿ “ತುಳುನಾಡ್ ಮ್ಯಾಟ್ರಿಮೋನಿ” ಇಂದು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಲೋಕಾರ್ಪಣೆಗೊಂಡಿತು.ಉಡುಪಿಯ ಉದ್ಯಮಿ ಪ್ರಸಾದ್ ರಾಜ್ ಕಾಂಚನ್,ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್,ಮೊಗವೀರ ಯುವ ಸಂಘಟನೆಯ ಉಡುಪಿಯ ಜಿಲ್ಲಾಧ್ಯಕ್ಷರಾದ ರಾಜೇಂದ್ರ ಸುವರ್ಣ ಹಿರಿಯಡಕ,ಸನ್ ಶೈನ್ ಟ್ರಾವೆಲ್ಸ್ ಮಣಿಪಾಲ್ ಇದರ ಮುಖ್ಯಸ್ಥೆ ಸರಿತಾ ಸಂತೋಷ್,ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಅಲೆವೂರು,ಪೋರ್ಥ್ ಪೋಕಸ್ ಕುಂದಾಪುರದ ನಿರ್ದೇಶಕ ಹಾಗೂ ಸಂಸ್ಥಾಪಕರಾದ ಗೌತಮ್ ನಾವಡ ಇವರುಗಳು ಮುಖ್ಯ ಅತಿಥಿಯಾಗಿದ್ದು ಶುಭಹಾರೈಸಿದರು.

ತುಳುಬಾಸೆ,ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯಾಚರಿಸುತ್ತುರುವ ತುಳುನಾಡ ಧ್ವನಿ ತುಳು ಅಂತರ್ಜಾಲ ಪತ್ರಿಕೆಯು, ವೆಬ್ ನ್ಯೂಸ್ ನ ಜೊತೆಗೆ ಯೂಟ್ಯೂಬ್ ಚಾನೆಲನ್ನು ಆರಂಭಿಸಿ ವಿವಿಧ ಕಾರ್ಯಕ್ರಮಗಳನ್ನು ಯೂಟ್ಯೂಬ್ ಚಾನೆಲ್ ಮೂಲಕ ಬಿತ್ತರಿಸುತ್ತಿದೆ..ಇದೀಗ. ತುಳುನಾಡಿನ ಮೊಗವೀರ ಸಮುದಾಯಕ್ಕೆ ಹೊಸತೊಂದು ಕೊಡುಗೆಯಾಗಿ ತುಳುನಾಡ್ ಮ್ಯಾಟ್ರಿಮೋನಿ.ಕಾಮ್(tulunad matrimony.com) ನ್ನು ಪ್ರಾರಂಭಿಸಿದ್ದು ಮೊಗವೀರ ಸಮುದಾಯದ ಅವಿವಾಹತರಿಗೆ ಉತ್ತಮ ವಿವಾಹ ವೇದಿಕೆಯನ್ನು ಕಲ್ಪಿಸಿಕೊಡಲು ಮುಂದಾಗಿದೆ.ಈ ವೇದಿಕೆಯಲ್ಲಿ ಸೂಕ್ತವಾದ ‌‌ ಜೀವನಸಂಗಾತಿಯನ್ನು ಹುಡುಕಿಕೊಳ್ಳಲು ಯುವಕ ಯುವತಿಯರಿಗೆ ವಿಪುಲವಾದ ಅವಕಾಶ ಇರುತ್ತದೆ..
ಮೊಗವೀರ ಸಮುದಾಯಕ್ಕೆ ಮೀಸಲಾದ ವೈವಾಹಿಕ ಪೋರ್ಟಲ್ ತುಳುನಾಡ್ ಮ್ಯಾಟ್ರಿಮೋನಿ.ಉಚಿತವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ಇರುವ ಇದರಲ್ಲಿ ನಿಜವಾದ ಮತ್ರು ಸರಿಯಾಗಿ ಪರಿಶೀಲಿಸಿದ ಪ್ರೊಫೈಲ್ ಗಳು,ಸಂಪರ್ಕ ವಿವರಗಳು,ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳಿವೆ.ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅವಿವಾಹಿತರಿಗೆ ತಮ್ಮ ಸರಿಯಾದ ಜೀವನ ಸಂಗಾತಿಯನ್ನು ಹುಡುಕಿಕೊಳ್ಳಲು “ತುಳುನಾಡ್” ಮ್ಯಾಟ್ರಿಮೋನಿ ಒಂದು ಉತ್ತಮ ವೇದಿಕೆಯಾಗಿದೆ.
ಕುಂದಾಪುರದ ಪೋರ್ಥ್ ಪೋಕಸ್ ನ ಸಂಸ್ಥಾಪಕರು & ನಿರ್ದೇಶಕರಾದ ಶ್ರೀ ವಿ.ಗೌತಮ್ ನಾವಡ ಇವರು ಈ ಒಂದು ಪೋರ್ಟಲನ್ನು ತಯಾರಿಸಲು ಸಹಕಾರಿಯಾಗಿರುತ್ತಾರೆ..
ಮೊಗವೀರ ಸಮುದಾಯದ ಅವಿವಾಹಿತ ಯುವಕ ಯುವತಿಯರು “ತುಳುನಾಡ್” ಮ್ಯಾಟ್ರಿಮೋನಿಯ ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯ ಮುಖ್ಯಸ್ಥರು ವಿನಂತಿಸಿಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply