VPL 2023 – ಭಟ್ಜೀಸ್ ಸೂಪರ್ ಕಿಂಗ್ಸ್ ತಂಡಕ್ಕೆ ಪ್ರಶಸ್ತಿ

ವೈದಿಕ ಪ್ರೀಮಿಯರ್ ಲೀಗ್ ಇದರ 4 ನೇ ಆವೃತ್ತಿಯು ಅತ್ಯಂತ ವೈಭವದಿಂದ ವೈದಿಕರಿಗಾಗಿ ಬರಿಮಾರು ಮಹಾಮಾಯ ದೇವಸ್ಥಾನದ ಮೈದಾನದಲ್ಲಿ ನಡೆಯಿತು.

ಕರ್ನಾಟಕ, ಮಹಾರಾಷ್ಟ್ರ, ಕೇರಳ, ದೆಹಲಿ ಹೀಗೆ ಹಲವಾರು ಕಡೆಯಿಂದ 300 ಕ್ಕಿಂತ ಹೆಚ್ಚು ವೈದಿಕರು ಹಾಗೂ ಅವರ ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು VPL 2023 ಯಶಸ್ವಿಯಾಗಿ ಜರಗಿತು.

ಸತತ ನಾಲ್ಕು ವರ್ಷದಿಂದ ಫೈನಲ್ ಗೆ ಪ್ರವೇಶ ಪಡೆಯುತ್ತಿರುವ ಸುಧೇಶ್ ಭಟ್ ಮೂಡಬಿದ್ರೆ ಇವರ ನೇತೃತ್ವದ ಭಟ್ಜೀಸ್ ಸೂಪರ್ ಕಿಂಗ್ಸ್ ತಂಡವು, ಈ ವರ್ಷವೂ ಕೂಡ ಫೈನಲ್ ಪಂದ್ಯಕ್ಕೆ ಪ್ರವೇಶಿಸಿ ರಾಕಿಂಗ್ ವೈದಿಕ್ಸ್ ಮುಂಬೈ ತಂಡವನ್ನು ಸೋಲಿಸಿ ಸತತ ಮೂರನೇ ಬಾರಿ VPL ಟ್ರೋಫಿಯನ್ನು ಪಡೆಯಿತು.

ರಾಕಿಂಗ್ ವೈದಿಕ್ಸ್ ಮುಂಬೈ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆಯಿತು.

( ಭಟ್ ಬ್ರದರ್ಸ್ ಹಾಗೂ ಅನಂತ ವೈದಿಕ್ಸ್ ಮಂಜೇಶ್ವರ ತಂಡವು ತೃತೀಯ ಹಾಗೂ ಚತುರ್ಥ ಬಹುಮಾನವನ್ನು ಪಡೆಯಿತು. )

ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಸೂಪರ್ ಕಿಂಗ್ಸ್ ತಂಡದ ನಾಯಕ ಸುಧೇಶ್ ಭಟ್, ಉತ್ತಮದಾ0ಡಿಗ ನಾಗಿ ಸೂಪರ್ ಕಿಂಗ್ಸ್ ತಂಡದ ರಾಮನಾಥ್ ಭಟ್, ಉತ್ತಮ ಎಸೆತಗಾರನಾಗಿ ರಾಕಿಂಗ್ ವೈದಿಕ್ಸ್ ಮುಂಬೈ ತಂಡದ ವಿನಾಯಕ ಭಟ್ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಮುಂಬೈ ತಂಡದ ಅಜಿತ್ ಭಟ್ ಇವರು ಪಡೆದರು.

ಪ್ರಶಸ್ತಿ ವಿತರಣೆ : VPL ಇದರ ಸಂಸ್ಥಾಪಕ ಹಾಗೂ ಮುಖ್ಯ ಸಂಯೋಜಕರಾದ ಪಂಡಿತ್ ಎಂ. ಕಾಶೀನಾಥ್ ಆಚಾರ್ಯ ಮಂಗಳೂರು, ಬರಿಮಾರು ಮಹಾಮಾಯಾ ದೇವಸ್ಥಾನದ ಧರ್ಮದರ್ಶಿಗಳಾದ ಬಿ. ರಾಕೇಶ್ ಪ್ರಭು ಹಾಗೂ ಹಲವು ಹಿರಿಯ ವೈದಿಕರು, ಗಣ್ಯವ್ಯಕ್ತಿಗಳು ಪ್ರಶಸ್ತಿಯನ್ನು ವಿತರಿಸಿದರು.

ಗೋಪಿ ಭಟ್ ಮಂಗಳೂರು ಕಾರ್ಯಕ್ರಮವನ್ನು ನಿರೂಪಿಸಿದರು.ಹರೀಶ್ ಭಟ್ ಮುಂಬೈ, ರಮೇಶ್ ಭಟ್ ಉಡುಪಿ ಸಹಕರಿಸಿದರು.

 
 
 
 
 
 
 
 
 
 
 

Leave a Reply