ಭಾರೀ ಮಳೆಗೆ ಉಡುಪಿ ಜಿಲ್ಲೆ ತತ್ತರ

ಉಡುಪಿ ಜಿಲ್ಲೆಯಲ್ಲಿ ಸತತ ಮೂರು ದಿನದಿಂದ ಮಳೆರಾಯನ ಆರ್ಭಟ ಜೋರಾಗಿದೆ. ನಿರಂತರ ಸುರಿಯುತ್ತಿರುವ ಮಳೆಗೆ ಉಳ್ತೂರು, ಬೇಳೂರು ತಗ್ಗು ಪ್ರದೇಶದಲ್ಲಿ ಭಾರಿ ಪ್ರಮಾಣದ ನೆರೆ ಉಂಟಾಗಿದೆ. ಗದ್ದೆಗಳೆಲ್ಲವೂ ಮುಳುಗಡೆಯಾಗಿದೆ. ರಸ್ತೆ ಯಾವುದು ಗದ್ದೆ ಯಾವುದು ಎಂದು ತೋರುತ್ತಿಲ್ಲ. ಇಂದು ಸಂಜೆಯಾದಂತೆ ಸ್ವಲ್ಪ ಮಳೆ ಕಮ್ಮಿಯಾಗುತ್ತಿದೆ.

Leave a Reply