Janardhan Kodavoor/ Team KaravaliXpress
23.6 C
Udupi
Thursday, December 8, 2022
Sathyanatha Stores Brahmavara

ಮಕ್ಕಳಲ್ಲಿ ದೇವರನ್ನು ಕಾಣುವುದೇ ಧರ್ಮ- ಹಫೀಜ್ ರಹೆಮಾನ್

ಅವಕಾಶ ಮತ್ತು ಸೂಕ್ತ ವೇದಿಕೆ ಒದಗಿದಾಗ ಮಕ್ಕಳಲ್ಲಿರುವ ಪ್ರತಿಭೆ ಹೊರ ಹೊಮ್ಮು ವುದು. ಬಾಲಕೃಷ್ಣರಾಗಿ, ಯಶೋದೆ ಕೃಷ್ಣರಾಗಿ ವಿವಿಧ ಭಂಗಿಗಳ ಛಾಯಾ ಚಿತ್ರಗಳನ್ನು ನೋಡುವಾಗ ಮನಸಿಗೆ ಸಂತಸವಾಗುವುದು ಎಂದು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಉಡುಪಿ ಶಾಖೆಯ ಮುಖ್ಯಸ್ಥ ಹಫೀಜ್ ರಹೆಮಾನ್ ಅಭಿಪ್ರಾಯ ಪಟ್ಟರು.

ಅವರು ಮಹಾತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಆಶ್ರಯ ದಲ್ಲಿ, ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಷಿಯೇಷನ್ ಉಡುಪಿ ವಲಯ ಮತ್ತು ಸುಮನಸಾ ಕೊಡವೂರು ಜಂಟಿ ಯಾಗಿ ಏರ್ಪಡಿಸಿದ್ದ “ಮುದ್ದುಕೃಷ್ಣ ಛಾಯಾ ಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಎ ಎಸ್ ಕೆ ಪಿ ಎ ಜಿಲ್ಲಾಧ್ಯಕ್ಷ ಕರಂದಾಡಿ ಶ್ರೀಧರ್ ಶೆಟ್ಟಿಗಾರ್ ಮಾತನಾಡಿ ನಮ್ಮ ಸಂಘಟನೆ 3500 ಸದಸ್ಯ ಬಲವುಳ್ಳ ಬಲಿಷ್ಠ ಸಂಘಟನೆಯಾಗಿದೆ. ನಾವು ನಿರಂತರ ಸಾಮಾಜಿಕ ಸಾಮಾಜಿಕ ಹಾಗು ಸದಸ್ಯಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತಿದ್ದೇವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಯವರು ಮಾತನಾಡಿ ನಮ್ಮ ಆಡಳಿತದ ಅವಧಿಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗು ಸಾಮಾಜಿಕ ಕಾರ್ಯ ಕ್ರಮಗಳನ್ನು ವಿಶೇಷವಾಗಿ ಆಯೋಜಿಸಿ ಕೊಂಡು ಬಂದಿದ್ದು, ಮುದ್ದು ಕೃಷ್ಣ ಛಾಯಾಚಿತ್ರ ಸ್ಪರ್ಧೆ ಕೂಡಾ ಕಾಳಜಿಯಿಂದ ಮಾಡಿದ್ದೇವೆ ಎಂದರು.

ಬಳಿಕ ಬಹುಮಾನಿತ ಚಿಣ್ಣರಿಗೆ ನಗದು ಹಾಗು ಗಿಫ್ಟ್ ಐಟಂ ಗಳನ್ನು ನೀಡಿ ಅಭಿನಂದಿ ಸಲಾಯಿತು. ಬಹುಮಾನಿತ ಮಕ್ಕಳ ಫೋಟೋಗಳನ್ನು ತೆಗೆದ ಛಾಯಾ ಚಿತ್ರ ಗಾರರಿಗೂ ಸನ್ಮಾನಿಸಲಾಯಿತು.

ಸ್ಪರ್ಧೆಗೆ ಬಂದಿರುವ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. 15ದಿನಗಳ ಕಾಲ ನಡೆಯುವ ಈ ಪ್ರದರ್ಶನವನ್ನು ಹಫೀಜ್ ರಹೆಮಾನ್ ಕ್ಯಾಮೆರಾ ಕ್ಲಿಕ್ ಮಾಡುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು, ವಲಯ ಗೌರವ ಅಧ್ಯಕ್ಷ ಶಿವ ಕೆ ಅಮೀನ್, ಸುಮನಸಾ ಕಾರ್ಯದರ್ಶಿ ಜೀವನ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಸುಕೇಶ್ ಅಮೀನ್ ಸ್ವಾಗತಿ ಸಿದರು. ವಲಯಾಧ್ಯಕ್ಷ ಪ್ರಕಾಶ್ ಎಸ್ ಕೊಡಂಕೂರ್ ಪ್ರಸ್ತಾಪಿಸಿದರು. ಪೂರ್ಣಿಮಾ ಜನಾರ್ದನ್ ವಂದಿಸಿದರು. ರಾಘವೇಂದ್ರ ಸೇರಿಗಾರ್ ನಿರೂಪಿಸಿದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!