ಉಡುಪಿಯಲ್ಲಿ ನಾಳೆ 5-6-2021 ರಂದು ನೀಡುವ ಲಸಿಕೆಯ ಬಗ್ಗೆ ಮಾಹಿತಿ

ನಾಳೆ 5-6-2021 ಶನಿವಾರ ಉಡುಪಿ ಜಿಲ್ಲಾಸ್ಪತ್ರೆಯ ಸಂತ ಸಿಸಿಲಿ ಲಸಿಕಾ ಕೇಂದ್ರದಲ್ಲಿ 50 ಕೋವಿಷೀಲ್ಡ್ ಎರಡನೇ ಡೋಸ್ ಲಸಿಕೆ ವಿತರಣೆ ನಡೆಯಲಿದ್ದು ಪ್ರಥಮ ಡೋಸ್ ತೆಗೆದು ಕೊಂಡು 84 ದಿನ ಆದವರಿಗೆ ಮಾತ್ರ ಅವಕಾಶವಿದೆ. ರಾಜ್ಯ ಸರಕಾರದ ಮಂಚೂಣಿ ಕಾರ್ಯಕರ್ತರಿಗೆ (18 to 45 age group) ಪ್ರಥಮ ಡೋಸ್ 200 ಕೋವಿಷೀಲ್ಡ್ ಲಸಿಕೆ ವಿತರಣೆ ನಡೆಯಲಿದೆ.

ಮಣಿಪಾಲ ನಗರ ಪ್ರಾಥಮಿಕ ಅರೋಗ್ಯ ಕೇಂದ್ರದ ಮಾಧವ ಕೃಪಾ ಶಾಲೆಯ ಲಸಿಕಾ ಕೇಂದ್ರದಲ್ಲಿ 300 ಡೋಸ್ ಹಾಗು ಉಡುಪಿ ಬಿ ಆರ್ ಆಸ್ಪತ್ರೆ 250 ಪ್ರಥಮ ಡೋಸ್ ಕೊವಾಕ್ಸಿನ್ ತೆಗೆದು ಕೊಂಡು ಆರು ವಾರ ಆದ ಸಾಮಾನ್ಯ ನಾಗರಿಕರಿಗೆ ಕೊವಾಕ್ಸಿನ್ ಎರಡನೇ ಡೋಸ್ ಲಸಿಕೆ ವಿತರಣೆ ನಡೆಯಲಿದೆ.

ಆದಿಉಡುಪಿ ಶಾಲೆಯ ಲಸಿಕಾ ಕೇಂದ್ರದಲ್ಲಿ ರಾಜ್ಯ ಸರಕಾರದ ಮಂಚೂಣಿ ಕಾರ್ಯಕರ್ತರಿಗೆ (18 to 45 age group) 250 ಪ್ರಥಮ ಡೋಸ್ ಕೋವಿಷೀಲ್ಡ್ ಲಸಿಕೆ ವಿತರಣೆ ನಡೆಯಲಿದೆ.

ಕುಕ್ಕಿಕಟ್ಟೆ ಪ್ರಾಥಮಿಕ ಅರೋಗ್ಯ ಕೇಂದ್ರದ ಲಸಿಕಾ ಕೇಂದ್ರದಲ್ಲಿ ರಾಜ್ಯ ಸರಕಾರದ ಮಂಚೂಣಿ ಕಾರ್ಯಕರ್ತರಿಗೆ (18 to 45 age group) 150 ಪ್ರಥಮ ಡೋಸ್ ಕೋವಿಷೀಲ್ಡ್ ಲಸಿಕೆ ವಿತರಣೆ ನಡೆಯಲಿದೆ.

ಜಿಲ್ಲೆಯ ಇತರ ಕೇಂದ್ರಗಳಲ್ಲಿ ಪ್ರತ್ಯೇಕ ಮಾದರಿಯಲ್ಲಿ ಲಸಿಕೆ ವಿತರಣೆ ನಡೆಯಲಿದ್ದು ಲಸಿಕೆ ಪಡೆಯಲಿಚ್ಛಿಸುವ ನಾಗರಿಕರು ಮುಂಚಿತವಾಗಿ ಲಸಿಕಾ ಕೇಂದ್ರಗಳಿಗೆ ಫೋನ್ ಮಾಡಿ ಮಾಹಿತಿ ಪಡೆದು ಕಂಡ ನಂತರವೇ ಹೋಗ ಬೇಕು ಎಂದು ಜಿಲ್ಲಾ ಅರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.ಮೇಲೆ ತಿಳಿಸಿದ ಯಾವುದೇ ಕೇಂದ್ರದಲ್ಲಿ ನಾಳೆ ನಲವತೈದು ವರ್ಷ ಮೇಲ್ಪಟ್ಟ ನಾಗರಿಕರಿಗೆ ಯಾವುದೇ ಮಾದರಿಯ ಲಸಿಕೆ ವಿತರಣೆ ಇರುವುದಿಲ್ಲ. ಆದುದರಿಂದ ಈ ವರ್ಗದ ನಾಗರಿಕರು ಲಸಿಕಾ ಕೇಂದ್ರಗಳಿಗೆ ಧಾವಿಸ ಬಾರದು ಎಂದು ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply