ಬಾಲಕಿಯರ ಪ ಪೂ ಕಾಲೇಜಿನ ಎನ್ ಎಸ್ ಎಸ್ ವಿಶೇಷ ಶಿಬಿರ

ಉಡುಪಿ ಬಾಲಕಿಯರ ಪ ಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಕಿದಿಯೂರು ಶ್ರೀ ವಿದ್ಯಾಸಮುದ್ರತೀರ್ಥ ಪ್ರೌಢಶಾಲೆಯಲ್ಲಿ ಪ್ರಾರಂಭವಾಯಿತು.ಶಿಬಿರವನ್ನು ಉದ್ಘಾಟಿಸಿದ ಕಿದಿಯೂರು ಉದಯಕುಮಾರ್ ಶೆಟ್ಟಿ ಮಾತನಾಡಿ ಎನ್ಎಸ್ಎಸ್ ನಿಂದ ಬದುಕುವ ಕಲೆ ಕಲಿಯಬಹುದು,ತರಗತಿಯ ನಾಲ್ಕು ಗೋಡೆಗಳ ಶಿಕ್ಷಣಕ್ಕಿಂತ ಇಲ್ಲಿ ವಾಸ್ತವ ಸಮಸ್ಯೆ,ಪರಿಹಾರ, ಸಮಾಜಸೇವೆ ಮತ್ತು ನಾಯಕತ್ವ ಗುಣಗಳ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ  ಭಾಗವಹಿಸಿದ ಎನ್ಎಸ್ಎಸ್  ವಿಭಾಗಾಧಿಕಾರಿ ಸವಿತಾ ಎರ್ಮಾಳ್ ಶಿಬಿರವು ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದರು.ಸಂಸ್ಥೆಯ ಪ್ರಾಂಶುಪಾಲೆ ಡಾ ಸುಮ ಎಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿದಿಯೂರು ಗ್ರಾ ಪಂ ಸದಸ್ಯೆ ಉಷಾ ಶೆಟ್ಟಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ  ನಿರುಪಮಾ ಪ್ರಸಾದ ಶೆಟ್ಟಿ, ಸದಸ್ಯ ವಿಶ್ವನಾಥ ಬಾಯರಿ ನಿವೃತ್ತ ಪ್ರಾಂಶುಪಾಲೆ ಕೆ ಕೆ ಹಂಸವತಿ,ನಿಸರ್ಗ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಿರೀಶ್,ಸುಜಯ ಕಿದಿಯೂರು,ರಾಮರಾಜ ಕಿದಿಯೂರು,ಯೊಗೀಶ  ಕೋಟ್ಯಾನ್,ರಾಮಕೃಷ್ಣ ,ಕಿದಿಯೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮ ಬಾಲಕಿಯರ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಬಿ ವಿದ್ಯಾರ್ಥಿ ನಾಯಕಿ ವಿಜೇತ ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಶಿಬಿರಾಧಿಕಾರಿ ಗಿರಿಜಾ ಹೆಗಡೆ ಸ್ವಾಗತಿಸಿದರು ಉಪನ್ಯಾಸಕಿ ಛಾಯ ಶೆಟ್ಟಿ ವಂದಿಸಿದರು,ಹಿರಿಯ ಉಪನ್ಯಾಸಕ ದಯಾನಂದ ಡಿ ಕಾರ್ಯಕ್ರಮ ನಿರೂಪಿಸಿದರು.
 
 
 
 
 
 
 
 
 
 
 

Leave a Reply