Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ತುಳು ಭಾಷೆಗೆ ಮಾನ್ಯತೆಗಾಗಿ ಪ್ರಯತ್ನ ನಿರಂತರ: ಡಾ.ಭರತ್ ಶೆಟ್ಟಿ ವೈ

ತುಳುನಾಡಿನ ಆಡುಭಾಷೆ ತುಳುವಾಗಿದ್ದು, ಇಲ್ಲಿನ ಜನತೆ ಬೆಂಗಳೂರಿಗರಂತೆ ಅಪ್ಪಟ ಶುದ್ದ ಮಾತನಾಡುತ್ತಾರೆ. ಯಾವುದೇ ಕಾರಣಕ್ಕೂ ಕನ್ನಡವನ್ನು ಯಾರೂ ವಿರೋಧಿಸುವುದಿಲ್ಲ. ತುಳು ಭಾಷಿಕಕರ ಬಗ್ಗೆ ಅಪಪ್ರಚಾರ ಸಲ್ಲದು ,ಇಂತಹ ತಪ್ಪು ಕಲ್ಪನೆಯಿಂದ ಹೊರಬರಬೇಕಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

ಕೋಡಿಕಲ್‍ನ ಹತ್ತು ಅಡ್ಡ ರಸ್ತೆ, ಮೂರು ಮುಖ್ಯ ರಸ್ತೆಗೆ ಸ್ಥಳೀಯ ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ಅವರು ಮನಪಾ ಸದಸ್ಯ ಅನುದಾನದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಥಮವಾಗಿ ಕನ್ನಡ ಸಹಿತ ತುಳು ನಾಮಫಲಕ ಅಳವಡಿಸಿದ್ದು ಇದರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ತುಳು ಲಿಪಿಯ ಮಾನ್ಯತೆಗೆ ಸಚಿವರು, ಶಾಸಕರು ,ಸಂಸದರ ಪ್ರಯತ್ನ ನಿರಂತರವಾಗಿದೆ. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಕಾರ್ಯವೂ ನಡೆಯುತ್ತಿದೆ. ಕೆಲವೊಂದು ವಿಚಾರಗಳು ಸಮಯ ತೆಗೆದುಕೊಂಡರು ಯಶಸ್ಸು ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು.

ತುಳು ಸಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಮಾತನಾಡಿ, ತುಳು ಅಕಾಡೆಮಿಯ ಭವನ ನಿರ್ಮಾಣಕ್ಕೆ 9 ಕೋಟಿ ಅನುದಾನ ವಿವಿಧ ಮೂಲಗಳಿಂದ ಶಾಸಕರು, ಪ್ರಾಧಿಕಾರದ ಅಧ್ಯಕ್ಷರು ಒದಗಿಸಿಕೊಟ್ಟಿದ್ದಾರೆ. ಕನ್ನಡವನ್ನು ತುಳುವರು ವಿರೋಧಿಸುತ್ತಾರೆ ಎಂಬ ಭಾವನೆಯಲ್ಲಿ ಸತ್ಯಾಂಶವಿಲ್ಲ. ನಾವು ಕನ್ನಡವನ್ನು ಅಭಿಮಾನದಿಂದ ಗೌರವಿಸಿಕೊಂಡೇ ತುಳುವನ್ನು ನಮ್ಮ ಆಡು ಭಾಷೆಯ ಮಾನ್ಯತೆಗೆ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮನಪಾ ಸದಸ್ಯ,ಕಿರಣ್ ಕುಮಾರ್ ಕೋಡಿಕಲ್ ಮನೋಜ್ ಕುಮಾರ್, ನಿಕಟ ಪೂರ್ವ ಉಪಮೇಯರ್ ಸುಮಂಗಳ,ಹಿರಿಯರಾದ ಗೋಪಾಲ್ ಕೋಟ್ಯಾನ್,ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕಾ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು,ತುಳುನಾಡು ಕುಡ್ಲ ಅಧ್ಯಕ್ಷ ಅಶ್ವಥ್ ತುಳುವೆ, ತುಳುವೆರ್ ಕುಡ್ಲ ಅಧ್ಯಕ್ಷ ಪ್ರತೀಕ್ ಪೂಜಾರಿ,ಪ್ರಮುಖರಾದ ಉಮೇಶ್ ಮಲರಾಯಸಾನ, ಹರಿಪ್ರಸಾದ್ ಶೆಟ್ಟಿ,ಸೀತಾರಾಮ್ ದಂಬೆಲ್,ಬೂತ್ ಅಧ್ಯಕ್ಷರು,ತುಳು ಸಂಘಟನೆಯ ಪದಾಧಿಕಾರಿಗಳು,ಸದಸ್ಯರ,ಸ್ಥಳೀಯ ನಾಗರೀಕರು ಉಪಸ್ಥಿತರಿದ್ದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!