ಕಾಬೆಟ್ಟು ಶಾಲೆ – ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನ

ಕಾರ್ಕಳ : ಕಾಬೆಟ್ಟು ಸರಕಾರಿ ಶಾಲೆಯ ದೈಹಿಕ ಶಿಕ್ಷಣ ಮತ್ತು ಯೋಗ ಶಿಕ್ಷಕ ನರೇಂದ್ರ ಕಾಮತ್ ಗೆ ಈ ವರ್ಷ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯು ಬಂದಿದ್ದು ಅವರನ್ನು ಸನ್ಮಾನಿಸಿ, ಅಭಿನಂದಿಸುವ ಕಾರ್ಯಕ್ರಮವು ಶಾಲಾ ಶತಮಾನೋತ್ಸವ ಸಮಿತಿಯ ವತಿಯಿಂದ ಶಾಲೆಯ ಅಸೆಂಬ್ಲಿ ಸಭಾಂಗಣದಲ್ಲಿ ಸೋಮವಾರ ನಡೆಯಿತು. 

ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೋಟರಿ ನಾಯಕ ಮೋಹನ್ ಶೆಣೈ, ನರೇಂದ್ರ ಕಾಮತ್ ಗೆ ಶಾಲು, ನೆನಪಿನ ಕಾಣಿಕೆ, ಫಲಪುಷ್ಪ ಸಹಿತ ಸನ್ಮಾನಿಸಿದರು. 

ಉತ್ತಮ ಶಿಕ್ಷಕರನ್ನು ಸಮಾಜವು ಗೌರವಿಸುವುದರ ಮೂಲಕ ಮಾನವ ಸಂಪನ್ಮೂಲದ ಅಭಿವೃದ್ಧಿಯು ತನ್ನಿಂದ ತಾನೇ ಆಗುತ್ತದೆ ಎಂದರು. ಪ್ರಾಥಮಿಕ ಶಾಲೆಯ ಪರವಾಗಿ ನಿವೇದಿತಾ ಕಾಮತ್, ಪ್ರೌಢ ಶಾಲೆಯ ಪರವಾಗಿ ಸುನೀತಾ ನಾಯಕ್ ಅಭಿನಂದನಾ ಭಾಷಣ ಮಾಡಿದರು.

 ಸನ್ಮಾನದ ಬಳಿಕ ನರೇಂದ್ರ ಕಾಮತ್ ಮಾತನಾಡಿ ನನಗೆ ದೊರೆತ ಪ್ರಶಸ್ತಿ ಮತ್ತು ಸನ್ಮಾನಗಳು ನನ್ನ ವಿದ್ಯಾರ್ಥಿಗಳಿಗೆ ದೊರೆತ ಸನ್ಮಾನ ಎಂದರು. 

ಪುರಸಭೆಯ ವಾರ್ಡ್ ಸದಸ್ಯೆ ರೆಹಮತ್ ಎನ್ ಶೇಕ್, ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ಆರೀಸ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಡೇಸಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಇಂದಿರಾ, ಉಭಯ ಶಾಲೆಗಳ ಶಿಕ್ಷಕರು, ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು. ಆರ್ ವೈಕುಂಠ ಶೆಣೈ ಸ್ವಾಗತಿಸಿ, ಪ್ರೇಮಾನಂದ ಪೈ ವಂದಿಸಿದರು. ರಾಜೇಂದ್ರ ಭಟ್ ಕೆ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply