ಜಿಲ್ಲಾ ‌ಮಟ್ಟದ ಪಂದ್ಯಾಟ ಸಂಪನ್ನ  

ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ವತಿಯಿಂದ ಉಡುಪಿ ಜಿಲ್ಲಾ ಮಟ್ಟದ ವಿವಿಧ  ಪಂದ್ಯಾಟ ಗಳು ಸರಸ್ವತಿ ವಿದ್ಯಾಲಯ ಸಿದ್ದಾಪುರ ಇವರ ಪ್ರಾಯೋಜಕತ್ವದಲ್ಲಿ ಸರಸ್ವತಿ ವಿದ್ಯಾಲಯ ಇಲ್ಲಿ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ವೈಶಾಲಿ ಯಡಿಯಾಳ  ಉಪನ್ಯಾಸಕರು ಸರಕಾರಿ  ಪ್ರಥಮ ದರ್ಜೆ ಕಾಲೇಜು ಭಟ್ಕಳ ಇವರು ನೆರವೇರಿಸಿ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಪಂದ್ಯಾಟಗಳಲ್ಲಿ ಭಾಗವಹಿಸುವಂತೆ ಹುರಿದುಂಬಿಸಬೇಕು ,ಹಾಗೂ ಒಂದು ನಿರ್ದಿಷ್ಟವಾದ ಗುರಿಯನ್ನು ಹೊಂದಿರಬೇಕು ಎಂಬ   ಹಿತನುಡಿಯೊಂದಿಗೆ ವಿದ್ಯಾರ್ಥಿಗಳಳಿಗೆ ಶುಭ ಹಾರೈಕೆಸಿದರು .ಜಿಲ್ಲಾ ಶಾರೀರಿಕ್ ಪ್ರಮುಖ್ ವಿಜಯ್ ಕುಮಾರ್ ಶೆಟ್ಟಿ  ಪಂದ್ಯಾಟ  ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ನಿಯಮಾನುಸಾರ ಕ್ರೀಡಾಳುಗಳು ಪಂದ್ಯದಲ್ಲಿ ಆಟ ಅಡುವುದು ಬಹಳ ಮುಖ್ಯ ಸೋಲು ಮತ್ತು ಗೆಲುವು  ಆಟಗಳಲ್ಲಿ  ಇದ್ದೆ ಇರುತ್ತದೆ ಅದನ್ನು ಸಮಾನವಾಗಿ ಸ್ವೀಕರಿಸಬೇಕು  ಎಂಬ ಸಂದೇಶದ ಮೂಲಕ ವಿದ್ಯಾರ್ಥಿಗಳಿಗೆ ಶುಭ ನುಡಿದರು ಶಾಲಾ ಸಂಚಾಲಕರಾದ ಶ್ರೀ ಗೋಪಾಲಕೃಷ್ಣ ಕಾಮತ  ಮಾತನಾಡಿ  ಸಂತೋಷದಿಂದ ಆಟವಾಡಬೇಕು, ಎಲ್ಲರಿಗೂ ಒಳ್ಳೆದಾಗಲಿ ಎಂದು ಶುಭ ಕೋರಿದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ಜಿ ಪಾಂಡುರಂಗ ಪೈ ಕಾರ್ಯಕ್ರಮದ ಯಶಸ್ವಿಗೆ  ಶುಭ ಹಾರೈಸಿದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ಕಾರ್ಯದರ್ಶಿ  ಶ್ರೀ ಮಹೇಶ ಹೈಕಾಡಿ ಹಾಗೂ  ಸಂಸ್ಥೆಯ  ಪ್ರಾಂಶುಪಾಲರಾದ ಶ್ರೀಮತಿ ಸೌಭಾಗ್ಯ ಜಿ ಹೆಗಡೆ , ಜಿಲ್ಲಾ ಕ್ರೀಡಾ ಕೂಟ ಪ್ರಮುಖ್ ಶ್ರೀಮತಿ ಉಷಾ  ಶೆಟ್ಟಿ ಉಪಸ್ಥಿತರಿದ್ದರು  ವಿವಿಧ ವಿದ್ಯಾಭಾರತಿ ವಿದ್ಯಾಸಂಸ್ಥೆಗಳ ಶಿಕ್ಷಕರು,ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಖೋ ಖೋ, ಕಬಡ್ಡಿ,ವಾಲಿಬಾ ತ್ರೋಬಾಲ್ ಪಂದ್ಯಾಟಗಳು ನಡೆದವು.
     
  ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. 
     
  •    ಸಮಾರಂಭದಲ್ಲಿ  ವಿವಿಧ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿದ್ದರು.  ಶ್ರೀಮತಿ ಉಷಾ ಶೆಟ್ಟಿ ಮಾತಾಜಿಯವರು ವಿಜೇತರ  ಪಟ್ಟಿ  ವಾಚಿಸಿದರು, ಶ್ರೀಮಾತಿ ನವ್ಯಾ ಮಾತಾಜಿಯ ಹಾಗೂ ಶಶಿಕಲಾ  ಕಾರ್ಯಕ್ರಮವನ್ನು ಶ್ರೀಮತಿ ಸುಮನಾ ಮಾತಾಜಿ ಹಾಗೂ ಸ್ಮಿತಾ ಮಾತಾಜಿ ಸ್ವಾಗತಿಸಿದರು. ಜ್ಯೋತಿ ಹಾಗೂ ಅಶ್ವಿನಿ ವಂದಿಸಿದರು.
 
 
 
 
 
 
 
 
 
 
 

Leave a Reply