ಬ್ರಹ್ಮಾವರ ಸಸ್ಯ ಮೇಳ, ಆಹಾರೋತ್ಸವಕ್ಕೆ ಶಾಸಕ ಯಶಪಾಲ್‌ಚಾಲನೆ

ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಆರಂಭ ಹೆಚ್ಚಿನ ಒತ್ತಡಕ್ಕೆ ಸಿದ್ಧ

ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ೩೫೦ಎಕರೆ ಜಾಗವಿದ್ದು, ಅಲ್ಲಿ ಕೃಷಿ ಚಟುವಟಿಕೆಗೆ ಪೂರಕವಾಗಲು ಮತ್ತು ಯುವಕರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಲು ಕೃಷಿ ಕಾಲೇಜನ್ನು ಆರಂಭಿಸಲು ಎಲ್ಲ ರೀತಿಯಲ್ಲೂ ಸರ್ಕಾರಕ್ಕೆ ಒತ್ತಡ ಹೇರಲು ಸಿದ್ಧ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.

ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯ ಆವರಣದಲ್ಲಿ ಬ್ರಹ್ಮಾವರ ರೋಟರಿ ರಾಯಲ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆ, ನಿರ್ಮಲಾ ಪ್ರೌಢಶಾಲೆಯ ಇಂಟರಾಕ್ಟ್ ಕ್ಲಬ್ ಮತ್ತು ನಿರ್ಮಲ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಶನಿವಾರ ಆರಂಭವಾದ ಬೃಹತ್ ಸಸ್ಯಮೇಳ ಮತ್ತು ಆಹಾರೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಕೃಷಿಯನ್ನೇ ಆಧಾರವಾಗಿಟ್ಟುಕೊಂಡು ಜೀವನ ಸಾಗಿಸುವವರೇ ಹೆಚ್ಚು. ಕೊರೊನಾ ಸಮಯದಲ್ಲಿಯೂ ಕೃಷಿಯೇ ನಮ್ಮೆಲ್ಲರನ್ನು ರಕ್ಷಿಸಿದ್ದು. ಕೃಷಿ ನಮ್ಮ ದಿನನಿತ್ಯದ ಜೀವನದ ಒಂದು ಭಾಗವಾಗಬೇಕಿದ್ದರೆ, ನಾವು ಅದರಲ್ಲೂ ಯುವ ಜನತೆ ಕೃಷಿಯತ್ತ ಮುಖ ಮಾಡುವಂತಾಗಬೇಕು ಎಂದರು. ಬ್ರಹ್ಮಾವರ ರೋಟರಿ ರಾಯಲ್‌ನ ಅಧ್ಯಕ್ಷ ಅಭಿರಾಮ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ಪರಿಸರದ ಪ್ರಗತಿಪರ ಕೃಷಿಕರಾದ ವೆಂಕಟರಮಣ ಸಾಮಂತ್, ಕೋಟ ಹಂದಟ್ಟಿನ ಜಾನಕಿ ಹಂದೆ, ಹಾರಾಡಿಯ ಯೋಗೀಶ ಆಚಾರ್ಯ, ಕರ್ಜೆಯ ಸೋಮ ನಾಯ್ಕ ಅವರನ್ನು ರೋಟರಿ ರಾಯಲ್ ವತಿಯಿಂದ ಸನ್ಮಾನಿಸ ಲಾಯಿತು.

ರೋಟರಿಯ ಜಿಲ್ಲಾ ಗವರ್ನರ್ ದೇವಾನಂದ, ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ÷್ಮಣ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಧನಂಜಯ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ರೋಟರಿಯ ಸಹಾಯಕ ಗವರ್ನರ್ ಅಲ್ವಿನ್ ಎಸ್ ಕ್ವಾಡ್ರಸ್, ವಲಯ ಸೆನಾನಿ ರಾಜಾರಾಮ ಐತಾಳ, ನಿರ್ಮಲಾ ಪ್ರೌಢಶಾಲೆಯ ಸಂಚಾಲಕಿ ಸಿಸ್ಟರ್ ಫ್ಲೋರಿನ್ ಡಿಸೋಜಾ, ಮುಖ್ಯ ಶಿಕ್ಷಕಿ ಟೀನಾ ಲಸ್ರಾಡೋ, ರೋಟರಿಯ ಬಿ.ಎಸ್.ಭಟ್, ರಾಜಾರಾಮ ಭಟ್, ವಿಜಯೇಂದ್ರ ಶೆಟ್ಟಿ ಇದ್ದರು. ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಜ್ಞಾನವಸಂತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧ್ಯಕ್ಷ ಅಭಿರಾಮ ನಾಯಕ್ ಸ್ವಾಗತಿಸಿದರು. ಶ್ರೀಕಾಂತ ಸಾಮಂತ್ ಕಾರ್ಯಕ್ರಮ ನಿರೂಪಿಸಿದರು. ನಂತರ ಮಣ್ಣಿನ ಸಂರಕ್ಷಣೆ ಮತ್ತು ಫಲವತ್ತತೆ, ಸಸಿಗಳ ಸಂರಕ್ಷಣೆ, ಪೋಷಣೆ, ಮತ್ತು ಕೈತೋಟದ ಬಗ್ಗೆ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ಜಯಪ್ರಕಾಶ್‌ಮತ್ತು ಡಾ.ಚೈತನ್ಯ ಎಚ್.ಎಸ್ ಮತ್ತು ಉಡುಪಿ ಜಿಲ್ಲಾ ತೋಟ ಗಾರಿಕಾ ಇಲಾಖೆಯ ಸಹನಿರ್ದೇಶಕ ಗುರುಪ್ರಸಾದ್ ತೋಟಗಾರಿಕಾ ಇಲಾಖೆಯ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

 
 
 
 
 
 
 
 
 
 
 

Leave a Reply