ಸಂತ ಮೇರಿ ಮಹಾವಿದ್ಯಾಲಯ,ಶಿರ್ವ:ಅಂತರಾಷ್ಟ್ರೀಯ ಯೋಗ ದಿನಾಚರಣೆ

ಶಿರ್ವ:ಸಂತ ಮೇರಿ ಮಹಾವಿದ್ಯಾಲಯದ ಎನ್.ಸಿ.ಸಿ ಘಟಕದೀಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯುಷ್ ಇಲಾಖೆ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಆಯುಷ್ ಮಂತ್ರಾಲಯವು ನೀಡಿರುವ ಮಾರ್ಗಸೂಚಿಯಂತೆ ಬಿ ವಿತ ಯೋಗ,ಬಿ ಏಟ್ ಹೋಂ ಘೋಷವಾಕ್ಯದೊಂದಿಗೆ ಮನೆಯಲ್ಲೆ ಯೋಗ ಮಾಡುವ ಮೂಲಕ ಆಚರಿಸಲಾಯಿತು.

ಕೊರೋನಾ ಪ್ರಸ್ತುತ ಯೋಗ ದಿನವನ್ನು ಮನೆಯಿಂದಲೇ ಆಚರಿಸಲು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಸಾಂಕೇತಿಕವಾಗಿ ಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಯುವಕರನ್ನು ಪ್ರೇರೇಪಿಸಿದರು.ಕಾಲೇಜಿನ ಪ್ರಾಂಶುಪಾಲರು ಡಾ.ಹೆರಾಲ್ಡ್ ಐವನ್ ಮೋನಿಸ್ ರವರು ಎಲ್ಲರಿಗೂ ಶುಭಹಾರೈಸಿದರು.

ಉಡುಪಿ,ದಕ್ಷಿಣ ಕನ್ನಡ,ಚಿಕ್ಕಮಂಗಳೂರು,ಬೆಳಗಾವಿ, ಧಾರವಾಡ,ಉತ್ತರ ಕನ್ನಡ ಸೇರಿದಂತೆ ವಿವಿಧ ಶಾಲಾ ಕಾಲೇಜಿನ ಹಾಗೂ ಸಾರ್ವಜನಿಕರು ಕಾಲೇಜು ಹಮ್ಮಿಕೊಂಡಿರುವ ಯೋಗ ಫ್ರಮ್ ಹೋಂ ಕಾಂಪಿಟೇಷನ್ನಲ್ಲಿ ಭಾಗವಹಿಸಿ,ಯೋಗ ಮಾಡುವ ಮೂಲಕ ಆಚರಿಸಿದರು..

21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ,ಉಡುಪಿ ಘಟಕದ ಆಡಳಿತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪರ್ಮಿಂದರ್ ಸಿಂಘ್,ಎಲ್ಲಾ ಕಾಲೇಜಿನ ಎನ್.ಸಿ.ಸಿ,ಅಧಿಕಾರಿಗಳು, ಘಟಕದ ಸಹ ಸಂಯೋಜಕಿ ಯಶೋದ ,ಸೀನಿಯರ್ ಕ್ಯಾಡೆಟ್ ಅಂಡರ್ ಆಫೀಸರ್ ರಾಮದಾಸ್,ಜೂನಿಯರ್ ಅಂಡರ್ ಆಫೀಸರ್ ಪ್ರವಿತ ಮತ್ತು ರಿಯಾನ್ ರಿಷಿ ಅಲ್ಫೋನ್ಸೋ , ಕಾಲೇಜಿನ ಅಧ್ಯಾಪಕ-ಅಧ್ಯಾಪಕೇತರ ಬಂಧುಗಳು,ಹಾಗೂ ಎಲ್ಲಾ ಕ್ಯಾಡೆಟ್ ಗಳು ಸಹಕರಿಸಿದರು.

 
 
 
 
 
 
 
 
 
 
 

Leave a Reply