ಯೋಗವು ಭರವಸೆಯ ಆಶಾಕಿರಣ ಎಂದ ಪ್ರಧಾನಿ ಮೋದಿ

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಆರೋಗ್ಯಕ್ಕಾಗಿ ಯೋಗ ಎಂಬ ಮೂಲ ಮಂತ್ರದೊಂದಿಗೆ ದೈಹಿಕ ಸ್ವಾಸ್ಥ್ಯ ಕಾಪಾಡುವುದು ಮುಖ್ಯ ಎಂದರು.

ಯೋಗಾಭ್ಯಾಸದಿಂದ ನಮ್ಮ ಆತ್ಮಬಲ ಹೆಚ್ಚಾಗಲಿದ್ದು, ವಿಶ್ವದಲ್ಲಿನ ನಕಾರಾತ್ಮಕ ಶಕ್ತಿಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಯೋಗ ಭರವಸೆಯ ಅಶಾಕಿರಣವಾಗಿದ್ದು, ನಿರಂತರ ಯೋಗಾಭ್ಯಾಸದಿಂದ ನಮ್ಮಲ್ಲಿನ ವಿಚಾರ ಶಕ್ತಿ ಹೆಚ್ಚಾಗಲಿದೆ. ಕೋವಿಡ್ ಸೋಂಕಿನ ನಡುವೆಯೂ ಎಲ್ಲೆಡೆ ಯೋಗ ದಿನ ಆಚರಣೆ ಮಾಡಲಾಗುತ್ತಿದ್ದು, ನಮ್ಮಲ್ಲಿ ಉತ್ಸಾಹ ಕಡಿಮೆಯಾಗಿಲ್ಲ, ಯೋಗ ಮಾಡುವ ಮೂಲಕ ನಮ್ಮ ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು.

ಈ ವರ್ಷ ‘ಯೋಗ ಫಾರ್ ವೆಲ್ನೆಸ್’ ಎಂಬ ಧ್ಯೇಯದೊಂದಿಗೆ ಯೋಗಾಚರಣೆ ನಡೆಸಲಾಗುತ್ತಿದ್ದು, ಇದು ಜನರನ್ನು ಯೋಗ ಮಾಡಲು ಮತ್ತಷ್ಟು ಪ್ರೋತ್ಸಾಹಿಸುವ ಕೆಲಸವಾಗಿದೆ ಎಂದರು. ‘ಒಂದು ವಿಶ್ವ, ಒಂದು ಆರೋಗ್ಯ’ ಧ್ಯೇಯದೊಂದಿದೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಭಾರತ ಸಹಯೋಗದಲ್ಲಿ ಎಂ-ಯೋಗ ಎಂಬ ಆಪ್ ಬಿಡುಗಡೆ ಮಾಡಲಾಗಿದೆ. ಇದು ಆನ್ ಲೈನ್ ವಿಡಿಯೋಗಳ ಮೂಲಕ ವಿವಿಧ ಭಾಷೆಯಲ್ಲಿ ಯೋಗ ತರಬೇತಿ ಪಡೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

 

 

 
 
 
 
 
 
 
 
 
 
 

Leave a Reply