ಸೆಪ್ಟೆಂಬರ್ 21ರಿಂದ ಶಾಲಾ ಕಾಲೇಜುಗಳು ಓಪನ್

ಸೆಪ್ಟೆಂಬರ್ 21 ರಿಂದ 9ನೇ ತರಗತಿಯಿಂದ 12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳು ತೆರೆಯಲಿದ್ದು ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಇಲಾಖೆಯು ಇಂದು ಎಸ್.ಓ.ಪಿ (ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್) ಬಿಡುಗಡೆ ಮಾಡಿದೆ.

  1. ವಿದ್ಯಾರ್ಥಿಗಳು ನೋಟ್ ಪುಸ್ತಕ, ನೀರಿನ ಬಾಟಲ್, ಲೇಖನ ಸಾಮಗ್ರಿಗಳನ್ನು ವಿನಿಮಯ ಮಾಡಿಕೊಳ್ಳುವಂತಿಲ್ಲ.
  2. ಅಸೆಂಬ್ಲಿ, ಕ್ರೀಡೆ ನಡೆಯುವಂತಿಲ್ಲ.
  3. ಶಿಕ್ಷಕರು, ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪೋಷಕರ ಒಪ್ಪಿಗೆ ಪತ್ರ ವಿದ್ಯಾರ್ಥಿಯ ಬಳಿ ಇರಬೇಕು.
  4. ಡೆಸ್ಕ್, ಕುರ್ಚಿಗಳ ನಡುವೆ 6 ಅಡಿ ಅಂತರವನ್ನು ಕಾಪಾಡಬೇಕು.
  5. ಆವರಣದಲ್ಲಿರುವ ಕ್ಯಾಂಟೀನ್, ಕ್ಯಾಫಿಟೇರಿಯ /ಮೆಸ್ ತೆರೆಯು ವಂತಿಲ್ಲ.
  6. ಶಿಕ್ಷಕರ ಕೊಠಡಿಗಳಲ್ಲಿ, ಪ್ರಯೋಗಾಲ ಯಗಳಲ್ಲಿ, ಶಾಲಾ ವಾಹನಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು.
  7. ಸರದಿ ಸಾಲಿನಲ್ಲಿ ನಿಲ್ಲಲು 6 ಅಡಿ ಅಂತರದಲ್ಲಿ ಗುರುತನ್ನು ಹಾಕಬೇಕು.
  8. ಪ್ರತಿಯೊಬ್ಬರೂ ಆರೋಗ್ಯ ಸೇತು ಆಪ್ ಹಾಕಿಕೊಳ್ಳಬೇಕು.
  9. ಶೇ. 50 ರಷ್ಟು ಮಾತ್ರ ಬೋಧಕ ಬೋಧಕೇತರ ಸಿಬ್ಬಂದಿ ಇರಬೇಕು.
  10. ಆಡಳಿತ ಮಂಡಳಿ ವತಿಯಿಂದ ಥರ್ಮಲ್ ಗನ್, ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆ ಮಾಡಬೇಕುಶಾಲೆ ಕಾಲೇಜುಗಳ ಸ್ವಚ್ಛತೆಯನ್ನು ಪರಿಣಾಮಕಾರಿಯಾಗಿ ಕಾಪಾಡಬೇಕು.
 
 
 
 
 
 
 
 
 
 
 

Leave a Reply