ಸಾಣೂರು ಮಠದ ಕೆರೆ ಪರಿಸರ ಸ್ವಚ್ಛತಾ ಅಭಿಯಾನ

ಗ್ರಾಮ ಪಂಚಾಯತ್ ಸಾಣೂರು, ರಾಜರಾಜೇಶ್ವರಿ ಎಜ್ಯುಕೇಶನ್ ಟ್ರಸ್ಟ್ ಮತ್ತು ಲಕ್ಷ್ಯ ಸ್ಪೋರ್ಟ್ಸ್ ಕ್ಲಬ್ ಸಾಣೂರು ಇದರ ವತಿಯಿಂದ ಮಠದಕೆರೆ ಸ್ವಚ್ಛತಾ ಅಭಿಯಾನವು ಮಾರ್ಚ್ 17 ರ ರವಿವಾರದಂದು ಬೆಳಿಗ್ಗೆ 8:00 ಗಂಟೆಯಿಂದ ಸಾಣೂರು ಪಂಚಾಯತ್ ವ್ಯಾಪ್ತಿಯ ‘ಮಠದಕೆರೆ ಪರಿಸರ’ದಲ್ಲಿ ನಡೆಯಿತು.

ಇತಿಹಾಸ ಪ್ರಸಿದ್ಧ ಮಠದ ಕೆರೆ ಪರಿಸರದಲ್ಲಿ ಕೆರೆಯ ಸುತ್ತಲೂ ವಾಕಿಂಗ್ ಟ್ರ್ಯಾಕ್ ,ಉದ್ಯಾನವನ, ಓಪನ್ ಜಿಮ್, ಪಕ್ಕದಲ್ಲಿಯೇ ಆಟದ ಮೈದಾನದ ಸುತ್ತಮುತ್ತ ಬೆಳೆದಿರುವ ಗಿಡಗಂಟಿಗಳನ್ನು ಕಡಿದು ಪರಿಸರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛಪಡಿಸಲಾಯಿತು.

ಕೆರೆಯ ಸುತ್ತಲೂ ವೈವಿಧ್ಯಮಯವಾದ ಪ್ರಾಣಿ_ ಪಕ್ಷಿಗಳ ಸುಂದರ ಕಲಾ ಕೃತಿ ರೂಪದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಿರುವುದರಿಂದ ಕೆರೆಯ ಸುತ್ತಲಿನ ನಡಿಗೆ ಪಥ ಮತ್ತು ಓಪನ್ ಜಿಮ್ ನಲ್ಲಿ ವ್ಯಾಯಾಮ ಮಾಡಲು ದಿನಂಪ್ರತಿ ನೂರಾರು ಜನ ಭೇಟಿ ನೀಡುತ್ತಲಿದ್ದು, ಸುಂದರ ಪ್ರವಾಸಿ ತಾಣವಾಗಿ ರೂಪುಗೊಂಡಿದೆ.

ಈ ಪರಿಸರಕ್ಕೆ ಪ್ರವಾಸಿಗರನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಿಂದ ಸೆಳೆಯಲು ಪರಿಸರವನ್ನು ಸ್ವಚ್ಛವಾಗಿರಿಸುವ ದೃಷ್ಟಿಯಿಂದ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು.

ಸಾಣೂರು ಗ್ರಾಮ ಪಂಚಾಯತ್ ನ ನೇತೃತ್ವದಲ್ಲಿ ಆಯೋಜಿಸಲಾದ ಈ ಅಭಿಯಾನದಲ್ಲಿ ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್, ದ ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಶ್ರೀ ಸಾಣೂರು ನರಸಿಂಹ ಕಾಮತ್, ಉಪಾಧ್ಯಕ್ಷರಾದ ಯಶೋಧ ಶೆಟ್ಟಿ, ಮಾಜಿ ತಾಲೂಕ್ ಪಂಚಾಯತ್ ಸದಸ್ಯರಾದ ಪ್ರವೀಣ್ ಕೋಟ್ಯಾನ್, ಪಂಚಾಯತ್ ಸದಸ್ಯರಾದ ವಸಂತ ಪೂಜಾರಿ ಅಮಿತಾ.ಪಿ. ಶೆಟ್ಟಿ, ಮಂಜುನಾಥ್ ಶೆಟ್ಟಿ,ರಾಜೇಶ್ವರಿ ಎಜುಕೇಶನ್ ಟ್ರಸ್ಟ್ ನ ನಿರ್ದೇಶಕರಾದ ಶ್ರೀ ದೇವಿ ಪ್ರಸಾದ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಮಧು, ಏರ್ನಡ್ಕ ವಿಶ್ವನಾಥ್ ಶೆಟ್ಟಿ ಹಾಗೂ ಸಾಣೂರು ಗ್ರಾಮ ಪಂಚಾಯತ್ ನ ಸಿಬ್ಬಂದಿ ವರ್ಗ ಹಾಗೂ ಲಕ್ಷ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರಾದ ಸೂರ್ಯ ಪೂಜಾರಿ, ಸುಜಿತ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply